ಆಲಮೇಲ: ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತಗೊಳ್ಳಬಾರದು ಎಂದು ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದು ಅದನ್ನು ಬಳಸಿಕೊಂಡು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವದು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಪ್ರೌಢಶಾಲಾ ಕಟ್ಟಡ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಬಡ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತಗೊಳ್ಳಬಾರದು ಎಂದು ಹಿಂದಿನ ಅವಧಿಯಲ್ಲಿ ಹೆಣ್ಣು ಮಕ್ಕಳ ಪ್ರೌಢಶಾಲೆ ಆರಂಭಿಸಲಾಗಿತ್ತು. ಅದರ ಕಟ್ಟಡ ನಿರ್ಮಾಣ ಆಗದೆ ವಂಚಿತಗೊಂಡ ಶಾಲೆಗಳಿಗೆ ಅನುದಾನ ಮಂಜುರು ಮಾಡಿಸಲಾಗಿದ್ದು ಒಂದು ವರ್ಷದೊಳಗಾಗಿ ಕಟ್ಟಡ ನಿರ್ಮಾಣ ಮಾಡಿ ತರಗತಿ ಆರಂಭಿಸುವ ಕೆಲಸ ಮಾಡಲಾಗುವದು ಎಂದರು.
ಹೆಣ್ಣು ಮಕ್ಕಳ ಶಿಕ್ಷಣಕಾಗಿ ಸರ್ಕಾರ ಸಾಕಸ್ಟು ಅನುದಾನ ನೀಡುತ್ತಿದ್ದು ಸದುಪಯೋಗ ಪಡೆದುಕೊಂಡು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿಗೊಳ್ಳದಂತೆ ಕ್ರಮ ಕೈಗೊಳ್ಳಬೇಕು. ಅದಕ್ಕೆ ಗ್ರಾಮಸ್ಥರು ಎಲ್ಲ ರೀತಿಯ ಸಹಕಾರ ನೀಡಬೇಕು. ಹೆಣ್ಣು ಮಕ್ಕಳಿಗೆ ಪ್ರೌಢ ಶಿಕ್ಷಣದ ವ್ಯವಸ್ಥೆ ಇದ್ದು ಪದವಿ ಪೂರ್ವ ಕಾಲೇಜು ಅವಶ್ಯಕತೆ ಇದ್ದು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜು ಮುಂಬರುವ ಪ್ರಸಕ್ತ ವರ್ಷದಲ್ಲಿ ಆರಂಭಿಲು ಕ್ರಮ ಕೈಗೊಳ್ಳಲಾಗುವುದು. ಪಪಂ ನಗರೋತ್ಥಾನ ಯೋಜನೆಯಡಿಯು ಸರಕಾರಿ ಶಾಲೆಯ ಮೂಲಭೂತ ಸೌಲಭ್ಯ ಒದಗಿಸಲಾಗುವದು. ಅದನ್ನು ಎಸ್‌ಡಿಎಂಸಿ ಮತ್ತು ಶಾಲಾ ಸುಧಾರಣಾ ಸಮಿತಿ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದರು.
ಪಪಂ ಹಿಂದಿನ ನಗರೋತ್ಥಾನ ಯೋಜನೆಯ ಅನುದಾನವು ಮಂಜೂರು ಮಾಡಲಾಗುವದು ಮತ್ತು ಪ್ರಸಕ್ತ ನಗರೋತ್ಥಾನ ಯೋಜನೆಯಲ್ಲಿ 7 ಕೋಟಿ ಅನುದಾನ ನೀಡಲಾಗುವದು. ಪಟ್ಟಣದ ಸೌಂದರ್ಯಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಇಂಡಿ ರಸ್ತೆಯಿಂದ ಪ್ರವಾಸಿ ಮಂದಿರದಿಂದ ಅಫಜಲಪುರ ಬಡದಾಳ ಪೆಟ್ರೋಲ್ ಪಂಪ್ ವರೆಗೂ ದ್ವಿಪಥ ರಸ್ತೆ ನಿರ್ಮಿರ್ಸಿ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುವದು. ಈ ಕೆಲಸ ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವದು ಎಂದರು.
ಅಳ್ಳೋಳಿ ಮಠದ ಶ್ರೀಶೈಲ ಅಳ್ಳೋಳಿಮಠ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಬಿ.ಆರ್. ಎಂಟಮಾನ, ಎಂಜಿನಿಯರ್ ಅಶೋಕ ಪಾಟೀಲ, ವೀರಭದ್ರ ಕತ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎಸ್. ನೇರಲಗಿ, ಈರಣ್ಣ ರಾವೂರ, ಗುರು ತಳವಾರ, ಅಶೋಕ ವಾರದ, ಪಪಂ ಸದಸ್ಯ ಮೈಬೂಬ ಮಸಳಿ, ಹನುಮಂತ ಹೂಗಾರ, ಶ್ರೀಶೈಲ ಭೋವಿ, ಸಂಜು ಎಂಟಮಾನ, ಚಂದು ಹಳೆಮನಿ, ಚಂದು ಕಾಂಬಳೆ, ಮುಖ್ಯ ಶಿಕ್ಷಕ ರವಿ ಹೊಸಮನಿ, ಸಿ.ಆರ್.ಪಿ ಎಸ್. ಎಂ. ಕುಡಗಿ ಮುಂತಾದವರು ಇದ್ದರು.