Advertisement

ಟಿ ಸೀರಿಸ್ -ಲಹರಿ ಸಂಸ್ಥೆ ತೆಕ್ಕೆಗೆ ‘RRR’ ಆಡಿಯೋ ರೈಟ್ಸ್ :ಸೇಲಾಗಿದ್ದು ಎಷ್ಟು ಕೋಟಿಗೆ ?  

05:21 PM Jul 27, 2021 | Team Udayavani |

ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲು ಬರುತ್ತಿರುವ ‘ಆರ್ ಆರ್ ಆರ್’ ಚಿತ್ರದ ಆಡಿಯೋ ರೈಟ್ಸ್ ಬಿಗ್ ಮೊತ್ತಕ್ಕೆ ಮಾರಾಟವಾಗಿದೆ.

Advertisement

ಸೂಪರ್ ಹಿಟ್ ಸಿನಿಮಾಗಳ ಸರದಾರ ಎಸ್.ಎಸ್. ರಾಜಮೌಳಿ ನಿರ್ದೇಶನದ RRR ಚಿತ್ರದ ಆಡಿಯೋ ಹಕ್ಕನ್ನು ಟಿ ಸೀರಿಸ್ ಮತ್ತು ಲಹರಿ ಸಂಸ್ಥೆಗಳು ಜಂಟಿಯಾಗಿ ಖರೀದಿಸಿವೆ. ಈ ಕುರಿತು ಲಹರಿ ಹಾಗೂ ಟಿ-ಸೀರಿಸ್‌ ಸಂಸ್ಥೆ ಅಧಿಕೃತವಾಗಿ ಟ್ವೀಟ್‌ ಮಾಡಿ ವಿಷಯ ಖಚಿತ ಪಡಿಸಿದೆ.

25 ಕೋಟಿಗೆ ಮಾರಾಟ ?

‘RRR’ ಮೂವಿ ಬಿಡುಗಡೆ ಮುನ್ನವೆ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದ ಆಡಿಯೋ ಹಕ್ಕುಗಳಿಂದ ಕೋಟ್ಯಂತರ ರೂಪಾಯಿ ಬಾಚಿಕೊಂಡಿದೆ. ಮೂಲಗಳ ಪ್ರಕಾರ ಈ ಸಿನಿಮಾದ ಆಡಿಯೊ ಹಕ್ಕುಗಳನ್ನು 25 ಕೋಟಿ ರೂಗೆ ಖರೀದಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಪಂಚ ಭಾಷೆಗಳಲ್ಲಿ ರಿಲೀಸ್ :

Advertisement

ಪಂಚ ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಈ ಸಿನಿಮಾವನ್ನು ಸುಮಾರು 400 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಎಂ.ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಚಿತ್ರವು 20ನೇ ಶತಮಾನದ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕುಮರಾಂ ಭೀಮ್‌ ಅವರ ಜೀವನವನ್ನು ಆಧರಿಸಿದ ಕಥೆ. ಈ ಚಿತ್ರದಲ್ಲಿ ಚರಣ್ ರಾಮರಾಜು ಪಾತ್ರದಲ್ಲಿ, ಎನ್‌ಟಿಆರ್ ಜೂನಿಯರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟರಾದ ಅಜಯ್ ದೇವ್‌ಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next