Advertisement

3 ತಾಲೂಕುಗಳಲ್ಲಿ ಭೂಮಾಲಕತ್ವ ಖಾತ್ರಿ ಯೋಜನೆ ಜಾರಿ

06:05 AM Aug 18, 2018 | |

ಬೆಂಗಳೂರು: ಜನರಿಗೆ ಭೂಮಾಲಕತ್ವವನ್ನು ಅನುಮಾನಕ್ಕೆ ಎಡೆ ಇಲ್ಲದಂತೆ ಖಾತ್ರಿಪಡಿಸುವ “ಭೂಮಾಲಕತ್ವ ಖಾತ್ರಿ ಯೋಜನೆ’ ಪ್ರಾಯೋಗಿಕವಾಗಿ ರಾಜ್ಯದ 3 ತಾಲೂಕುಗಳಲ್ಲಿ ಶೀಘ್ರದಲ್ಲೇ ಜಾರಿಗೆ ಬರಲಿದೆ.

Advertisement

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಹಾಸನ ಜಿಲ್ಲೆಯ ಹಾಸನ ಮತ್ತು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕುಗಳನ್ನು ಭೂಮಾಲಕತ್ವ ಖಾತರಿ ಯೋಜನೆಗೆ ಆಯ್ಕೆ ಮಾಡಲಾಗಿದೆ. ಶೀಘ್ರದಲ್ಲಿಯೇ ಇದಕ್ಕೆ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದ್ದಾರೆ.

ಹಿಂದಿನ ಕಾಂಗ್ರೆಸ್‌ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕಳೆದ ಫೆಬ್ರವರಿಯಲ್ಲಿ ಮಂಡಿಸಿದ್ದ 2018 19ನೇ ಸಾಲಿನ ಬಜೆಟ್‌ನಲ್ಲಿ ಭೂಮಾಲಕತ್ವ ಖಾತ್ರಿ ಯೋಜನೆಯನ್ನು ಮೂರು ತಾಲೂಕುಗಳಲ್ಲಿ ಆರಂಭಿಸುವ ಬಗ್ಗೆ ಘೋಷಣೆ ಮಾಡಿದ್ದರು. ಅದರಂತೆ ಯೋಜನೆಗೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next