Advertisement

Land For Jobs Scam: ಲಾಲು ಯಾದವ್, ಪತ್ನಿ ರಾಬ್ರಿ ದೇವಿ, ಪುತ್ರ ತೇಜಸ್ವಿಗೆ ಜಾಮೀನು

11:36 AM Oct 04, 2023 | Team Udayavani |

ಬಿಹಾರ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್, ಅವರ ಪತ್ನಿ ರಾಬ್ರಿ ದೇವಿ ಮತ್ತು ಅವರ ಪುತ್ರ ಬಿಹಾರದ ಪ್ರಸ್ತುತ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

Advertisement

2004ರಿಂದ 2009ರವರೆಗೆ ಕೇಂದ್ರ ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ಲಾಲು ಪ್ರಸಾದ್ ಅವರ ಕುಟುಂಬಕ್ಕೆ ಭೂಮಿ ಹಸ್ತಾಂತರಿಸಿದ್ದಕ್ಕೆ ಪ್ರತಿಯಾಗಿ ಭಾರತೀಯ ರೈಲ್ವೇಯಲ್ಲಿ ನೇಮಕಾತಿ ಮಡಿದ ಆರೋಪದಲ್ಲಿ ಶಿಕ್ಷೆಗೆ ಒಳಗಾಗಿದ್ದರು.

ಜಾಮೀನು ಆದೇಶದ ಕುರಿತು ಪ್ರತಿಕ್ರಿಯಿಸಿದ ತೇಜಸ್ವಿ ಯಾದವ್, “ಇದು ಕಾನೂನು ವಿಷಯ, ನಾವು ನ್ಯಾಯಾಲಯದ ಮುಂದೆ (ಇಂದು) ಹಾಜರಾಗಿದ್ದೇವೆ. ನಮಗೆ ನ್ಯಾಯಾಲಯವು ಜಾಮೀನು ನೀಡಿದೆ” ಎಂದು ಹೇಳಿದರು.

ಜಾಮೀನು ಆದೇಶದ ನಂತರ, ಆರ್‌ಜೆಡಿ ಬೆಂಬಲಿಗರು ತಮ್ಮ ಪಕ್ಷದ ಮುಖ್ಯಸ್ಥರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಾ ನ್ಯಾಯಾಲಯದ ಹೊರಗೆ ಸಿಹಿ ಹಂಚಿದರು.

ಲಾಲು ಯಾದವ್ ಮತ್ತು ಇತರರು ತಮ್ಮ ವಿರುದ್ಧ ನೀಡಲಾದ ಸಮನ್ಸ್‌ನ ಅನ್ವಯ ಬುಧವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು.

Advertisement

ಕೇಂದ್ರೀಯ ತನಿಖಾ ದಳ (ಸಿಬಿಐ) ಜುಲೈ 3 ರಂದು ಲಾಲು ಮತ್ತು ಇತರರ ವಿರುದ್ಧ ಹೊಸ ಚಾರ್ಜ್ ಶೀಟ್ ಅನ್ನು ಸಲ್ಲಿಸಿತ್ತು ಇದರಲ್ಲಿ ಲಾಲು ಪ್ರಸಾದ್ ಅಧಿಕಾರದಲ್ಲಿದ್ದ ವೇಳೆ ರೈಲ್ವೆಯಲ್ಲಿ ಅಭ್ಯರ್ಥಿಗಳ ಅಕ್ರಮ ನೇಮಕಾತಿಗಳನ್ನು ಮಾಡಲಾಗಿದೆ, ರೈಲ್ವೆಯ ನಿಯಮಗಳು, ಮಾರ್ಗಸೂಚಿಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಲಾಗಿದೆ” ಎಂದು ಅದು ಉಲ್ಲೇಖಿಸಿತ್ತು. ಈ ವೇಳೆ ರೈಲ್ವೆಗೆ ಆಯ್ಕೆಯಾದ ಅಭ್ಯರ್ಥಿಗಳು ಲಾಲು ಪ್ರಸಾದ್ ಯಾದವ್ ಅವರಿಗೆ ಮಾರಾಟ ಮಾಡಿರುವುದಾಗಿ ಉಲ್ಲೇಖಿಸಿದೆ.

ಇದನ್ನೂ ಓದಿ: Tragic: ದೇವರ ದರ್ಶನದಿಂದ ವಾಪಾಸಾಗುವ ವೇಳೆ ದುರಂತ: ಕಾರು– ಟ್ರಕ್‌ ಅಪಘಾತದಲ್ಲಿ 8ಮಂದಿ ಸಾವು

Advertisement

Udayavani is now on Telegram. Click here to join our channel and stay updated with the latest news.

Next