Advertisement

ಹರಿಕಥಾ ವಿ|ಲಕ್ಷ್ಮಣದಾಸ್‌ ವೇಲಣಕರ್‌ ನಿಧನ

10:57 PM Dec 22, 2021 | Team Udayavani |

ಬೆಂಗಳೂರು: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಆಧ್ಯಾತ್ಮಿಕ ಚಿಂತಕ ಹಾಗೂ ಪ್ರವಚನಕಾರ ಲಕ್ಷ್ಮಣದಾಸ್‌ ವೇಲಣಕರ್‌ (82) ಅವರು ಡಿ. 23ರಂದು ನಗರದಲ್ಲಿರುವ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದ್ದಾರೆ.

Advertisement

ಮೃತರು ಪತ್ನಿ ಹಾಗೂ ಪುತ್ರ, ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್‌ ದತ್ತಾತ್ರೇಯ ವೇಲಣಕರ್‌ ಅವರನ್ನು ಅಗಲಿದ್ದಾರೆ. ಹೆಬ್ಟಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾಗಿದ್ದ ಅವರು ಹೆಸರಾಂತ ಹರಿಕಥಾ ವಿದ್ವಾಂಸರಾದ ಸಂತ ಭದ್ರಗಿರಿ ಅಚ್ಯುತದಾಸ್‌ ಮತ್ತು ಕೇಶವದಾಸರ ಶಿಷ್ಯರಾಗಿದ್ದರು.

ಅನಂತರ ರಾಜ್ಯದಲ್ಲಿ ಹರಿಕಥಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಸಾಕಷ್ಟು ಶ್ರಮಿಸಿದ್ದರು. ಗೋರಖ್‌ಪುರದ ಗೀತಾ ಪ್ರಸ್‌ನ ನೂರಕ್ಕೂ ಅಧಿಕ ಅಧ್ಯಾತ್ಮಿಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next