Advertisement

ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪ

07:41 AM Mar 11, 2019 | |

ಬಾಗೇಪಲ್ಲಿ: ಹಿಂದುಳಿದ ಮತ್ತು ಸದಾ ಬರಗಾಲ ಪೀಡಿತ ಪ್ರದೇಶದಲ್ಲಿ ನ್ಯಾಷನಲ್‌ ಕಾಲೇಜು ಪ್ರಾರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಬದುಕು ರೂಪಿಸಿಕೊಳ್ಳುವಂತಹ ಅವಕಾಶ ಮಾಡಿಕೊಟ್ಟಿದ್ದೇ ಅಲ್ಲದೆ ನೂರಾರು ಸಂಖ್ಯೆಯ ಉಪನ್ಯಾಸಕರಿಗೂ ಅನ್ನ ಕೊಟ್ಟು ಬದುಕು ರೂಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಶ್ರೇಯಸ್ಸು ಶಿಕ್ಷಣ ತಜ್ಞ ಡಾ.ಎಚ್‌.ನರಸಿಂಹಯ್ಯ ಅವರಿಗೆ ಸಲ್ಲುತ್ತದೆ ಎಂದು ನ್ಯಾಷನಲ್‌ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಪಿ.ವಿಜಯಕುಮಾರ್‌ ಅಭಿಪ್ರಾಯ ಪಟ್ಟರು.

Advertisement

ನ್ಯಾಷನಲ್‌ ಕಾಲೇಜಿನಲ್ಲಿ ಅಮೇಜಿಂಗ್‌-1986 ಎ ಬ್ಯಾಚ್‌ನ ವಿದ್ಯಾರ್ಥಿಗಳು ಏರ್ಪಡಿಸಿದ್ದ ಪುನರ್‌ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1984 ರಲ್ಲಿಯೇ ಉಪನ್ಯಾಸಕ ಹುದ್ದೆಗೆ ಸೇರಬೇಕಾದರೆ ಒಂದು ಲಕ್ಷ ಕೇಳುತ್ತಿದ್ದರು. ಅಂತಹ ಸಂದರ್ಭದಲ್ಲಿ ಒಂದು ಪೈಸೆಯೂ ಪಡೆಯದೆ ನನಗೆ ಉಪನ್ಯಾಸಕ ಹುದ್ದೆ ಕೊಟ್ಟವರು ಡಾ.ಎಚ್ಚೆನ್‌ರವರು ಎಂದು ಸ್ಮರಿಸಿದರು.

ಅಂತಹ ಮಹನೀಯರು ಬಾಗೇಪಲ್ಲಿಯಲ್ಲಿ ಕಾಲೇಜು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಮೂಲಕ ಬದುಕು ರೂಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. 1984-85 ರಲ್ಲಿ ಉತ್ತಮ ವಿದ್ಯಾರ್ಥಿಗಳ ಜೊತೆಗೆ ಉತ್ತಮವಾದ ಉಪನ್ಯಾಸಕ ಮಿತ್ರರೂ ಸಿಕ್ಕಿದ್ದರಿಂದ ತೆಲುಗು ಪ್ರಭಾವದ ಪ್ರದೇಶದಲ್ಲಿ ಉಪನ್ಯಾಸಕನಾಗಿ ಮುಂದುವರಿಯಲು ಸಾಧ್ಯವಾಯಿತು ಎಂದರು. 

ನ್ಯಾಷನಲ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪೊ.ಪಿ.ವೆಂಕಟರಾಮ್‌, ನಿವೃತ್ತ ಯೋಧ ಹಾಗೂ ಹಳೆಯ ವಿದ್ಯಾರ್ಥಿ ಕೆ.ಎಲ್‌.ಕೃಷ್ಣಮೂರ್ತಿ ಮಾತನಾಡಿದರು. ಸಹಾಯಕ ನಿರ್ದೇಶಕರಾದ ಡಾ.ಚಿನ್ನಕೈವಾರಮಯ್ಯ, ಡಾ.ಎ.ಎನ್‌.ನಾಗರಾಜ್‌, ಡಾ.ಮಂಜುನಾಥ್‌ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಡಾ.ಚಂದ್ರಮೋಹನ್‌ ರೆಡ್ಡಿ, ಛಾಗಲೇರು ಜಬೀವುಲ್ಲಾ, ಡಾ.ಎಚ್‌.ಅರುಣ್‌ ಕುಮಾರ್‌, ಡಾ.ಪ್ರಸಾದ್‌,

ಸೂರ್ಯನಾರಾಯಣ ರೆಡ್ಡಿ, ಡಾ.ಅಮರನಾರಾಯಣ ರೆಡ್ಡಿ, ತ್ರಿಯಂಭಕಸ್ವಾಮಿ, ಮೆಹಬೂಬ್‌ ಬಾಷ, ಎಂ.ಎಸ್‌.ನರಸಿಂಹಾರೆಡ್ಡಿ, ವೆಂಕಟರೆಡ್ಡಿ, ಶ್ರೀರಾಮ, ವೇಣು, ಮುಸ್ತಫಾ, ಬುಜೇಂದ್ರ, ಜಗನ್ನಾಥರೆಡ್ಡಿ, ವೆಂಕಟರಮಣಾರೆಡ್ಡಿ, ಚಂದ್ರಶೇಖರ ರೆಡ್ಡಿ, ಜುಬೇರ್‌, ಜಿ.ಎಲ್‌.ಮಂಜುನಾಥ್‌ ಇದ್ದರು. ಪ್ರಾಂಶುಪಾಲ ಪ್ರೊ.ಬಿ.ಪಿ.ವಿಜಯ್‌ ಕುಮಾರ್‌, ಪ್ರೊ.ಪಿ.ವೆಂಕಟರಾಮ್‌ ಮತ್ತು ನಿವೃತ್ತ ಯೋಧ ಕೆ.ಎಲ್‌.ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next