Advertisement
ಅಯೋಧ್ಯೆಗೆ ನಾಲ್ಕು ಪಥದ ರಸ್ತೆಮಾರ್ಗಗಳನ್ನು ಕಲ್ಪಿಸುವ ಯೋಜನೆಯ ಭಾಗವಾಗಿಯೇ ಲಕ್ಷ್ಮಣ ಪಥದ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅನುಮತಿ ನೀಡಿದ ಕೂಡಲೇ ಕಾಮಗಾರಿ ಆರಂಭ ಗೊಳ್ಳಲಿದೆ. ಈಗಾಗಲೇ ಜನ್ಮಭೂಮಿ ಪಥ, ಭಕ್ತಿ ಪಥ ಮತ್ತು ಧರ್ಮಪಥಗಳ ಕಾಮಗಾರಿ ಪೂರ್ಣಗೊಂಡಿದ್ದು, ನಯಾಘಾಟ್ ಮತ್ತು ಸಹದತ್‌ಗಂಜ್ ನಡುವಿನ 13 ಕಿ.ಮೀ.ಉದ್ದದ ರಾಮಪಥ ನಿರ್ಮಾಣವೂ ಬಿರುಸಾಗಿ ನಡೆಯುತ್ತಿದೆ.
ರಾಮಮಂದಿರ ನಿರ್ಮಾಣದ ಬಳಿಕ ಮಂದಿರವನ್ನು ನೋಡಬಯಸುವ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂಬೈನಿಂದ ಅಯೋಧ್ಯೆಗೆ ವಿಶೇಷ ರೈಲಿನ ಕಾರ್ಯಾಚರಣೆ ಆರಂಭವಾಗಲಿದೆ. 2024ರ ಜನವರಿ 24ರ ಬಳಿಕ ದಾದರ್‌ನಿಂದ ಅಯೋಧ್ಯೆಗೆ ರೈಲುಸೇವೆ ದೊರಕಲಿದೆ ಎಂದು ಬಿಜೆಪಿ ಮುಂಬೈ ಘಟಕದ ಅಧ್ಯಕ್ಷ ಆಶಿಶ್ ಶೆಲಾರ್ ಮಾಹಿತಿ ನೀಡಿದ್ದಾರೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದ್ದು, ಆ ಬಳಿಕ ದೇಗುಲ ದರ್ಶನಕ್ಕೆ ಯೋಜನೆ ಸಹಕಾರಿಯಾಗಲಿದೆ ಎಂದಿದ್ದಾರೆ.