Advertisement

“ಮುಂದಿನ ಚುನಾವಣೆಗೆ ಹಣ ಮಾಡಲು ಕೆರೆಗಳ ಡಿನೋಟಿಫೈ’

11:37 AM Jul 23, 2017 | |

ಮೈಸೂರು: ರಾಜ್ಯ ಸರ್ಕಾರ ಮುಂದಿನ ಚುನಾವಣೆಗೆ ಮಾಡುವ ಉದ್ದೇಶದಿಂದ ಕೆರೆಗಳನ್ನು ಡಿನೋಟಿಫೈ ಮಾಡಿ ರಿಯಲ್‌ ಎಸ್ಟೇಟ್‌ನವರಿಗೆ ಮಾರಾಟ ಮಾಡಲು ಮುಂದಾಗಿದೆ ಎಂದು ಮಾಜಿ ಸಂಸದ ಎಚ್‌.ವಿಶ್ವನಾಥ್‌ ದೂರಿದರು.

Advertisement

ಕೆರೆಗಳಲ್ಲಿ ನೀರಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಕೆರೆಗಳನ್ನು ಡಿನೋಟಿಫಿಕೇಷನ್‌ ಮಾಡುತ್ತಿದ್ದು, ಅದರಂತೆ ಬೆಂಗಳೂರಿನ 195 ಕೆರೆಗಳು ಸೇರಿದಂತೆ , ರಾಜ್ಯದ 1300 ಕೆರೆಗಳನ್ನು ಡಿನೋಟಿಪೈ ಮಾಡಲು ಮುಂದಾಗಿದೆ. ಈ ಸಂಬಂಧ ವಿಧಾನಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಸರ್ಕಾರದ ಈ ತೀರ್ಮಾನ ನಿಜಕ್ಕೂ ಆಘತಕಾರಿ ಸಂಗತಿ.

ರಾಜ್ಯದಲ್ಲಿ ಈವರೆಗೂ ಅಧಿಕಾರ ನಡೆಸಿರುವ ಯಾವ ಸರ್ಕಾರಗಳೂ ಕೆರೆಗಳನ್ನು ನಿರ್ಮಿಸಿಲ್ಲ. ಎಲ್ಲಾ ಕೆರೆಗಳನ್ನು ರಾಜರ ಕಾಲದಲ್ಲಿ ನಿರ್ಮಿಸಲಾಗಿದೆ. ಇನ್ನೂ ಒಂದೆಡೆ ಕೆರೆಗಳ ಸಂರಕ್ಷಣೆಗೆ ಕೋಟ್ಯಂತರ ರೂ.ವ್ಯಯ ಮಾಡುವ ಸರ್ಕಾರ ಮತ್ತೂಂದೆಡೆ ಕೆರೆಗಳನ್ನು ಡಿನೋಟಿಫೈç ಮಾಡುತ್ತಿರುವುದು ಮೂರ್ಖತನದ ನಿರ್ಧಾರ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಹಣ ಮಾಡುವ ಹುನ್ನಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ 10 ಕೋಟಿ ರೂ. ಕೊಡುವುದಾಗಿ ಹೇಳಿದ್ದಾರೆ. ಹೀಗಾಗಿ ರಾಜ್ಯದ ಕೆರೆಗಳನ್ನು ಡಿನೋಟಿಫೈ ಮಾಡಿ, ರಿಯಲ್‌ ಎಸ್ಟೇಟ್‌ನವರಿಗೆ ಮಾರಾಟ ಮಾಡಿ ಹಣ ಸಂಗ್ರಹಣೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಹೀಗಿದ್ದರೂ ಮುಂದಿನ ಚುನಾವಣೆಯಲ್ಲಿ ಅವರು ಗೆಲ್ಲುವುದಿಲ್ಲ. ಆದ್ದರಿಂದ ಕೆರೆಗಳನ್ನು ಡಿನೋಟಿಫೈ ಮಾಡುವ ಸರ್ಕಾರದ ತೀರ್ಮಾನ ಜನರ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಕೆರೆಗಳ ಸಂರಕ್ಷಣೆಗೆ ಜೆಡಿಎಸ್‌ ಬದ್ಧವಾಗಿದ್ದು, ಪರಿಸರ ವಾದಿಗಳು ಸಹ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಬೇಕಿದೆ. ಇಲ್ಲವಾದಲ್ಲಿ ಇದು ಮತ್ತೂಂದು ಅರ್ಕಾವತಿ ಆಗಲಿದೆ ಎಂದರು.

Advertisement

ಅನವಶ್ಯಕ ಚರ್ಚೆಗಳು: ರಾಜ್ಯದಲ್ಲಿ ಕೆರೆಗಳನ್ನು ಡಿನೋಟಿಫೈ ಮಾಡಲು ಮುಂದಾಗಿರುವ ಸರ್ಕಾರ ತನ್ನ ಆಡಳಿತ ವೈಫ‌‌ಲ್ಯ, ದುರುದ್ದೇಶಗಳನ್ನು ಜನರ ಮನಸ್ಸಿನಿಂದ ದೂರ ಮಾಡಲು ಇಲ್ಲದ ವಿಷಯಗಳ ಕುರಿತು ಚರ್ಚೆ ಆರಂಭಿಸಿದೆ. ಒಂದೆಡೆ ಕನ್ನಡ ಧ್ವಜ ಬದಲಾವಣೆ ಚರ್ಚೆಯಾದರೆ, ಮತ್ತೂಂದೆಡೆ ಲಿಂಗಾಯಿತ ಮತ್ತು ವೀರಶೈವ ಧರ್ಮದ ವಿಷಯ ಪ್ರಸ್ತಾಪಿಸಿ ಬೆಂಕಿ ಹಚ್ಚಿದ್ದಾರೆ.

ಆದರೆ, ವೀರಶೈವ ಹಾಗೂ ಲಿಂಗಾಯಿತ ಧರ್ಮಗಳು ಒಂದೇ ಎಂಬುದಾಗಿ ಅಖೀಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪಕ ಹಾನಗಲ್‌ ಕುಮಾರಸ್ವಾಮಿ ಅವರು 1904ರಲ್ಲೇ ಹೇಳಿದ್ದಾರೆ. ಇನ್ನೂ ಕನ್ನಡ ಧ್ವಜ ಬದಲಾವಣೆ ಮಾಡುವ ಬಗ್ಗೆ ಯಾರೋಬ್ಬರೂ ಒತ್ತಾಯಿಸಿರಲಿಲ್ಲ. ಹೀಗಿದ್ದರೂ ಕನ್ನಡ ಧ್ವಜದ ವಿಷಯವನ್ನು ಅನಾವಶ್ಯಕವಾಗಿ ಚರ್ಚೆಗೆ ತರಲಾಗುತ್ತಿದ್ದು, ಇದು ಸಹ ಚುನಾವಣಾ ಗಿಮಿಕ್‌ ಆಗಿದೆ ಎಂದು ಕಿಡಿಕಾರಿದರು.

ಸಾಹಿತಿಗಳಿಗೆ ಅವಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಸಂದಿ ಪಾಠ ಮಾಡಿದ್ದರೂ ಅವರಿಗೆ ಏಕವಚನ-ಬಹುವಚನವೇ ಸರಿಯಾಗಿ ತಿಳಿದಿಲ್ಲ. ಇತ್ತೀಚೆಗೆ ಹಿರಿಯ ಸಾಹಿತಿ ಡಾ.ಚೆನ್ನವೀರ ಕಣವಿ ಅವರು ಮನವಿ ನೀಡಲು ಬಂದ ಸಂದರ್ಭದಲ್ಲಿ ಕುಳಿತುಕೊಂಡೇ ಮನವಿ ಸ್ವೀಕರಿಸುವ ಮೂಲಕ ಮುಖ್ಯಮಂತ್ರಿಗಳು ಸಾಹಿತಿಗಳಿಗೆ ಅವಮಾನ ಮಾಡಿದ್ದಾರೆ.

ಇದು ಮುಖ್ಯಮಂತ್ರಿಗಳ ದುರಹಂಕಾರದ ಸಂಸ್ಕೃತಿಯಾಗಿದ್ದು, ಇವರು ಕನ್ನಡ ಧ್ವಜದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ನಗರಾಧ್ಯಕ್ಷ ಹರೀಶ್‌ಗೌಡ, ಮುಖಂಡರಾದ ರೇವಣ್ಣ, ಸೋಮಸುಂದರ್‌ ಇತರರು ಹಾಜರಿದ್ದರು.

ತಹಶೀಲ್ದಾರ್‌ ಡೆತ್‌ನೋಟ್‌ ಬಹಿರಂಗಪಡಿಸಿ: ಮೈಸೂರು ಜಿಲ್ಲೆ ತಿ.ನರಸೀಪುರದ ತಹಶೀಲ್ದಾರ್‌ ಶಂಕರಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಬರೆದಿರುವ ಡೆತ್‌ನೋಟ್‌ ಬಹಿರಂಗಪಡಿಸುವಂತೆ ಎಚ್‌.ವಿಶ್ವನಾಥ್‌ ಆಗ್ರಹಿಸಿದರು. ಶಂಕರಯ್ಯ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿರುವ ಡೆತ್‌ನೋಟ್‌ 2 ಪುಟಗಳಿದ್ದು, ಇದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಆದರೆ ಶಂಕರಯ್ಯ ಅವರ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಹೀಗಾಗಿ ಡೆತ್‌ನೋಟ್‌ ಬಹಿರಂಗಪಡಿಸುವ ಮೂಲಕ ಅದರಲ್ಲಿ ಯಾರ ಹೆಸರಿದೆ ಎಂಬುದನ್ನು ತಿಳಿಸಬೇಕಿದೆ. ಡೆತ್‌ನೋಟ್‌ ಬಹಿರಂಗಪಡಿಸದಂತೆ ಎಸ್ಪಿ$ಅವರಿಗೆ ಯಾರಿಂದಾದರೂ ಒತ್ತಡವಿದೆಯೇ ಎಂದು ವಿಶ್ವನಾಥ್‌ ಪ್ರಶ್ನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next