Advertisement

330 ಕಿಮೀ ರಸ್ತೆ ನಿರ್ಮಾಣ

06:34 PM Aug 28, 2020 | Suhan S |

ಗುತ್ತಲ: ಮುಂದಿನ ದಿನಗಳಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಹಾವೇರಿ ಹಾಗೂ ಗದಗ ಜಿಲ್ಲೆಯಲ್ಲಿ 230 ಕೋಟಿ ರೂ. ವೆಚ್ಚದಲ್ಲಿ 330 ಕಿ.ಮೀ. ರಸ್ತೆ ನಿರ್ಮಿಸಲಾಗುವುದು ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

Advertisement

ಹಾವನೂರ ಗ್ರಾಮದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಲ್ಲಿ ಹಾವನೂರಿನಿಂದ ಮರೋಳ ಗ್ರಾಮದ ವರೆಗೆ 11.62 ಕಿ.ಮೀ. ರಸ್ತೆ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಹಾವೇರಿ ಜಿಲ್ಲೆಯಲ್ಲಿ 169 ಕಿ.ಮೀ. ಹಾಗೂ ಗದಗ ಜಿಲ್ಲೆಯಲ್ಲಿ 161 ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗುವುದು. ಹಾನಗಲ್‌, ಶಿಗ್ಗಾಂವಿ, ರಾಣೆಬೆನ್ನೂರ, ಬ್ಯಾಡಗಿ ಹಾಗೂ ಸವಣೂರು ತಾಲೂಕುಗಳಲ್ಲಿ ಶೀಘ್ರವೇ ಈ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು ಹೇಳಿದರು. ಈ ರಸ್ತೆ ಗುಣಮಟ್ಟದಿಂದ ಕೂಡಿರುವಂತೆ ತಾವೆಲ್ಲರೂ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಈ ರಸ್ತೆಯ ನಿರ್ವಹಣೆಗೆ 2 ಕೋಟಿಗೂ ಅಧಿ ಕ ಹಣ ಮೀಸಲಿದೆ. ರಸ್ತೆ ಸರ್ವ ಋತುಗಳಲ್ಲಿ ಬಳಕೆಗೆ ಯೋಗ್ಯವಾಗಿರುತ್ತದೆ ಎಂಬ ವಿಶ್ವಾಸ ನನ್ನದು ಎಂದರು.

ಕೋವಿಡ್‌ ಹಿನ್ನೆಲೆಯಲ್ಲಿ ಎಲ್ಲರೂ ಆದಷ್ಟು ಆರೋಗ್ಯದ ಬಗ್ಗೆ ಹೆಚ್ಚು ಮಹತ್ವ ಹಾಗೂ ಕಾಳಜಿ ವಹಿಸಬೇಕು. ಆರೋಗ್ಯದಿಂದ ಇದ್ದರೆ ಏನನ್ನಾದರೂ ಸಾಧಿಸಬಹುದೆಂದು ತಿಳಿಸಿದರು.ಶಾಸಕ ನೆಹರು ಓಲೇಕಾರ ಮಾತನಾಡಿ, ಹಾವನೂರಿನಿಂದ ನೆಗಳೂರ, ಕೋಡಬಾಳ ಗ್ರಾಮದ ಮೂಲಕ ಮರೋಳ ಗ್ರಾಮದ ವರೆಗೆ ರಸ್ತೆ ನಿರ್ಮಾಣ ಮಾಡಬೇಕೆಂಬ ರೈತರ ಬಹುದಿನಗಳ ಬೇಡಿಕೆ ಈಡೇರಿಕೆಗೆ ಇಂದು ಕಾಲ ಕೂಡಿಬಂದಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಪರ್ಕ ರಸ್ತೆಗಳ ನಿಮಾರ್ಣ ಅತೀ ಅವಶ್ಯಕವಾಗಿತ್ತು. ಈ ನಿಟ್ಟಿನಲ್ಲಿ ಸಂಸದರು ಇದನ್ನು ಈಡೇರಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಲಕ್ಷ¾ವ್ವ ಗೊರವರ, ಸಿದ್ದರಾಜ ಕಲಕೋಟಿ, ಕೆಸಿಸಿ ಬ್ಯಾಂಕ್‌ ನಿರ್ದೇಶಕ ಮುತ್ತಣ್ಣ ಯಲಿಗಾರ, ಮಾರುತಿ ಗೊರವರ, ಸಿದ್ದಪ್ಪ ಕನವಳ್ಳಿ, ದ್ಯಾಮನಗೌಡ ಹೊನ್ನನಗೌಡ್ರ, ಸಂತೋಷ ಸೊಪ್ಪಿನ, ವಿಜಯರಡ್ಡಿ ಮರ್ಚರಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ಶಾಂತಪ್ಪ ಗೊಣ್ಣಿ, ಗೋಪಾಲ ಗೊಣ್ಣಿ, ಪರಮೇಶ ಇಟಗಿ, ಚನ್ನಬಸಪ್ಪ ತಳವಾರ, ಸಂತೋಷ ಮರ್ಚರಡ್ಡಿ, ಮಾಲತೇಶ ಓಲೇಕಾರ, ಸುರೇಶ ಬಿಷ್ಟನಗೌಡ್ರ, ಕುಮಾರ ಮಾಹುರ, ಬಸವರಾಜ ಮಣ್ಣೂರ, ವೀರಯ್ಯ ಸುತ್ತೂರಮಠ ಸೇರಿದಂತೆ ಹಾವನೂರ, ನೆಗಳೂರ, ನೀರಲಗಿ, ಮರೋಳ ಗ್ರಾಮಸ್ಥರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next