Advertisement

ಹಾಕಿ: ಲಾಲ್ರೆಮ್ಸಿಯಾಮಿ ಹ್ಯಾಟ್ರಿಕ್‌: ಇಂಗ್ಲೆಂಡ್‌ ವಿರುದ್ಧ 3-0 ಗೆಲುವು

11:11 PM Jul 29, 2023 | Team Udayavani |

ಬಾರ್ಸಿಲೋನಾ: ಸ್ಟ್ರೈಕರ್‌ ಲಾಲ್ರೆಮ್ಸಿಯಾಮಿ ಅವರ ಹ್ಯಾಟ್ರಿಕ್‌ ಗೋಲುಗಳ ಪರಾಕ್ರಮದಿಂದ ಭಾರತ ವನಿತಾ ಹಾಕಿ ತಂಡ ಇಂಗ್ಲೆಂಡ್‌ ವಿರುದ್ಧ 3-0 ಗೆಲುವು ಸಾಧಿಸಿದೆ. ಸ್ಪೇನ್‌ ಹಾಕಿ ಫೆಡರೇಶನ್‌ ಶತಮಾನೋತ್ಸವದ ಅಂಗ ವಾಗಿ ನಡೆದ ಹಾಕಿ ಸರಣಿ ಇದಾಗಿದೆ.

Advertisement

ಲಾಲ್ರೆಮ್ಸಿಯಾಮಿ ಪಂದ್ಯದ 13ನೇ, 17ನೇ ಹಾಗೂ 56ನೇ ನಿಮಿಷದಲ್ಲಿ ಗೋಲು ಸಿಡಿಸಿದರು. ಇಂಗ್ಲೆಂಡ್‌ ಅತ್ಯಂತ ಆಕ್ರಮಣಕಾರಿಯಾಗಿ ಆಟ ಆರಂಭಿಸಿದರೆ, ಭಾರತದ ಸಾವಧಾನ ದಿಂದಲೇ ಮುಂದಡಿ ಇಡುತ್ತ ಹೋಗಿ ಯಶಸ್ಸು ಕಂಡಿತು.

ಇದು ಈ ಕೂಟದಲ್ಲಿ ಭಾರತಕ್ಕೆ ಒಲಿದ ಮೊದಲ ಜಯವಾಗಿತ್ತು. ಇಂಗ್ಲೆಂಡ್‌ ಎದುರಿನ ಮೊದಲ ಪಂದ್ಯ 1-1ರಿಂದ, ಸ್ಪೇನ್‌ ವಿರುದ್ಧದ ಪಂದ್ಯ 2-2ರಿಂದ ಡ್ರಾಗೊಂಡಿತ್ತು. ಸವಿತಾ ನೇತೃತ್ವದ ಭಾರತ ಕೂಟದ ಅಜೇಯ ತಂಡವಾಗಿದ್ದು, ರವಿವಾರ ತನ್ನ ಕೊನೆಯ ಪಂದ್ಯವನ್ನು ಆಡಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next