Advertisement

ಭೂ ಅಕ್ರಮ: ಪ್ರಭಾಕರ್‌ ರೆಡ್ಡಿ ಬಂಧನ

06:22 AM Feb 22, 2019 | Team Udayavani |

ಬೆಂಗಳೂರು: ನೂರಾರು ಕೋಟಿ ರೂ. ಮೌಲ್ಯದ ಭೂಮಿ ಕಬಳಿಕೆ ಆರೋಪದ ಮೇಲೆ ಪ್ರಮುಖ ರಿಯಲ್‌ ಎಸ್ಟೇಟ್‌ ಉದ್ಯಮಿ ಆರ್‌.ಪ್ರಭಾಕರ್‌ ರೆಡ್ಡಿಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈ ಹಿಂದೆ ಜೆಡಿಎಸ್‌ನಲ್ಲಿ ಗುರ್ತಿಸಿಕೊಂಡಿದ್ದ ಪ್ರಭಾಕರ್‌ ರೆಡ್ಡಿ, 2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.

Advertisement

ಭೂ ಅಕ್ರಮ ಆರೋಪ ಕುರಿತ ದೂರುಗಳ ಹಿನ್ನೆಲೆಯಲ್ಲಿ ಪ್ರಭಾಕರ್‌ ರೆಡ್ಡಿಗೆ ಸೇರಿದ ಮೈಲಹಳ್ಳಿ, ರಾಜರಾಜೇಶ್ವರಿ ನಗರ, ಎಚ್‌ಎಸ್‌ಆರ್‌ ಲೇಔಟ್‌ ನಿವಾಸಗಳು, ಕೋರಮಂಗಲದ ಕಚೇರಿ ಮೇಲೆ ಸಿಸಿಬಿ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಜತೆಗೆ, ಆರೋಪಿ ಪ್ರಭಾಕರ್‌ ರೆಡ್ಡಿಯನ್ನು ಬಂಧಿಸಿದೆ.

ಆರೋಪಿ ಪ್ರಭಾಕರ್‌ ರೆಡ್ಡಿಯ ನಾಲ್ಕು ನಿವಾಸ ಹಾಗೂ ಕಚೇರಿ ಮೇಲೆ ನಡೆಸಿದ ಕಾರ್ಯಾಚರಣೆ ವೇಳೆ 200ಕ್ಕೂ ಅಧಿಕ ದಾಖಲೆಗಳು ದೊರೆತಿವೆ. ಬ್ಯಾಂಕ್‌ ದಾಖಲೆಗಳು ಲಭ್ಯವಾಗಿವೆ. ಈತ ನೂರಾರು ಜನರಿಗೆ ವಂಚಿಸಿರುವ ಸಾಧ್ಯತೆಯಿದೆ. ವಂಚನೆಗೊಳಗಾದವರು ಎರಡು ದಿನಗಳಲ್ಲಿ ಸಿಸಿಬಿಗೆ ದೂರು ನೀಡಬಹುದು ಎಂದು ಸಿಸಿಬಿ ಡಿಸಿಪಿ ಗಿರೀಶ್‌ ತಿಳಿಸಿದ್ದಾರೆ.

ಆರೋಪಿ ಪ್ರಭಾಕರ್‌ ರೆಡ್ಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಗರದ ವಿವಿಧ ಭಾಗಗಳಲ್ಲಿ ಭೂ ಕಬಳಿಕೆ ಮಾಡಿರುವ ಆರೋಪಗಳಿವೆ. ಈ ಕುರಿತು ನಗರದ ಹಲವು ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು. ಸುಮಾರು 40 ಕ್ಕೂ ಹೆಚ್ಚು ಭೂ ಕಬಳಿಕೆ ಆರೋಪ ಪ್ರಕರಣಗಳಿರುವ ಮಾಹಿತಿಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next