Advertisement

ಉಡುಪಿ: ಲಕ್ಷದೀಪದ ತೆಪ್ಪೋತ್ಸವಕ್ಕೆ ಯಕ್ಷ ವೈಭವದ ಮೆರುಗು

10:21 AM Dec 01, 2020 | sudhir |

ಉಡುಪಿ : ಶ್ರೀಕೃಷ್ಣ ಮಠದಲ್ಲಿ ನಾಲ್ಕು ದಿನಗಳ ಲಕ್ಷದೀಪೋತ್ಸವ ಸೋಮವಾರ ಸಮಾಪನಗೊಂಡಿತು. ನಾಲ್ಕನೆಯ ದಿನದ ದೀಪೋತ್ಸವದ ತೆಪ್ಪೋತ್ಸವವು ಯಕ್ಷಗಾನ ಶೈಲಿಯಲ್ಲಿ ವಿರಾಜಿಸಿತು. ಸ್ಥಳೀಯ ನೇಕಾರರಿಂದ ಮಾಡಿಸಿದ ಯಕ್ಷಗಾನದ ಕಸೆ ಸೀರೆಯನ್ನು (ಉಡುಪಿ ಸೀರೆ) ಉತ್ಸವಮೂರ್ತಿಗೆ ಸಮರ್ಪಿಸಿ ಬಳಿಕ ಇದರಿಂದ ತೆಪ್ಪವನ್ನು ಅಲಂಕರಿಸಲಾಯಿತು. ಯಕ್ಷಗಾನದ
ಕೇದಗೆ ಮಂದಲೆ, ವೀರಗಸೆಯಿಂದ ತೆಪ್ಪ ಮಿಂಚಿತು. ಸೋಮವಾರವೂ ದೊಂದಿ ಬೆಳಕಿನಿಂದ ತೆಪ್ಪೋತ್ಸವವು ಕಂಗೊಳಿಸಿತು.

Advertisement

ನಿತ್ಯದ ವಾದ್ಯೋಪ ಕರಣಗಳಲ್ಲದೆ ಪಂಚವಾದ್ಯಗಳನ್ನು ಕಲಾವಿದರು ನುಡಿಸಿದರು. ತೆಪ್ಪೋತ್ಸವದಲ್ಲಿ ಪರ್ಯಾಯ
ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು, ಕೃಷ್ಣಾಪುರ, ಪಲಿಮಾರು ಮಠದ ಹಿರಿಯ ಮತ್ತು ಕಿರಿಯ ಶ್ರೀಪಾದರು
ಹಾಗೂ ಕಾಣಿಯೂರು ಮಠದ ಮಠಾಧೀಶರು ಪಾಲ್ಗೊಂಡಿದ್ದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next