Advertisement

ಉದ್ಯೋಗಕ್ಕೆ ಲಂಚ ಪಡೆಯುತ್ತಿದ್ದ ಲಾಲು, ದೀದಿ: PM ಮೋದಿ ಕಟು ಟೀಕಾ ಪ್ರಹಾರ

09:52 PM Jun 13, 2023 | Team Udayavani |

ನವದೆಹಲಿ: ನಮ್ಮ ಸರ್ಕಾರವು ಉದ್ಯೋಗ ಬಯಸುವ ಯುವಜನತೆಯ ಭವಿಷ್ಯವನ್ನು ಸಂರಕ್ಷಿಸಲು ಹೋರಾಡುತ್ತಿದ್ದರೆ, ಹಿಂದೆ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್‌ ಯಾದವ್‌ ಮತ್ತು ಮಮತಾ ಬ್ಯಾನರ್ಜಿಯವರು “ಉದ್ಯೋಗಕ್ಕೂ ಲಂಚ” ಪಡೆಯುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

Advertisement

ಮಂಗಳವಾರ ನವದೆಹಲಿಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ 70 ಸಾವಿರ ನೇಮಕಾತಿ ಪತ್ರಗಳನ್ನು ವಿತರಣೆ ಮಾಡಿ ವರ್ಚುವಲ್‌ ಆಗಿ ಮಾತನಾಡಿದ ಪ್ರಧಾನಿ ಮೋದಿ, “ಹಿಂದೆಲ್ಲ ನಿಮಗೆ ಸರ್ಕಾರಿ ಉದ್ಯೋಗ ಬೇಕಿದ್ದರೆ, ಪ್ರತಿಯೊಂದು ಹುದ್ದೆಗೂ ರೇಟ್‌ ಕಾರ್ಡ್‌ ಇರುತ್ತಿತ್ತು. ಈ ರೇಟ್‌ ಕಾರ್ಡ್‌ಗಳ ಮೂಲಕವೇ ಬಡವರನ್ನು ಲೂಟಿ ಮಾಡಲಾಗುತ್ತಿತ್ತು. ನಿಮಗೆ ಕಸ ಗುಡಿಸುವವನ ಕೆಲಸ ಬೇಕಿದ್ದರೆ ಒಂದು ದರ, ಚಾಲಕನ ಕೆಲಸ ಬೇಕಿದ್ದರೆ ಮತ್ತೂಂದು ದರ, ನರ್ಸ್‌, ಕ್ಲರ್ಕ್‌, ಶಿಕ್ಷಕ ಹೀಗೆ ಎಲ್ಲ ಹುದ್ದೆಗಳಿಗೂ ಒಂದು ದರದಂತೆ ಲಂಚ ಕೊಡಬೇಕಿತ್ತು. ಸ್ವಾರ್ಥ ರಾಜಕಾರಣಿಗಳು ನಿಮ್ಮಿಂದ ಈ ರೀತಿ ಹಣ ಲೂಟಿ ಮಾಡುತ್ತಿದ್ದರು’ ಎಂದು ಆರೋಪಿಸಿದ್ದಾರೆ.

ಸರ್ಕಾರಿ ಉದ್ಯೋಗಗಳ ನೇಮಕಾತಿ ವೇಳೆಯೂ ಕೆಲವು ವಂಶಾಡಳಿತದ ರಾಜಕೀಯ ಪಕ್ಷಗಳು ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರ ನಡೆಸುತ್ತಿದ್ದವು. ಆದರೆ, 2014ರಿಂದ ಅಂದರೆ ನಾವು ಅಧಿಕಾರಕ್ಕೆ ಬಂದಾಗಿನಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮೂಡಿದೆ, ಸ್ವಜನಪಕ್ಷವಾದ ಕೊನೆಯಾಗುತ್ತಿದೆ. ಭಾರತ ಈಗ ಹೆಚ್ಚು ಸ್ಥಿರ, ಸುರಕ್ಷಿತ ಮತ್ತು ಬಲಿಷ್ಠ ದೇಶವಾಗಿದೆ ಎಂದೂ ಮೋದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next