Advertisement

ಎಪಿಎಂಸಿ ಉಪ ಮಾರುಕಟ್ಟೆಗೆ ಭೂಮಿ ಪೂಜೆ

12:22 PM Feb 09, 2022 | Team Udayavani |

ಚಿಂಚೋಳಿ: ಸರ್ಕಾರದ ಯೋಜನೆಗಳು ಮತ್ತು ಸವಲತ್ತುಗಳು ಸಿಗುವುದು ದೊಡ್ಡ ಸಾಧನೆ ಆಗುತ್ತದೆ. ಸುಲೇಪೇಟ ಗ್ರಾಮದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪ-ಮಾರುಕಟ್ಟೆ ಮಂಜೂರಿ ಆಗಿರುವುದು ಐತಿಹಾಸಿಕ ಕೆಲಸವಾಗಿದ್ದು, ವರ್ತಕರಿಗೆ, ರೈತರಿಗೆ ಉಪಯೋಗವಾಗಲಿದೆ ಎಂದು ಶಾಸಕ ಡಾ| ಅವಿನಾಶ ಜಾಧವ ಹೇಳಿದರು.

Advertisement

ತಾಲೂಕಿನ ಸುಲೇಪೇಟ-ಯಾಕಾಪುರ ರಸ್ತೆ ಮಾರ್ಗದಲ್ಲಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಸುಲೇಪೇಟ ಕೃಷಿ ಉತ್ಪನ್ನ ಉಪ-ಮಾರುಕಟ್ಟೆ ಭೂಮಿ ಪೂಜೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದ ಪ್ರದೇಶದ ರೈತರು ಬೆಳೆದ ಆಹಾರ ಧಾನ್ಯಗಳನ್ನು ಮಾರಾಟ ಮಾಡಿಕೊಳ್ಳಲು ಎಪಿಎಂಸಿಗೆ ಅನುಕೂಲವಾಗುತ್ತದೆ. ಸುಲೇಪೇಟ ಗ್ರಾಮದ 35ಹಳ್ಳಿಗಳ ರೈತರು ತಮ್ಮ ವ್ಯಾಪಾರ ವಹಿವಾಟಿಗೆ ಮತ್ತು ವರ್ತಕರಿಗೆ ಕೃಷಿಕರಿಗೆ ತುಂಬಾ ಅನುಕೂಲವಾಗಲಿದೆ. ಚಿಂಚೋಳಿ ಸಕ್ಕರೆ ಕಾರ್ಖಾನೆ ಸುಲೇಪೇಟ ಗ್ರಾಮಕ್ಕೆ ಕೇವಲ 12 ಕಿ.ಮೀ ಅಂತರದಲ್ಲಿ ಇರುವುದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಲ್ಲಿ ಸ್ನಾತಕೋತ್ತರ ಕೇಂದ್ರ ಪ್ರಾರಂಭವಾಗಲಿದೆ. ಕೆಲ ಅಧಿಕಾರಿಗಳ ತಪ್ಪು ಮಾಹಿತಿಗಳಿಂದಾಗಿ ಸ್ನಾತಕೋತ್ತರ ಪ್ರಾರಂಭವಾಗಲಿಲ್ಲ. ಫೆ12ರಂದು ಕಲಬುರಗಿ ನಗರಕ್ಕೆ ಉನ್ನತ ಶಿಕ್ಷಣ ಸಚಿವ ಸಿ.ಅಶ್ವಥನಾರಾಯಣ ಆಗಮಿಸುತ್ತಿರುವುದರಿಂದ ಅವರ ಗಮನಕ್ಕೆ ತರಲಾಗುವುದು. ಈ ಭಾಗದ ಬಡವರ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.

ಚಂದಾಪುರ ಸರ್ಕಾರಿ ಬೀಜೋತ್ಪದನಾ ಕೇಂದ್ರದಲ್ಲಿ ರೈತರಿಗೋಸ್ಕರ ಕೃಷಿ ಸಂಸ್ಕರಣಾ ಶಿಕ್ಷಣಾ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ. ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕುರಿತು ಮಾಹಿತಿ ನೀಡಲಾಗುವುದು. ತಾಲೂಕನ್ನು ಅಭಿವೃದ್ಧಿಪಡಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.

Advertisement

ಎಪಿಎಂಸಿ ನಿರ್ದೇಶಕ ರಮೇಶ ಯಾಕಾಪುರ ಮಾತನಾಡಿ, ಚಿಂಚೋಳಿ ತಾಲೂಕಿನಲ್ಲಿ ಎಪಿಎಂಸಿ ಇರಲಿಲ್ಲ. ಸೇಡಂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಪ್ರತ್ಯೇಕವಾಗಿ 1997ರಲ್ಲಿ ಎಪಿಎಂಸಿ ಮಾಜಿ ಸಚಿವ ದಿ| ವೈಜನಾಥ ಪಾಟೀಲರು ಮಂಜೂರಿಗೊಳಿಸಿ ಆಗಿನ ಸಚಿವ ಎಚ್‌.ನಾಗಪ್ಪ ಅವರಿಂದ ಉದ್ಘಾಟಿಸಿದ್ದರು. ಎಪಿಎಂಸಿ ಪ್ರಾರಂಭಿಸುವಲ್ಲಿ ಮಾಜಿ ಸಚಿವರ ಕೊಡುಗೆ ಅಪಾರವಾಗಿದೆ ಎಂದರು.

ಶ್ರೀ ಪಂಪಾಪತಿ ದೇವರು, ಎಪಿಎಂಸಿ ಅಧ್ಯಕ್ಷ ಅಶೋಕ ಪಡಶೆಟ್ಟಿ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಗೌತಮ ಪಾಟೀಲ, ಚಂದ್ರಶೇಖರ ಕಂಬದ, ರೇವಣಸಿದ್ಧಪ್ಪ ಪೂಜಾರಿ, ರಮೇಶ ಧುತ್ತರಗಿ, ಮಾತನಾಡಿದರು. ತಾಪಂ ಇಒ ಅನಿಲಕುಮಾರ ರಾಠೊಡ, ಆತೀಶ ಪವಾರ, ಸಂತೋಷ ಗಡಂತಿ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಜಗದೀಶಸಿಂಗ್‌ ಠಾಕೂರ, ನಾಗೇಂದ್ರ ಸರಡಗಿ, ಉಪಾಧ್ಯಕ್ಷ ಅಣ್ಣಾರಾವ್‌ ಪೆದ್ದಿ, ಕಿರಣರೆಡ್ಡಿ ಮಿರಿಯಾಣ, ದಿವಾಕರ ಜಹಾಗೀರದಾರ, ಗೌರಿಶಂಕರ ಉಪ್ಪಿನ, ರಮೇಶ ಪಡಶೆಟ್ಟಿ, ರಾಜು ಪವಾರ, ಪ್ರೇಮಸಿಂಗ್‌ ಜಾಧವ, ಶಾಂತುರೆಡ್ಡಿ ನರನಾಳ, ಶಿವಯೋಗಿ ರುಸ್ತಂಪುರ, ಭೀಮಶೆಟ್ಟಿ ಮುರುಡಾ, ಭೀಮಶೆಟ್ಟಿ ಮುಕ್ಕಾ ಇನ್ನಿತರರು ಇದ್ದರು. ರಮೇಶ ಪಡಶೆಟ್ಟಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next