Advertisement

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿ 3ನೇ ತಿರುವಿನಲ್ಲಿ ಲಘು ಭೂ ಕುಸಿತ.. ಟ್ರಾಫಿಕ್ ಜಾಮ್

10:21 PM Oct 09, 2024 | Team Udayavani |

ಬೆಳ್ತಂಗಡಿ: ಚಾರ್ಮಾಡಿ ಘಾಟಿ ಪರಿಸರದಲ್ಲಿ ಬುಧವಾರ ಮಧ್ಯಾಹ್ನದ ಬಳಿಕ ಭಾರಿ ಗಾಳಿ, ಮಳೆ ಸುರಿದ ಪರಿಣಾಮ ಬೆಳ್ತಂಗಡಿ ವ್ಯಾಪ್ತಿಯ ಮೂರನೇ ತಿರುವಿನ ಅಂಚಿನಲ್ಲಿ ಮರ ಸಹಿತ ಗುಡ್ಡ ಕುಸಿತಗೊಂಡ ಘಟನೆ ನಡೆಯಿತು.

Advertisement

ತೀವ್ರ ಗಾಳಿ ಮಳೆಗೆ ಘಾಟಿಯ ಮೂರನೇ ತಿರುವಿನ ಬಳಿ ಎರಡು ಮರಗಳು ರಸ್ತೆಗೆ ಉರುಳಿ ಬಿದ್ದಿದ್ದು, ಅದರೊಂದಿಗೆ ಲಘು ಪ್ರಮಾಣದ ಗುಡ್ಡ ಕುಸಿತ ಉಂಟಾಗಿದೆ. ಮರಗಳು ರಸ್ತೆಗೆ ಬಿದ್ದ ಪ್ರದೇಶದಲ್ಲಿ ಒಂದು ವಾಹನ ಮಾತ್ರ ಸಂಚರಿಸುವಷ್ಟು ಸ್ಥಳವಕಾಶ ಇದ್ದರೂ ಎರಡು ಕಡೆಯಿಂದ ವಾಹನ ಸಂಚಾರ ನಡೆಸಿದ್ದರಿಂದ ಟ್ರಾಫಿಕ್‌ ಜಾಮ್‌ ಸಮಸ್ಯೆ ಎದುರಾಯಿತು.

ಘಾಟಿ ಪ್ರದೇಶದಲ್ಲಿ ನಿರಂತರ ಎರಡು ತಾಸಿಗಿಂತ ಅಧಿಕಕಾಲ ಮಳೆ ಸುರಿದು ರಸ್ತೆಯಲ್ಲಿ ನೀರು ಹರಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಇಲ್ಲಿನ ಹಲವು ಕಿರು ತೊರೆಗಳು, ಜಲಪಾತಗಳು ರಸ್ತೆ ತನಕವು ಧುಮ್ಮಿಕ್ಕಿವೆ.

ಗುಡ್ಡ ಕುಸಿತ ಹಾಗೂ ಮರ ಉರುಳಿರುವ ಕುರಿತು ಸ್ಥಳೀಯರಾದ ಚಾರ್ಮಾಡಿ ಹಸನಬ್ಬ ಹಾಗೂ ಇತರರು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

Advertisement

ಸ್ಥಳಕ್ಕೆ ಗೃಹರಕ್ಷಕದಳ, ಅರಣ್ಯ ಇಲಾಖೆ ಸಿಬಂದಿ ಹಾಗೂ ಹೆದ್ದಾರಿ ಇಲಾಖೆ ಸೂಚನೆಯಂತೆ ಜೆಸಿಬಿ ಮೂಲಕ ಮರ ಹಾಗೂ ಮಣ್ಣು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಲಘು ಪ್ರಮಾಣದ ಗುಡ್ಡ ಕುಸಿತ ಉಂಟಾಗಿದ್ದು, ಇಲ್ಲಿ ಯಾವುದೇ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Kuladalli Keelyavudo Movie: ಮುಹೂರ್ತದಲ್ಲಿ ಕುಲದಲ್ಲಿ ಕೀಳ್ಯಾವುದೋ

Advertisement

Udayavani is now on Telegram. Click here to join our channel and stay updated with the latest news.

Next