Advertisement

ಶ್ರೀಕೃಷ್ಣಮಠ: ಬಾಳೆದಿಂಡು ಅಲಂಕೃತ ತೆಪ್ಪೋತ್ಸವ

12:57 AM Nov 18, 2021 | Team Udayavani |

ಉಡುಪಿ: ಶ್ರೀಕೃಷ್ಣಮಠದಲ್ಲಿ ಬುಧವಾರ ಎರಡನೆಯ ದಿನದ ಲಕ್ಷದೀಪೋತ್ಸವದ ಅಂಗವಾಗಿ ಬಾಳೆದಿಂಡಿನಿಂದ ಅಲಂಕೃತಗೊಂಡ ತೆಪ್ಪದಲ್ಲಿ ಉತ್ಸವಮೂರ್ತಿಯನ್ನು ಇರಿಸಿ ಪೂಜೆ ಸಲ್ಲಿಸಲಾಯಿತು.

Advertisement

ಮಂಗಳವಾರ ಮಾವಿನ ಕುಡಿಯ ತೋರಣಗಳಿಂದ ಅಲಂಕರಿಸಲಾಗಿತ್ತು. ಬುಧವಾರವೂ ಹಿಲಾಲಿ ದೀಪದಿಂದ ತೆಪ್ಪೋತ್ಸವ ಕಂಗೊಳಿಸಿತು. ತೆಪ್ಪೋತ್ಸವ ಬಳಿಕ ರಥಬೀದಿಯಲ್ಲಿ ಉತ್ಸವ ನಡೆಯುವಾಗ ಹಣತೆಗಳ ದೀಪಗಳನ್ನು ಭಕ್ತರು ಹಚ್ಚಿ ಸಮರ್ಪಿಸಿದರು. ಪರ್ಯಾಯ ಅದಮಾರು, ಕೃಷ್ಣಾಪುರ, ಕಾಣಿಯೂರು, ಶೀರೂರು ಮಠಾಧೀಶರು ಉತ್ಸವದಲ್ಲಿ ಪಾಲ್ಗೊಂಡರು.

ಮಂಗಳವಾರ ಲಕ್ಷದೀಪೋತ್ಸವ ವೇಳೆ ಯಜುರ್ವೇದ ಪಾರಾಯಣವನ್ನು ವೇದಮುಖೋದ್ಗತ ಘನಪಾಟಿ ಗೋಕರ್ಣದ ಮಹಾಬಲ ಭಟ್‌ ಮತ್ತು ತಂಡ ನಡೆಸಿಕೊಟ್ಟರೆ, ಬುಧವಾರ ಮೂಲತಃ ಹುಬ್ಬಳ್ಳಿಯವರಾದ ನಿಟ್ಟೂರು ನಿವಾಸಿ ಧರ್ಮಣ್ಣ ಭಕ್ತಿ ಸಂಗೀತವನ್ನು ನಡೆಸಿಕೊಟ್ಟರು. ಬೆಂಗಳೂರಿನ ಜಯರಾಮಪ್ಪ ಮತ್ತು ಹಾಸನದ ಲಕ್ಷ್ಮೀಪ್ರಸನ್ನ ಬಳಗದವರ ನಾಗಸ್ವರ ವಾದನ ನಡೆಯಿತು.

 

Advertisement

Udayavani is now on Telegram. Click here to join our channel and stay updated with the latest news.

Next