Advertisement
ಹಲವು ವರ್ಷಗಳಿಂದ ವಿವಿಧ ಕಾರಣಗಳಿಂದ ಸರಕಾರಿ ಹಾಗೂ ಖಾಸಗಿ ಜಾಗಕ್ಕೆ ಸಂಬಂಧಿಸಿದ ಕಡತ ವಿಲೇವಾರಿಗೆ ಅಡ್ಡಿ ಉಂಟಾಗಿದೆ. ಅರಣ್ಯ ಜಮೀನು, ಖಾಸಗಿ ಜಾಗ ಗುರುತಿಸುವಿಕೆ, ಪಹಣಿ ತಿದ್ದುಪಡಿ ಮೊದಲಾದ ವಿಭಾಗಕ್ಕೆ ಸಂಬಂಧಿಸಿದ ಅರ್ಜಿಗಳು ಇದಾಗಿದೆ.
Related Articles
Advertisement
ಪುತ್ತೂರು ಭೂ ಮಾಪನ ಇಲಾಖೆಯಲ್ಲಿ ಮಂಜೂರಾತಿ ಹುದ್ದೆಗಳ ಪೈಕಿ ಹಲವು ಹುದ್ದೆಗಳು ಖಾಲಿ ಇವೆ. ಹನ್ನೊಂದು ಜನರ ಪೈಕಿ ನಾಲ್ಕು ಮಂದಿ ನಿಯೋಜನೆ ನೆಲೆಯಲ್ಲಿ ಕಡಬಕ್ಕೆ ಕರ್ತವ್ಯಕ್ಕೆ ತೆರಳಿದ್ದಾರೆ. ದಿನಂಪ್ರತಿ ಸರಕಾರಿ ಹಾಗೂ ಖಾಸಗಿ ಭೂಮಿಗೆ ಸಂಬಂಧಿಸಿ ನೂರಾರು ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು ವರ್ಷಾನುಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ದಿನೇ ದಿನೆ ಅರ್ಜಿ ಸಲ್ಲಿಕೆ ಆಗುತ್ತಿದ್ದರೂ ಅದರ ವಿಲೇವಾರಿ ಮಾತ್ರ ಆಗುತ್ತಿಲ್ಲ ಅನ್ನುವುದು ಸಾರ್ವಜನಿಕ ವಲಯದ ಆರೋಪ.
ಅಗತ್ಯ ಕ್ರಮ: ತಾಲೂಕು ಕಚೇರಿ, ಸರ್ವೇ ಇಲಾಖೆಯಲ್ಲಿ ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗಿದೆ. ಸರಕಾರಿ ಯೋಜನೆಗಳ ಅನುಷ್ಠಾನಕ್ಕೆ ಭೂಮಿ ಕಾದಿರಿಸುವಿಕೆ, ಖಾಸಗಿ ಭೂ ದಾಖಲೆಗಳಿಗೆ ಸಂಬಂಧಿಸಿ ಅರ್ಜಿಗಳನ್ನು ಶೀಘ್ರ ಇತ್ಯರ್ಥಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. –ಸಂಜೀವ ಮಠಂದೂರು, ಶಾಸಕರು, ಪುತ್ತೂರು