Advertisement

Discount: ಬೆಂಗಳೂರಿನಲ್ಲೂ ರಿಯಾಯಿತಿ ಬೆಲೆಯಲ್ಲಿ ಸಿಗಲಿದೆ ಈರುಳ್ಳಿ: ಕೇಂದ್ರ ಸರಕಾರ

08:34 PM Sep 15, 2024 | Team Udayavani |

ಹೊಸದಿಲ್ಲಿ: ಈರುಳ್ಳಿ ಬೆಲೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಸೆ.5ರಂದು ಕೇಂದ್ರ ಸರಕಾರ‌ ಆರಂಭಿಸಿದ್ದ ರಿಯಾಯಿತಿ ಬೆಲೆಯ ಮಾರಾಟ ಯೋಜನೆ ಬೆಂಗಳೂರು ಸೇರಿ ಇನ್ನಷ್ಟು ನಗರಗಳಿಗೆ ವಿಸ್ತರಣೆಯಾಗಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲ­ಯವು ತಿಳಿಸಿದೆ.

Advertisement

ಕೇಂದ್ರ ಸರಕಾರ‌ ಈ ಯೋಜನೆ ಆರಂಭಿಸಿದ ಬಳಿಕ ಈರುಳ್ಳಿ ಬೆಲೆ ಇಳಿಕೆಯಾಗಿತ್ತು. ಈ ಯೋಜನೆಯಲ್ಲಿ ಕೆ.ಜಿ. ಈರುಳ್ಳಿ ಬೆಲೆ 35 ರೂ. ಇರಲಿದೆ. ಈ ಯೋಜನೆಯನ್ನು ಈಗ ಬೆಂಗಳೂರು, ಚೆನ್ನೈ, ಕೋಲ್ಕತಾ, ಪಟ್ನಾ, ರಾಂಚಿ, ಭುವನೇಶ್ವರ ಹಾಗೂ ಗುವಾಹಾಟಿಗೆ ವಿಸ್ತರಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.