ಕೊಳ್ಳೇ ಗಾಲ: ಭೂಮಾಪನ ಶಾಖೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭೂ ಮಾಪಕರು (ಸರ್ವೇಯರ್) ಕಳೆದ 40 ದಿನಗಳಿಂದ ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸುತ್ತಿರುವುದರಿಂದ ಜಮೀನು ಸರ್ವೆ, ತಿದ್ದುಪಡಿ, ಪೋಡು, ಭೂ ನೋಂದಣಿ ಕಾರ್ಯಗಳು ಸ್ಥಗಿತವಾಗಿವೆ. ಇದರಿಂದ ರೈತರು ಇನ್ನಿಲ್ಲದಂತೆ ಪರಾಡುತ್ತಿದ್ದಾರೆ.
ಕಳೆದ 2 ತಿಂಗಳಿನಿಂದ ಸರ್ವೆ ಇಲಾಖೆಗೆ ರೈತರು ಮತ್ತು ಸಾರ್ವ ಜನಿಕರು 11ಇ ನಕ್ಷೆ, ತತ್ಕಾಲ್ ಪೋಡಿ, ಅನ್ಯ ಕ್ರಾಂತ, ಹದ್ದುಬಸ್ತು, ಇ ಸ್ವತ್ತು, ಅಳತೆ ಕಾಯ ì ಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕಾಗಿ ನಿಗ ದಿತ ಶುಲ್ಕ ವನ್ನೂ ಸಹ ಪಾವತಿಸಿದ್ದಾರೆ. ಆದರೂ ಅಳತೆ ಕಾರ್ಯ ಬಾಕಿ ಉಳಿದಿದೆ. ನಿಗದಿತ ಸಮಯದಲ್ಲಿ 11ಇ ನಕ್ಷೆ ಸಿಗದೇ ರೈತರು ಕ್ರಯ, ವಿಕ್ರಯ ನಡೆಯದೇ ಸಂಕಷ್ಟಕ್ಕೆ ಇಡಾಗಿದ್ದಾರೆ. ರೈತರು ತತ್ಕಾಲ್ ಪೋಡಿಗಾಗಿ ಅರ್ಜಿ ಶುಲ್ಕ ಪಾವತಿಸಿದ 30 ದಿನಗಳೊಳಗೆ ಪ್ರತ್ಯೇಕ ಆರ್‌ಟಿಸಿ ಸಿಗಬೇಕಾಗಿದೆ. ಆದರೂ ಸಕಾಲದಲ್ಲಿ ಕೆಲಸಗಳು ನಡೆಯುತ್ತಿಲ್ಲ.
ಕೊಳ್ಳೇಗಾಲ ರಾಜ್ಯ ದಲ್ಲೇ ಅತ್ಯಂತ ದೊಡ್ಡ ತಾಲೂಕು ಎಂದು ನಮೂದಾಗಿತ್ತು. ಇಲ್ಲಿ ಎರಡು ವಿಧಾನ ಸ ಭಾ ಕ್ಷೇತ್ರ ಗಳು ಇವೆ. ಇದನ್ನ ಮನ ಗಂಡ ಸರ್ಕಾರ ತಾಲೂಕು ಕೇಂದ್ರ ವನ್ನು ವಿಭಾಗ ಮಾಡಿ ಹನೂರು ಪ್ರತ್ಯೇಕ ತಾಲೂಕು ಕೇಂದ್ರ ವ ನ್ನಾಗಿ ಮಾಡಿ ವಿಭ ಜಿ ಸಿ ದೆ. ಹನೂರು ತಾಲೂಕು ಕೇಂದ್ರ ವಾಗಿ ಪ್ರತ್ಯೇ ಕ ಗೊಂ ಡರೂ ಸಹ ಆಡ ಳಿತ ಯಂತ್ರ ಕೊಳ್ಳೇ ಗಾಲ ತಾಲೂಕು ಕೇಂದ್ರ ದಿಂದಲೇ ಎಲ್ಲ ಕೆಲಸ ಗಳು ನೆಡೆ ಯು ತ್ತಿವೆ. ಹನೂರು ತಾಲೂಕು ಆಗಿ ವರ್ಷ ಕಳೆದರೂ ತಾಲೂಕು ಕೇಂದ್ರ ದಿಂದ ಆಡ ಳಿತ ನಡೆ ಸಲು ಅಧಿ ಕಾ ರಿ ಗಳು ಮತ್ತು ಕಚೇರಿಗಳನ್ನು ತೆರೆದಿಲ್ಲ.
ಅರ್ಜಿ ಸ್ವೀಕಾರ:
ತಾಲೂಕು ಭೂಮಾ ಪನ ಶಾಖೆಯಲ್ಲಿ ರೈತರಿಗೆ ಸಂಬಂಧಿ ಸಿದ 110 ಅರ್ಜಿ ಗಳನ್ನು ಸಲ್ಲಿ ಸಿ ದ್ದು, ಈ ಪೈಕಿ 45 ಅರ್ಜಿ ಗಳು ಮಾತ್ರ ಇತ್ಯರ್ಥ ಆಗಿವೆ. ಅದೇ ರೀತಿ ಹನೂರು ತಾಲೂ ಕಿ ನಿಂದ ಸಲ್ಲಿ ಸಿರುವ 238 ಅರ್ಜಿ ಗ ಳಲ್ಲಿ 102 ಅರ್ಜಿಗಳು ಇತ್ಯರ್ಥ ಆಗಿವೆ. ಶೇ.50 ರಷ್ಟು ಅರ್ಜಿಗಳು ಮಾತ್ರ ವಿಲೇವಾರಿ ಮಾಡ ಲಾಗಿದೆ. ಇನ್ನುಳಿದ ಅರ್ಜಿ ಗಳು ಇತ್ಯರ್ಥವಾಗದೇ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಹೂರಗುತ್ತಿಗೆ ಆಧಾ ರದ ಮೇಲೆ ಕಾರ್ಯ ನಿರ್ವ ಹಿ ಸು ತ್ತಿದ್ದ ನೌಕ ರರು ಸೇವೆ ಕಾಯಂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫೆ.9ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಬ್ಬಂದಿ ಕೆಲ ಸಕ್ಕೆ ಗೈರು ಆಗಿ ರು ವು ದ ರಿಂದ ಸಾರ್ವಜ ನಿ ಕರ ಮತ್ತು ರೈತರು ಸಲ್ಲಿ ಸಿ ರುವ ಅರ್ಜಿ ಗಳು ಸಮರ್ಪಕವಾಗಿ ವಿಲೇವಾರಿ ಆಗದೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಭೂ ಮಾಪಕರಿಂದ ಕೆಲಸ:
ಸರ್ಕಾರದಿಂದ ನೇಮ ಕ ಗೊಂಡಿ ರುವ ನೌಕರರಿಗೆ ಪ್ರತಿದಿನ ತಾಲೂ ಕಿನ ವಿವಿಧ ಗ್ರಾಮಗಳ ಕೆಲಸ ವಿಂಗ ಡಿಸಿದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಗುತ್ತಿಗೆ ನೌಕ ರರು ನಿರ್ವ ಹಿಸುತ್ತಿದ್ದ ಕೆಲ ಸ ಗ ಳನ್ನು ಹೆಚ್ಚು ವರಿ ಯಾಗಿ ನಿಯೋ ಜನೆ ಮಾಡಿ ರು ವು ದ ರಿಂದ ಎರಡು ಕೆಲ ಸಗಳು ಸಕಾ ಲ ದಲ್ಲಿ ನೆರ ವೇ ರಿಸಲು ಆಗುತ್ತಿಲ್ಲ. ಆದರೆ, ಸಾರ್ವ ಜ ನಿ ಕರು ಮಾತ್ರ ಮನೆಯಿಂದ ಕಚೇ ರಿಗೆ ಪ್ರತಿ ನಿತ್ಯ ಅಲೆ ದಾ ಡುವುದು ತಪ್ಪಿಲ್ಲ.
ಬೇಡಿಕೆ ಈಡೇರಿಕೆ ತನಕ ಹೋರಾಟ ಕೈಬಿಡಲ್ಲ:
ಎಚ್ಚರಿಕೆ ಗುತ್ತಿಗೆ ಭೂಮಾಪಕರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫೆಬ್ರ ವರಿ 9ರಿಂದ ನಿರಂತ ರ ವಾಗಿ ಧರಣಿ ಕೈಗೊಂಡಿದ್ದು, ಮಾ.20ಕ್ಕೆ ಬೆಂಗ ಳೂ ರಿನ ಫ್ರೀಡಂ ಪಾರ್ಕ್ ನಲ್ಲಿ ಸಭೆ ನಡೆಸಲು ಉದ್ದೇಶಿದ್ದು, ಇದಕ್ಕೆ ಬೆಂಗಳೂರಿಗೆ ಹೊರಡುತ್ತಿದ್ದೇವೆ. ನಮ್ಮ ಕೆಲಸ ಕಾಯಂ ಆಗು ವ ವ ರೆಗೂ ಹೋರಾಟ ಮಾಡು ವು ದಾಗಿ ತಾಲೂಕು ಭೂಮಾಪಕರ ಸಂಘದ ಅಧ್ಯಕ್ಷ ಮಹ ದೇ ವ ಸ್ವಾಮಿ ಹೇಳಿ ದ್ದಾರೆ.
ಡಿ.ನಟರಾಜು