Advertisement

ಕಾಂ|ಪಂಪಾಪತಿ ಕಾರ್ಮಿಕರ ಬಡಾವಣೆಗೆ ಭೂಮಿಪೂಜೆ

06:32 AM Mar 18, 2019 | Team Udayavani |

ದಾವಣಗೆರೆ: ಶ್ರಮಜೀವಿಗಳಿಗೆ ನ್ಯಾಯ ಸಮ್ಮತ, ಕಾನೂನಾತ್ಮಕವಾಗಿ ನಿವೇಶನಗಳನ್ನು ನೀಡುವ ಮೂಲಕ, ಸೂರು ಇಲ್ಲದ ಸಾವಿರಾರು ಕಾರ್ಮಿಕ ವರ್ಗಕ್ಕೆ ಆಶ್ರಯ ಕಲ್ಪಿಸಿ ಶ್ರಮಜೀವಿ ಕಾಂ.ಪಂಪಾಪತಿ ಕಟ್ಟಡ ಕಾರ್ಮಿಕರ ಬಡಾವಣೆ ರಾಜ್ಯಕ್ಕೆ ಮಾದರಿಯಾಗಲಿ ಎಂದು ಅವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಆಶಿಸಿದ್ದಾರೆ.

Advertisement

ಭಾನುವಾರ ಭಾನುವಾರ ಹೊನ್ನೂರು ಗೊಲ್ಲರಹಟ್ಟಿ ಗ್ರಾಮದ ಸಮೀಪ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ವತಿಯಿಂದ ಏರ್ಪಡಿಸಿದ್ದ ಶ್ರಮಜೀವಿ ಕಾಂ.ಪಂಪಾಪತಿ ಕಟ್ಟಡ ಕಾರ್ಮಿಕರ ಬಡಾವಣೆಯ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಗರ ಪ್ರದೇಶದ ಯಾವ ಒತ್ತಡಕ್ಕೆ ಒಳಗಾಗದೇ ಉತ್ತಮ ಪರಿಸರದಲ್ಲಿ ಸಮಾಧಾನಕಾರ ಬದುಕು ನಡೆಸುವ ನಿಟ್ಟಿನಲ್ಲಿ ಇಂತಹ ಬಡಾವಣೆಗಳು ಅಗತ್ಯ ಎಂದರು.

ಶ್ರಮಜೀವಿ ಕಾಂ.ಪಂಪಾಪತಿ ಕಟ್ಟಡ ಕಾರ್ಮಿಕರ ಬಡಾವಣೆಯಲ್ಲಿ ಉಳ್ಳವರಿಗೆ ನಿವೇಶನ ಹಂಚದೆ ಬಡ ವ್ಯಕ್ತಿಗಳಿಗೆ ಜಾತ್ಯತೀತವಾಗಿ ಹಂಚುವ ಕೆಲಸ ಆಗಬೇಕು. ಶ್ರಮಜೀವಿಗಳು ಸ್ವಾವಲಂಬಿ ಬದುಕು ಸಾಗಿಸಲು ದಾರಿ ಮಾಡಿಕೊಡಬೇಕು ಎಂದು ತಿಳಿಸಿದರು.
 
ಶ್ರಮಪಟ್ಟು ಕೆಲಸ ಮಾಡುವ ಕಟ್ಟಡ ಕಾರ್ಮಿಕರು ದುಡಿದ ಹಣವನ್ನು ದುಶ್ಚಟಗಳಿಗೆ ಹಾಳು ಮಾಡದೆ, ತಮ್ಮದೇ ಸಹಕಾರ ಸಂಘದಲ್ಲಿ ತೊಡಗಿಸಿ, ಅಗತ್ಯಗಳಿಗೆ ತಕ್ಕಂತೆ ಹಣ ಪಡೆದು, ಉಳಿದ ಹಣದಲ್ಲಿ ನಿವೇಶನ ಪಡೆದು, ಮುಂಬರುವ ದಿನಗಳಲ್ಲಿ ಮನೆ ಕಟ್ಟಲು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಕೈಗಾರಿಕೋದ್ಯಮಿ ಅಥಣಿ ಎಸ್‌. ವೀರಣ್ಣ ಮಾತನಾಡಿ, ಕಾನೂನು ರೀತಿಯಲ್ಲಿ ನಿವೇಶನ ಅಭಿವೃದ್ಧಿಪಡಿಸಿ ಮೂಲಭೂತ ಸೌಲಭ್ಯಗಳನ್ನು ನೀಡುವ ಮೂಲಕ ಅತ್ಯುತ್ತಮ ಬಡಾವಣೆಯನ್ನಾಗಿ ಮಾಡಲಾಗಿದೆ. ಬಡಾವಣೆಯ ಸಮೀಪದಲ್ಲೇ 8 ಎಕರೆ ಭೂಮಿಯಲ್ಲಿ ನೂತನ ಕೆರೆ ನಿರ್ಮಾಣ ಆಗುತ್ತಿದೆ. ಉತ್ತಮ ಪರಿಸರ ನಿರ್ಮಾಣವಾಗಲಿದೆ. ಮುಂಬರುವ ದಿನಗಳಲ್ಲಿ ಸಾಧ್ಯವಾದರೆ ಸಹೋದರ ಅಥಣಿ ಕೊಟ್ರಪ್ಪ ಹೆಸರಿನಲ್ಲಿ ಬಡಾವಣೆ ಮಾಡಿ, ಅರ್ಹರಿಗೆ ನಿವೇಶನ ನೀಡಲಾಗುವುದು ಎಂದು ಹೇಳಿದರು.

ಹಿರಿಯ ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ಮಾತನಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ
ನಿವೇಶನ ಹಂಚಿಕೆ ಕಾರ್ಯ ಶ್ಲಾಘನೀಯ. ಪಂಪಾಪತಿ ಹೆಸರಿನಲ್ಲಿ ಬಡಾವಣೆ ನಿರ್ಮಾಣಗೊಳ್ಳುತ್ತಿರುವುದು ಸಂತಸದ ವಿಷಯ. ಇಂತಹ ಕಾರ್ಯಗಳನ್ನು ಕಟ್ಟಡ ಕಾರ್ಮಿಕರ ಸಂಘ ಮಾಡುತ್ತಿರುವುದು ಮಾದರಿಯಾಗಿದೆ ಎಂದರು. 

Advertisement

ಮಹಾನಗರ ಪಾಲಿಕೆ ಸದಸ್ಯ ಎಚ್‌.ಜಿ. ಉಮೇಶ್‌ ಮಾತನಾಡಿ, ಸರ್ಕಾರದ ದ್ವಂದ್ವ ನೀತಿಗಳ ಪರಿಣಾಮ ಕಾರ್ಮಿಕರಿಗೆ ಸರಿಯಾದ ಕೆಲಸ ಸಿಗುತ್ತಿಲ್ಲ. ಶ್ರಮಿಕರಿಗೆ ಸೂರು ಕಲ್ಪಿಸಲು ಮುಂದಾಗುತ್ತಿಲ್ಲ. ನಾವೆಲ್ಲರೂ ಸೇರಿ 5.13 ಎಕರೆ ಭೂಮಿಯಲ್ಲಿ ಬಡಾವಣೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಎಲ್ಲಾ ಹಂತದ ಅಭಿವೃದ್ದಿಗಳು ಮುಕ್ತಾಯಗೊಂಡು, ಶೀಘ್ರವೇ ಅರ್ಹ ಫಲಾನುಭವಿಗಳಿಗೆ
ನಿವೇಶನಗಳು ದೊರ ಕಲಿವೆ ಎಂದು ತಿಳಿಸಿದರು. 

ನಗರಪಾಲಿಕೆ ಸದಸ್ಯಪಿ.ಕೆ. ಲಿಂಗರಾಜು, ಜಿ.ಆರ್‌. ನಾಗರಾಜ್‌, ಎಚ್‌. ಎನ್‌. ಮಂಜುನಾಥ್‌, ವಿ. ಲಕ್ಷ್ಮಣ್‌, ಭೀಮಾರೆಡ್ಡಿ, ಗುಡಿಹಳ್ಳಿ ಹಾಲೇಶ್‌, ಶಿವಕುಮಾರ ಡಿ.ಶೆಟ್ಟರ್‌, ಶೋಭಮ್ಮ, ಎನ್‌. ಎಚ್‌. ರಾಮಣ್ಣ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next