Advertisement

ಪುರಿ ಜಗನ್ನಾಥನ ದೇಗುಲದ ಆಸ್ತಿ ಡಿಜಿಟಲೀಕರಣ

12:54 PM Sep 29, 2022 | Team Udayavani |

ಪುರಿ: ಒಡಿಶಾ ಸರ್ಕಾರದಿಂದ ಅನುಮೋದನೆಯ ನಂತರ ಪುರಿ ಜಗನ್ನಾಥನ ದೇಗುಲದ ಹೆಸರಿನಲ್ಲಿ ಇರುವ 60,000 ಎಕರೆಗೂ ಅಧಿಕ ಆಸ್ತಿಯನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಪುರಿ ಜಗನ್ನಾಥ ದೇಗುಲದ ಮುಖ್ಯ ಆಡಳಿತಾಧಿಕಾರಿ ವಿ.ವಿ.ಯಾದವ್‌ ತಿಳಿಸಿದರು.

Advertisement

“ದೇಗುಲದ ಹೆಸರಿನಲ್ಲಿ ಒಡಿಶಾದಲ್ಲಿ 60,426 ಎಕರೆ ಮತ್ತು ಇತರೆ ಆರು ರಾಜ್ಯಗಳಲ್ಲಿ 395.252 ಎಕರೆ ಆಸ್ತಿ ಇದೆ. ಈ ಪೈಕಿ ಪಶ್ಚಿಮ ಬಂಗಾಳದಲ್ಲಿ 322.930 ಎಕರೆ, ಮಹಾರಾಷ್ಟ್ರದಲ್ಲಿ 28.21 ಎಕರೆ, ಮಧ್ಯಪ್ರದೇಶದಲ್ಲಿ 25.11 ಎಕರೆ, ಆಂಧ್ರ ಪ್ರದೇಶದಲ್ಲಿ 17.02 ಎಕರೆ, ಛತ್ತೀಸಗಡದಲ್ಲಿ 1.7 ಎಕರೆ ಮತ್ತು ಬಿಹಾರದಲ್ಲಿ 0.27 ಎಕರೆ ದೇಗುಲದ ಆಸ್ತಿ ಇದೆ,’ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next