Advertisement

ಲೇಡೀಸ್‌ ಹಾಸ್ಟೆಲ್‌ಗ‌ಳಲ್ಲಿ ಸಿಸಿಟೀವಿ: ಆಂಜನೇಯ

03:45 AM Jan 07, 2017 | |

ಬೆಂಗಳೂರು: ವಿದ್ಯಾರ್ಥಿನಿಯರ ಹಾಸ್ಟೆಲ್‌ಗ‌ಳಲ್ಲಿ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವುದರೊಳಗೆ ಸಿಸಿಟಿವಿ ಕ್ಯಾಮೆರಾ ಆಳವಡಿಸಲು ಕ್ರಮ ಕೈಗೊಳ್ಳುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ತಿಳಿಸಿದ್ದಾರೆ.

Advertisement

ಸರ್ಕಾರಿ ಹಾಸ್ಟೆಲ್‌ಗ‌ಳಲ್ಲಿನ ಅವ್ಯವಸ್ಥೆ ಕುರಿತು ಶುಕ್ರವಾರ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ನೇತೃತ್ವದ ನಿಯೋಗದಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗ‌ಳಲ್ಲಿ ವಾರ್ಡನ್‌, ಭದ್ರತಾ ಹಾಗೂ ಅಡುಗೆ ಸಿಬ್ಬಂದಿ ಸಮೇತ ಎಲ್ಲ ಸಿಬ್ಬಂದಿಯೂ ಮಹಿಳೆಯರೇ ಇರಲಿದ್ದಾರೆ ಎಂದು ಹೇಳಿದರು.

ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗ‌ಳಲ್ಲಿ ಅಳವಡಿಸಲು ಬೇಕಿರುವ ಸಿಸಿಟಿವಿ ಕ್ಯಾಮೆರಾ ಹಾಗೂ ಮಹಿಳಾ ಸಿಬ್ಬಂದಿಗಳ ಸಂಖ್ಯೆ ತಿಳಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸೀಸಿ ಕ್ಯಾಮೆರಾ ಖರೀದಿ ಹಾಗೂ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವುದರೊಳಗೆ ಎಲ್ಲೆಡೆ ಭದ್ರತೆ ವ್ಯವಸ್ಥೆ ಇರಲಿದೆ. ಸ್ವಂತ ಕಟ್ಟಡ ಇರುವ ವಸತಿ ನಿಲಯಗಳಲ್ಲಿ ಮೊದಲ ಹಂತದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಕೆಲವೆಡೆ ಬಾಡಿಗೆ ಕಟ್ಟಡ ಇರುವುದರಿಂದ ಅವುಗಳನ್ನು ಸ್ವಂತ ಕಟ್ಟಡಕ್ಕೆ ವರ್ಗಾಯಿಸಿ ಅಲ್ಲಿಯೂ ಇದೇ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಮನವಿ:
ಇದಕ್ಕೂ ಮುನ್ನ ಮನವಿ ಪತ್ರ ನೀಡಿದ ಬಿಜೆಪಿ ಮಹಿಳಾ ಮೋರ್ಚಾದ ನಿಯೋಗ, ರಾಜಾÂದ್ಯಂತ ಇರುವ ಸರ್ಕಾರಿ ವಿದ್ಯಾರ್ಥಿ ನಿಲಯಗಳು ಅವ್ಯವಸ್ಥೆಯ ಆಗರವಾಗಿವೆ. ಬಹುತೇಕ ಕಡೆ ಮೂಲಸೌಕರ್ಯ ಇಲ್ಲದೆ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುತ್ತಿದ್ದಾರೆ, 

Advertisement

ರಾಜ್ಯದಲ್ಲಿ 1320 ವಿದ್ಯಾರ್ಥಿ ನಿಲಯಗಳ ಪೈಕಿ 740 ಕಡೆ ನಿಯೋಗ ಭೇಟಿ ನೀಡಿ 63578 ವಿದ್ಯಾರ್ಥಿನಿಯರನ್ನು ಸಂಪರ್ಕಿಸಿದೆ. ಶೇ. 28 ವಿದ್ಯಾರ್ಥಿನಿಲಯಗಳಲ್ಲಿ ಒಂದು ಕೊಠಡಿಯಲ್ಲಿ ಐದು ವಿದ್ಯಾರ್ಥಿನಿಯರು ಇರುವ ಕಡೆ 20 ರಿಂದ 30 ಮಂದಿಯನ್ನು ತುಂಬಲಾಗಿದೆ. ಬಹುತೇಕ ಕಡೆ ಶೌಚಾಲಯ, ಸ್ನಾನದ ಗೃಹ, ಕುಡಿಯುವ ನೀರು ವ್ಯವಸ್ಥೆ ಕೆಲವೆಡೆ ಸರಿಯಿಲ್ಲ. 

352 ವಿದ್ಯಾರ್ಥಿನಿಲಯಗಳಲ್ಲಿ ಸ್ನಾನದ ಗೃಹ ಹಾಗೂ ಶೌಚಾಲಯ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಇಲ್ಲ. 317 ವಿದ್ಯಾರ್ಥಿನಿಲಯಗಳಲ್ಲಿ ಬಿಸಿ ನೀರಿನ ವ್ಯವಸ್ಥೆ ಇಲ್ಲ. 434 ಕಡೆ ಗ್ರಂಥಾಲಯ ಇಲ್ಲ. 291 ಕಡೆ ಮಂಚವಿದ್ದರೂ ಹಾಸಿಗೆ, ದಿಂಬು ಇಲ್ಲ. 286 ಕಡೆ ಹಗಲು ಕಾವಲುಗಾರರು, 106 ಕಡೆ ರಾತ್ರಿ ಕಾವಲುಗಾರರಿಲ್ಲ, 605 ಕಡೆ ಸಿಸಿ ಟಿವಿ ಕ್ಯಾಮೆರಾ ಇಲ್ಲ. 365 ಕಡೆ ವೈದ್ಯರ ವ್ಯವಸ್ಥೆಯಿಲ್ಲ ಎಂದು ದೂರಿತು. ಇನ್ನು ಆಹಾರ ಧಾನ್ಯ ಪೂರೈಕೆ ವಿಚಾರದಲ್ಲಿಯೂ ಸಾಕಷ್ಟು ಸಮಸ್ಯೆಗಳಿವೆ. ಗುಣಮಟ್ಟದ ಆಹಾರ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. 

ಕೊಪ್ಪಳ,ರಾಯಚೂರು,ಚಾಮರಾಜನಗರ ಜಿಲ್ಲೆಗಳಲ್ಲಿ ಈ ರೀತಿಯ ಸಮಸ್ಯೆ ಹೆಚ್ಚಾಗಿದೆ. ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸದೆ ತಟಸ್ಥರಾಗಿದ್ದಾರೆ ಎಂದು ಆರೋಪಿಸಿತು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಲಯಗಳ ಪರಿಸ್ಥಿತಿ ಸುಧಾರಣೆಗೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸುಗಳನ್ನು ಬಿಜೆಪಿ ಮಹಿಳಾ ಮೋರ್ಚಾ ಮಾಡಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸಿತು.

 ಈ ಸಂದರ್ಭದಲ್ಲಿ ಮಾತನಾಡಿದ ಭಾರತಿ ಶೆಟ್ಟಿ, ವಿದ್ಯಾರ್ಥಿನಿಯರ ಹಾಸ್ಟೆಲ್‌ಗ‌ಳ ಅವ್ಯವಸ್ಥೆ ಮತ್ತು ಭದ್ರತೆ ಕ್ರಮಗಳಲ್ಲಿನ ವೈಫ‌ಲ್ಯಗಳ ಬಗ್ಗೆ ತಿಳಿಸಿದ್ದೇವೆ. ಸುಧಾರಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಸರಿ ಹೋಗದಿದ್ದರೆ ಬಿಜೆಪಿ ಮಹಿಳಾ ಮೋರ್ಚಾದಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ತಾರಾಗಿಂತ ಭಾರತಿಶೆಟ್ಟಿ ಚೆಂದ: ಆಂಜನೇಯ!
ಬಿಜೆಪಿ ಮಹಿಳಾ ಮೋರ್ಚಾ ನಿಯೋಗದಿಂದ ಮನವಿ ಸ್ವೀಕರಿಸುವ ವೇಳೆ ಸಮಾಜ ಕಲ್ಯಾಣ ಸಚಿವ ಆಂಜನೇಯ, ತಾರಾ-ಭಾರತಿ ಶೆಟ್ಟಿ ಅವರನ್ನು ಒಟ್ಟಿಗೆ ನಿಲ್ಲಿಸಿದರೆ ಭಾರತಿ ಶೆಟ್ಟಿ ಅವರು ತುಂಬಾ ಚೆನ್ನಾಗಿ ಕಾಣಾ¤ರೆ ಎಂದು ತಮಾಷೆ ಮಾಡಿದರು. ಅದಕ್ಕೆ ಭಾರತಿ ಶೆಟ್ಟಿ, ಏನಿಲ್ಲ, ತಾರಾ ಸಿನಿಮಾ ನಟಿ. ಅವರು ಚೆನ್ನಾಗಿ ಕಾಣಾ¤ರೆ ಎಂದರು. ಆಗ, ಮಧ್ಯಪ್ರವೇಶಿಸಿದ ತಾರಾ, ಭಾರತಿ ಶೆಟ್ಟಿ ಅವರು ರಿಯಲ್‌ ಬ್ಯೂಟಿ. ನಮುª ಮೇಕ್‌ ಬ್ಯೂಟಿ ಎಂದು ಚಟಾಕಿ ಹಾರಿಸಿದರು. ಎಲ್ಲರೂ ನಕ್ಕರು.

Advertisement

Udayavani is now on Telegram. Click here to join our channel and stay updated with the latest news.

Next