ದೊಡ್ಡಬಳ್ಳಾಪುರ: ನಗರದ ಕೊಳಗೇರಿಗಳ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನೀಡಲಾ ಗಿರುವ 500 ಮನೆಗಳ ಭೂಮಿ ಪೂಜೆಯನ್ನು ಫೆ.4ರಂದು ನೆರವೇರಿಸಲಾಗು ವುದು ಎಂದು ಶಾಸಕ ಟಿ.ವೆಂಕಟರಮಣಯ್ಯ ಭರವಸೆ ನೀಡಿದರು. ನಗರಸಭೆ ವ್ಯಾಪ್ತಿಯ ಕನಕದಾಸ ನಗರ, ಭುವನೇಶ್ವರಿ ನಗರ ವಾರ್ಡ್‌ಗಳಿಗೆ ಭೇಟಿ ನೀಡಿದ ಅವರು, ಸಾರ್ವಜನಿಕರ ಕುಂದುಕೊರತೆ ವಿಚಾರಿಸಿ ಮಾತನಾಡಿದರು.
ವೀರಭದ್ರನಪಾಳ್ಯ ಹಾಗೂ ಕಚೇರಿಪಾಳ್ಯದ ವ್ಯಾಪ್ತಿಯಲ್ಲಿನ ನಿವಾಸಿಗಳಿಗಾಗಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 500 ಮನೆಗಳ ನಿರ್ಮಾಣಕ್ಕೆ ಸರಕಾರ ಅವಕಾಶ ಕಲ್ಪಿಸಿದೆ. ಸೋಮವಾರ ನಗರಸಭೆ ಅಧ್ಯಕ್ಷರು, ಪೌರಾ ಯುಕ್ತರು ಹಾಗೂ ಸ್ಥಳೀಯ ಸದಸ್ಯರ ಸಮ್ಮುಖ ದಲ್ಲಿ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ಸದಸ್ಯರು ಸಮರ್ಪ ಕವಾಗಿ ಕಾರ್ಯನಿರ್ವಹಿಸಿದರೆ ಜನತೆ ಸಮಸ್ಯೆಯನ್ನು ಶಾಸಕರ ವರೆಗೆ ತರುವಂತಹ ಸ್ಥಿತಿ ಬರುವುದಿಲ್ಲ. ನಗರದ ಅಭಿವೃದ್ಧಿಗೆ ಕಟಿಬದ್ಧ ವಾಗಿದ್ದು, ನಗರೋತ್ಥಾನ ಯೋಜನೆಯಡಿ ಸುಮಾರು 8 ಕೋಟಿ ರೂ.ಅನುದಾನದಲ್ಲಿ ವಾರ್ಡ್‌ವಾರು ಸಮಸ್ಯೆ ಆಲಿಸಿ ಕಾಮಗಾರಿ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಈ ವರೆಗೆ 13 ವಾರ್ಡ್ ಮುಗಿಸಿದ್ದು, ಪ್ರತಿನಿತ್ಯ ಎರಡು ವಾರ್ಡ್ ಗಳಿಗೆ ಭೇಟಿ ನೀಡಲಾಗುವುದೆಂದು ತಿಳಿಸಿದರು.
ಈ ವೇಳೆ ಸಾರ್ವಜನಿಕರು ರಸ್ತೆ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನಕ್ಕೆ ತಂದಿದ್ದು, ಕನಕದಾಸ ರಸ್ತೆಯ ಚರಂಡಿ ಕಾಮಗಾರಿ ಸಮರ್ಪಕವಾಗಿಲ್ಲ. ಹಾಗಾಗಿ, ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಮಳೆ ನೀರು ಮನೆಗಳಿಗೆ ನುಗ್ಗುವ ಆತಂಕವಿದೆ. ಸಮರ್ಪಕವಾಗಿ ಕಾಮಗಾರಿ ನಡೆಸುವಂತೆ ಇಂಜಿನಿಯರ್‌ಗಳಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು.
ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಶಾಸಕರ ಅನುದಾನದಲ್ಲಿ ರಸ್ತೆ ಕಾಮಗರಿಗಳಿಗೆ ಪಟ್ಟಿ ಮಾಡುವಂತೆ ಹಾಗೂ ಮನೆಗಳಿಗೆ ನೀರು ನುಗ್ಗದಂತೆ ಚರಂಡಿ ಕಾಮಗಾರಿ ನಡೆಸಲು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಶಿವಣ್ಣರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀ ನಟರಾಜ್, ನಾಮಿನಿ ಸದಸ್ಯ ಆಂಜನಮೂರ್ತಿ, ನಗರ ಬ್ಲಾಕ್ ಅಧ್ಯಕ್ಷ ಕೆ.ಜಿ.ಅಶೋಕ್, ಪ್ರಧಾನ ಕಾರ್ಯದರ್ಶಿ ಯೋಗ ನಟರಾಜ್, ಯುವ ಘಟಕದ ಅಧ್ಯಕ್ಷ ಜವಾಜಿ ರಾಜೇಶ್, ಎಸ್ಸಿ ಘಟಕದ ಅಧ್ಯಕ್ಷ ಮುನಿರಾಜ್, ನಗರಸಭೆ ಮಾಜಿ ಸದಸ್ಯ ಹೆಮಂತರಾಜ್, ಮುಖಂಡರಾದ ಕಾಂತರಾಜ್, ಪಾಂಡು, ಅಶ್ವತ್ಥ್, ಭಾರ್ಗವ, ರಾಮಾಂಜಿನಪ್ಪ, ಶೇಖರ್, ಚಂದ್ರಣ್ಣ, ಮಂಜು ನಾಥ್, ಭವಾನಿ, ದೊಡ್ಡಯ್ಯ ಸೇರಿದಂತೆ ಸ್ಥಳೀಯ ನಾಗರಿಕರು, ಮತ್ತಿತರರು ಶಾಸಕರ ಜತೆಗೆ ಹಾಜರಿದ್ದರು.