Advertisement

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಜಾರಿ

02:59 PM Mar 25, 2017 | |

ಕಲಬುರಗಿ: ಹಲವು ವರ್ಷಗಳಿಂದ ಕಾರ್ಯರೂಪಕ್ಕೆ ಬಾರದೇ ನನೆಗುದಿಗೆ ಬಿದ್ದಿರುವ ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಅಧಿನಿಯಮ ಯೋಜನೆ ಶುಕ್ರವಾರ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದು, ಈ ಮೂಲಕ ಐತಿಹಾಸಿಕ ನಿರ್ಧಾರ ತೆಗೆದುಕೊಂಡಂತಾಗಿದೆ ಎಂದು ಚಿಂಚೋಳಿ ಶಾಸಕ ಡಾ| ಉಮೇಶ ಜಾಧವ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Advertisement

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಯೋಜನೆ ಜಾರಿ ಮೂಲಕ ಕ್ರಾಂತಿಕಾರಿ ಹೆಜ್ಜೆ ಇಟ್ಟಂತಾಗಿದೆಯಲ್ಲದೇ ಬಾಯಿಲ್ಲದ, ಬಡವರಿಗೆ ಸೂರಿನ ಹಕ್ಕು ಕಲ್ಪಿಸಿದಂತಾಗಿದೆ. ಖಾಸಗಿ ಜಮೀನುಗಳಲ್ಲಿ ನೂರಾರು ವರ್ಷಗಳಿಂದ ವಸತಿ ನಿರ್ಮಿಸಿಕೊಂಡು ವಾಸಿಸುತ್ತಿರುವವರಿಗೆ ಜಾಗದ ಮೇಲಿನ ಹಕ್ಕು ಪಡೆಯದೇ ಅಕ್ರಮ ವಾಸಿಗಳೆಂಬ ಹಣೆಪಟ್ಟಿಯೊಂದಿಗೆ ಬದುಕುತ್ತಿದ್ದವರಿಗೆ ಈ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಆಶಾಕಿರಣವಾಗುತ್ತದೆ ಎಂದು ವಿವರಣೆ ನೀಡಿದ್ದಾರೆ.

ಊಳುವವನೇ ಹೊಲದೊಡೆಯ ಇರುವವನೆ ಮನೆ ಒಡೆಯ ಎಂಬ ಘೋಷವಾಕ್ಯ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಅಡಿ ಗೇಣಿದಾರರಿಗೆ ಭೂ ಒಡೆತನದ ಹಕ್ಕು ಕೊಡಿಸಿದ್ದು ಇತಿಹಾಸ. ಆದರೆ ಇದೇ ಕಾಯ್ದೆಯಲ್ಲಿ ಕಲ್ಪಿಸಲಾಗಿದ್ದ ಅವಕಾಶವನ್ನು ದುರ್ಬಲ ವರ್ಗಕ್ಕೆ ಸೇರಿದ್ದ ಲಂಬಾಣಿ, ಭೋವಿ, ಗೊಲ್ಲ, ನಾಯಕ, ಕುರುಬ, ಶಿಕಾರಿ ಮುಂತಾದ ಸಮುದಾಯಗಳಿಗೆ ವಾಸಿಸುವ ಮನೆಗಳಿಗೆ ದಾಖಲೆ ಹಾಗೂ ಹಕ್ಕನ್ನು ನೀಡುವ ಕೆಲಸವಾಗಿರಲಿಲ್ಲ.

ಇಂತಹ ಕ್ರಾಂತಿಕಾರಿ ಕಾಯ್ದೆ ಜಾರಿಗೆ ಶ್ರಮಿಸಿದ ಕೆ. ಶಿವಮೂರ್ತಿ ಹಾಗೂ ವಿಧಾನಸಭೆಯಲ್ಲಿ ಅಂಗೀಕಾರಗೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next