Advertisement

Ladakh: ಕೇಂದ್ರಾಡಳಿತ ಪ್ರದೇಶ ಲಡಾಖ್‌ ಗೆ ಮತ್ತೆ 5 ಹೊಸ ಜಿಲ್ಲೆಗಳನ್ನು ಘೋಷಿಸಿದ ಕೇಂದ್ರ

01:06 PM Aug 26, 2024 | Team Udayavani |

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಐದು ಹೊಸ ಜಿಲ್ಲೆಗಳನ್ನು ರಚಿಸಲು ಮೋದಿ ಸರ್ಕಾರ ನಿರ್ಧರಿಸಿದ್ದು ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ಮಾಹಿತಿ ನೀಡಿದ್ದಾರೆ.

Advertisement

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಶಾ, ಲಡಾಖ್ ಅಭಿವೃದ್ಧಿಗೆ ಮೋದಿ ಸರ್ಕಾರ ಬದ್ಧವಾಗಿದ್ದು, ಹೊಸ ಜಿಲ್ಲೆಗಳ ರಚನೆಯಿಂದ ಲಡಾಖ್ ಜನರಿಗೆ ಅನುಕೂಲವಾಗಲಿದೆ. ಲಡಾಖ್ ಅನ್ನು ಅಭಿವೃದ್ಧಿ ಮತ್ತು ಸಮೃದ್ಧಗೊಳಿಸುವ ಪ್ರಧಾನಿ ಮೋದಿಯವರ ದೂರದೃಷ್ಟಿಯ ಅಡಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹೊಸ ಜಿಲ್ಲೆಗಳಲ್ಲಿ ಝನ್ಸ್ಕಾರ್, ದ್ರಾಸ್, ಶಾಮ್, ನುಬ್ರಾ ಮತ್ತು ಚಾಂಗ್ತಾಂಗ್ ಪ್ರದೇಶಗಳು ಸೇರಿವೆ ಎಂದು ಹೇಳಿದ್ದಾರೆ.

2019 ರಲ್ಲಿ, ಲಡಾಖ್ ಅನ್ನು ಜಮ್ಮು ಮತ್ತು ಕಾಶ್ಮೀರದಿಂದ ಬೇರ್ಪಡಿಸಲಾಯಿತು ಮತ್ತು ಅದನ್ನು ಹೊಸ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಯಿತು. ಆ ಸಮಯದಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಕೇವಲ ಎರಡು ಜಿಲ್ಲೆಗಳಿದ್ದವು – ಲೇಹ್ ಮತ್ತು ಕಾರ್ಗಿಲ್. ಅದೇ ಸಮಯದಲ್ಲಿ, ಈಗ ಲಡಾಖ್‌ನಲ್ಲಿ ಇನ್ನೂ ಐದು ಹೊಸ ಜಿಲ್ಲೆಗಳನ್ನು (ಜನ್ಸ್ಕಾರ್, ದ್ರಾಸ್, ಶಾಮ್, ನುಬ್ರಾ ಮತ್ತು ಚಾಂಗ್‌ತಾಂಗ್) ರಚಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next