Advertisement

ಕುಂಬಾರಿಕೆ ಕಸುಬು ಹಸನುಗೊಳಿಸಿದ ಆತ್ಮನಿರ್ಭರ ದೀಪ

03:01 PM Nov 15, 2020 | Suhan S |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ “ಆತ್ಮನಿರ್ಭರ ಭಾರತ ಅಭಿಯಾನ’ ಕರೆಯಂತೆ ಕುಂಬಾರಿಕೆಯಲ್ಲಿ ತೊಡಗಿರುವ ಕುಟುಂಬಗಳನ್ನು ಮತ್ತಷ್ಟು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಬೆಂಗಳೂರಿನ “ಸಮರ್ಪಣ’ ಸಂಸ್ಥೆ ಮುಂದಾಗಿದೆ.

Advertisement

ರಾಜ್ಯದ ನಾನಾ ಮೂಲೆಗಳಲ್ಲಿ ಕುಂಬಾರಿಕೆ ಕಸುಬನ್ನೇ ಜೀವನೋಪಾಯಕ್ಕೆ ನೆಚ್ಚಿಕೊಂಡಿರುವ ಕುಟುಂಬಗಳನ್ನು ಗುರುತಿಸಿ ಅವರಿಂದ ಜೇಡಿಮಣ್ಣಿನಿಂದ ಭಿನ್ನರೂಪದ “ಆತ್ಮ ನಿರ್ಭರ ಭಾರತ’ ದೀಪಗಳನ್ನು ಸಿದ್ಧಪಡಿಸಿ ಅದಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಮಾರಾಟಕ್ಕೆ ವೇದಿಕೆ ಕಲ್ಪಿಸಿ ಕೊಟ್ಟಿದೆ. ಆ ಮೂಲಕ ಕುಂಬಾರಿಕೆ ಕಸುಬು ಮುಂದುವರಿಕೆಗೆ ಉತ್ತೇಜಿಸುತ್ತಿದೆ. ಈ ಪ್ರಯತ್ನಕ್ಕೆ ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿರುವುದು ಆಶಾದಾಯಕವಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಚೀನಾ ವಸ್ತುಗಳನ್ನು ತ್ಯಜಿಸಿ ಸ್ವದೇಶಿ ಉತ್ಪನ್ನಗಳನ್ನೇ ಬಳಸುವಂತೆ ಕರೆ ನೀಡಿದೆ. ಪ್ರಧಾನಿ ಮೋದಿ ಅವರು “ಆತ್ಮನಿರ್ಭರ್‌ ಭಾರತ’ ಯೋಜನೆ ಘೋಷಿಸಿ, ಸ್ವದೇಶಿತನಕ್ಕೆ ಆದ್ಯತೆ ನೀಡಿದ್ದಾರೆ.ಆ ಹಿನ್ನೆಲೆಯಲ್ಲಿ ಸಮರ್ಪಣ ಸಂಸ್ಥೆ ವಿನೂತನ ರೀತಿಯ ಹೆಜ್ಜೆಯಿರಿಸಿ ಇದರಲ್ಲಿ ಯಶಸ್ಸು ಕಂಡಿದೆ. ಉಡುಪಿ-ಮಂಗಳೂರು,ಮೈಸೂರು, ಬೆಂಗಳೂರು ಸೇರಿದಂತೆ ಹಲವುಕಡೆಗಳಿಗೆ ಉತ್ತಮ ಸ್ಪಂದನೆ ದೊರೆತಿದೆ.

8 ಸಾವಿರ ಹಣತೆಗಳು ಮಾರಾಟ: ಪರಿಣಿತ ಕುಂಬಾರರಿಂದ ಈ ದೀಪಗಳನ್ನು ತಯಾರಿಸಲಾಗುತ್ತದೆ. ಗೋಕಾಕ್‌ನ ಶಿವಬಸಪ್ಪ ಕುಂಬಾರ, ಶಿವಮೊಗ್ಗದ ಶಿವರಾಜ್‌, ನಾರಾಯಣಪುರದ ಮಹೇಶ್‌ಕುಟುಂಬ ಆತ್ಮನಿರ್ಭರ್‌ ಭಾರತ ದೀಪಗಳನ್ನು ಸಿದ್ಧಪಡಿಸುತ್ತಿವೆ. ಈ ವರ್ಷ ಕೇವಲ 8,000 ದೀಪಗಳನ್ನಷ್ಟೇಸಿದ್ಧಪಡಿಸಲಾಗಿತ್ತು.ಎಲ್ಲದೀಪಗಳುಮಾರಾಟವಾಗಿವೆ. ದೀಪಾವಳಿ ನಂತರ ಕಾರ್ತಿಕ ಮಾಸದಲ್ಲಿ ಮತ್ತಷ್ಟುದೀಪಗಳನ್ನು ಸಿದ್ಧಪಡಿಸಿ ಆನ್‌ಲೈನ್‌ ಮೂಲಕ ಮಾರಾಟಕ್ಕೆ ಅವಕಾಶ ಕಲ್ಪಿಸುವ ಚಿಂತನೆ ಇದೆ ಎಂದು ಸಮರ್ಪಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಕು ಮಾರ ಹೊಸಮನಿ ಹೇಳಿದರು. ಒಂದು‌ ದೀಪದ ಬೆಲೆ 100 ರೂ. ಕೆಎಸ್‌ಆರ್‌ಟಿ ಬಸ್‌ಗಳ ಮೂಲದ ರಾಜ್ಯದ ಇತರೆ ಜಿಲ್ಲೆಗಳಿಗೆ ತಲುಪಿಸುವ ಕೆಲಸ ನಡೆದಿದೆ.ರಾಜ್ಯದ ನಾನಾ ಕಡೆಗಳಿಂದ ದೀಪಗಳಿಗೆ ಬೇಡಿಕೆ ಹೆಚ್ಚಿದೆ ಎಂದರು.

ಮಾರಾಟ ಎಲ್ಲಿ? ಎಷ್ಟು? :  ಬೆಂಗಳೂರು ಸುತ್ತಮತ್ತಲ ಭಾಗದಲ್ಲಿ ಸುಮಾರು 3,000 ದೀಪ ಮಾರಾಟವಾಗಿದೆ. ಹಾಗೆಯೇ ಉಡುಪಿ-ಮಂಗಳೂರು ಭಾಗಗಳಲ್ಲಿ ಸಾವಿರಕ್ಕೂ ಹೆಚ್ಚು ದೀಪಗಳು ಬಿಕರಿಯಾಗಿವೆ. ಮೈಸೂರಿನ ಭಾಗದಲ್ಲೂ 600ಕ್ಕೂ ಅಧಿಕ ದೀಪ ಮಾರಾಟವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸಾವಿರ ದೀಪಗಳು ಖರೀದಿ ಆಗಿವೆ. ಜತೆಗೆ ರಾಜ್ಯದ ಹಲವು ಕಡೆಗಳಲ್ಲಿ ಜನರು ಅಧಿಕ ಸಂಖ್ಯೆಯಲ್ಲಿ ಆತ್ಮನಿರ್ಭರ ಭಾರತ ದೀಪಗಳನ್ನು ಖರೀದಿಸಿದ್ದಾರೆ.

ಸ್ವದೇಶಿ ಆಕಾಶಬುಟ್ಟಿ :  ಚೀನಾ ವಸ್ತುಗಳನ್ನು ಬಳಸದಂತೆ ಹಿಂದಿನಿಂದಲೂ ಪ್ರತಿಪಾದಿ ಸುತ್ತಾ ಬಂದಿರುವ ಸಮರ್ಪಣ ಸಂಸ್ಥೆ 2001ರಿಂದ “ಸ್ವದೇಶಿ ಆಕಾಶ ಬುಟ್ಟಿ’ ವಿನ್ಯಾಸ ರೂಪಿಸುವುದಲ್ಲಿ ನಿರತವಾಗಿದೆ. ಚಾಮರಾಜಪೇಟೆಯಲ್ಲಿ ನೆಲೆಸಿರುವ ಬಿದಿರು ಉತ್ಪನ್ನಗಳ ಮಾರಾಟಗಾರರಿಂದ ಬಿದಿರಿನ ಕಡ್ಡಿ ಖರೀದಿಸಿ ಆಕಾಶ ಬುಟ್ಟಿ ತಯಾರಿಸುತ್ತದೆ. ಹಾಗೆಯೇ ಸುಮನ ಹಳ್ಳಿಯಲ್ಲಿರುವ ಮಕ್ಕಳ ಮನಪರಿವರ್ತನಾ ಕೇಂದ್ರದ ಮಕ್ಕಳ ಕೈಯಲ್ಲಿಈ ಆಕಾಶ ದೀಪವನ್ನು ಪ್ರತಿ ವರ್ಷ ರೂಪಿಸಿ ಮಾರಾಟ ಮಾಡುತ್ತಿದೆ. ಇದರಲ್ಲಿ ಬಂದ ಹಣವನ್ನುಆಮಕ್ಕಳಿಗೆ ನೀಡಿ ಸ್ವದೇಶಿತನ ಬೆಳೆಸುವ ಕಾರ್ಯಕ್ಕೆ ಉತ್ತೇಜಿಸುತ್ತಿದೆ.

Advertisement

ಈ ಹಿಂದೆ ಚೀನಾ ವಸ್ತುಗಳನ್ನು ದೂರವಿಡಲು ಆಕಾಶ ಬುಟ್ಟಿ ವಿನ್ಯಾಸಪಡಿಸಲಾಗಿತ್ತು. ಈಗ ಆತ್ಮನಿರ್ಭರ್‌ ಭಾರತ ದೀಪಗಳನ್ನು ಸಿದ್ಧಪಡಿಸುವ ಮೂಲಕಕುಂಬಾರಿಕೆ ವೃತ್ತಿಗೆ ಆರ್ಥಿಕ ಬಲ ನೀಡುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಸ್ವದೇಶಿತನ ಉಳಿಸುವ ಕಾರ್ಯ ಹೀಗೇ ನಡೆಯಲಿದೆ. ಶಿವಕುಮಾರ್‌ ಹೊಸಮನಿ, ಸಮರ್ಪಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ

 

ದೇವೇಶ್‌ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next