Advertisement
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಮುಖಂಡ ಸಂಜೀವನ ಯಾಕಾಪುರ, ತಾಲೂಕಿನ ಹೂಡದಳ್ಳಿ, ದೋಟಿಕೋಳ, ನಾಗಾಇದಲಾಯಿ ಗ್ರಾಮಗಳಲ್ಲಿರುವ ಸಣ್ಣ ನೀರಾವರಿ ಕೆರೆಗಳ ಒಡ್ಡುಗಳು ಮಳೆ ನೀರಿನಿಂದ ಭರ್ತಿಯಾಗಿ ರಾತೋರಾತ್ರಿ ಒಡೆದು ಹೋಗಿದ್ದವು. ಇದರಿಂದ ಅನೇಕ ಹೊಲಗಳಲ್ಲಿನ ಬೆಳೆ ನಾಶವಾಗಿದ್ದವು. ಕೆಲವರ ಮನೆಗಳಲ್ಲಿನ ಆಹಾರಧಾನ್ಯ, ಬೆಲೆಬಾಳುವ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಆದರೂ ಇವರಿಗೆ ಪರಿಹಾರ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ಕಾರ್ಯಕರ್ತರಾದ ರಘು ದೇಸಾಯಿ, ಶೇರಖಾನ್, ಧನರಾಜ ಪಾಟೀಲ, ಪಾಂಡುರಂಗ ಭಕ್ತಂಪಳ್ಳಿ, ಕೈಲಾಶ ಮೇಲಿನಕೇರಿ, ಸೂರ್ಯಕಾಂತ ಪೂಜಾರಿ, ಗೌಸ್ ಪಟೇಲ, ಆಕಾಶ ಬೇಡರ, ಮಹೆತಾಬ್, ಶಿವರಾಜ, ವೀರಶೆಟ್ಟಿ ಸೂಗುರ, ಅಜರ ಪಟೇಲ, ಶ್ರೀನಿವಾಸ ಇನ್ನಿತರರಿದ್ದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್ ಅಂಜುಮ ತಬಸುಮ ಅವರಿಗೆ ಸಲ್ಲಿಸಲಾಯಿತು. ಕೆರೆ ಬಗ್ಗೆ ನುರಿತ ತಜ್ಞರಿಂದ ಪರಿಶೀಲಿಸಲಾಗುವುದು. ಮನೆ ಹಾನಿಗೊಳಗಾದವರಿಗೆ ಪರಿಹಾರ ನೀಡಲಾಗುವುದು ಎಂದು ತಹಶೀಲ್ದಾರರು ಭರವಸೆ ನೀಡಿದರು.
ಚಿಂಚೋಳಿ-ಮನ್ನಾಎಕ್ಕೆಳ್ಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಆಗಿತ್ತು. ಪಿಎಸ್‌ಐ ಉದ್ದಂಡಪ್ಪ ಮತ್ತು ನಿಂಗಪ್ಪ ಪಾಟೀಲ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.