Advertisement

ಲಕ್ಷ್ಮೇಶ್ವರ: ಗಾಡಾ ಓಡಿಸೋ ಹಬ್ಬಕ್ಕಿದೆ ಕೃಷಿ ಸಂಸ್ಕೃತಿ ಸ್ಪರ್ಶ

05:53 PM Mar 29, 2023 | Team Udayavani |

ಲಕ್ಷ್ಮೇಶ್ವರ: ದೇಶದ ಸಂಸ್ಕೃತಿಯ ಪ್ರತೀಕವಾದ ಕೃಷಿಯಲ್ಲಿನ ಆಚರಣೆ, ಸಂಪ್ರದಾಯ, ಪದ್ಧತಿಗಳು ಕೃಷಿ ಸಂಸ್ಕೃತಿಯ ಶ್ರೀಮಂತಿಕೆಗೆ ಕಾರಣವಾಗಿವೆ. ಹಬ್ಬ, ಜಾತ್ರೆ, ಉತ್ಸವದ ಸಂದರ್ಭದಲ್ಲಿ ಹಿಂದಿನಿಂದಲೂ ಆಚರಣೆಯಲ್ಲಿರುವ ಗಾಡಾ ಓಡಿಸುವ ಹಬ್ಬ ಅತ್ಯಂತ ಮಹತ್ವದ್ದಾಗಿದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

Advertisement

ಅಡರಕಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಜೋಡೆತ್ತಿನ ಖಾಲಿ ಗಾಡಾ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ರೈತರ ಜೀವನಾಡಿಯಾದ ಎತ್ತುಗಳ ಜೊತೆಯಲ್ಲಿ ನಿತ್ಯದ ಬದುಕು ಆರಂಭಗೊಳ್ಳುತ್ತದೆ. ಆದ್ದರಿಂದ ತಾವು ಪ್ರೀತಿಯಿಂದ ಸಾಕಿದ ಎತ್ತುಗಳಿಗೆ ಉತ್ತಮ ತರಬೇತಿ ನೀಡುವ ಮೂಲಕ ಎತ್ತುಗಳ ಓಟ, ವಿಶೇಷತೆ, ತಾಕತ್ತನ್ನು ಕಂಡು ಖುಷಿ ಪಡುವುದೇ ರೈತರಿಗೆ ಹಬ್ಬ. ಇಂತಹ ಸಾಂಪ್ರದಾಯಿಕ, ಗ್ರಾಮೀಣ ಸೊಬಗಿನ ಹಬ್ಬ, ಆಚರಣೆ, ಉತ್ಸವಗಳನ್ನು ಉಳಿಸುವಲ್ಲಿ ಯುವ ರೈತರ ಪಾತ್ರ ಮಹತ್ವದ್ದಾಗಿದೆ. ಕೃಷಿ ಚಟುವಟಿಕೆಗಳ ಬಿಡುವಿನ ವೇಳೆ ಗ್ರಾಮೀಣ ಭಾಗದಲ್ಲಿ ರೈತರು ಸಂತೋಷ-ಸಂಭ್ರಮಕ್ಕಾಗಿ ನಡೆಸುವ ಗಾಡಾ ಓಡಿಸುವ ಸ್ಪರ್ಧೆಗೆ ಸಹಾಯ-ಸಹಕಾರ ನೀಡುವುದಾಗಿ ಹೇಳಿದರು.

ಗ್ರಾಪಂ ಅಧ್ಯಕ್ಷ ನಿಂಗಪ್ಪ ಪ್ಯಾಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಕ್ರೀಡೆಗಳ ಹಾವಳಿಯಿಂದ ನಮ್ಮ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಎತ್ತುಗಳನ್ನು ಓಡಿಸುವುದು, ಅವುಗಳ ಪ್ರೀತಿ ನೋಡುವುದು ರೈತಾಪಿ ಕುಟುಂಬದ ಯುವಕರಿಗಂತೂ ಅಚ್ಚುಮೆಚ್ಚು. ಈ ನಿಟ್ಟಿನಲ್ಲಿ ಪ್ರತಿ ವರ್ಷ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ನಿಮಿತ್ತ ಗಾಡಾ ಓಡಿಸುವ ಸ್ಪರ್ಧೆ ಏರ್ಪಡಿಸುತ್ತಿದ್ದೇವೆ ಎಂದರು.

ಗ್ರಾಪಂ ಉಪಾಧ್ಯಕ್ಷೆ ಪವಿತ್ರಾ ಗಡೆಪ್ಪನವರ, ಮುದಿಯಪ್ಪ ಹವಳದ, ಬಿ. ತಿಪ್ಪೇಸ್ವಾಮಿ, ಚನ್ನಬಸಪ್ಪ ಹಳಮನಿ, ಭೀಮಣ್ಣ ಯಂಗಾಡಿ, ಗಂಗನಗೌಡ ಪಾಟೀಲ, ರಾಮಣ್ಣ ಚಿಕ್ಕಣ್ಣವರ, ಮಹಾಂತೇಶ ಹವಳದ, ಗಣೇಶ ನಾಯಕ, ಕುಮಾರ ಚಕ್ರಸಾಲಿ, ಮುತ್ತಣ್ಣ ಗಡೆಪ್ಪನವರ, ಉಮೇಶ ಚಿಕ್ಕಣ್ಣವರ, ಮಂಜುನಾಥ ಹೊಗೆಸೊಪ್ಪಿನ, ಸಿದ್ದು ಹವಳದ, ರಾಮಣ್ಣ ಕದಡಿ, ಕಲ್ಲಪ್ಪ ಮತ್ತಿಕಟ್ಟಿ, ಸೋಮಪ್ಪ ಹವಳದ, ಅಶೋಕ ಹವಳದ, ಮುತ್ತು ಬಂಗಿ, ಪ್ರಶಾಂತ ಮಜ್ಜಿಗುಡ, ಹರೀಶ ಲಮಾಣಿ, ವಿಶ್ವನಾಥ ಮತ್ತಿಕಟ್ಟಿ, ಕಿರಣ ಪಾಟೀಲ, ಪ್ರಸಾದಗೌಡ ಪಾಟೀಲ, ಹನುಮಂತ ಜಾಲಿಮರದ, ಸಂತೋಷ ಬನಪ್ಪಗೌಡ್ರು, ಸಂದೀಪ ಇಟಗಿ ಸೇರಿ ಅಡರಕಟ್ಟಿ ಗ್ರಾಮದ ಗುರು, ಹಿರಿಯರು, ಯುವಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next