Advertisement
ಸಮನ್ವಯ ಶಿಕ್ಷಣ
Related Articles
Advertisement
ಉಳಿದಂತೆ ಇತರರು ಚಿಕಿತ್ಸೆಗೆ ಬರುತ್ತಾರೆ. ಹೆಚ್ಚಿನ ಚಿಕಿತ್ಸೆ, ಶಸ್ತ್ರಚಿಕಿತ್ಸೆಯ ಅಗತ್ಯವಿದ್ದರೆ ಅವರಿಗೆ ಅನುದಾನವೂ ದೊರೆಯುತ್ತದೆ. ಮನೆಯಲ್ಲಿ ಮಲಗಿದಲ್ಲೇ ಇರುವ ಮಕ್ಕಳಿಗೆ ಗೃಹಾಧಾರಿತ ಶಿಕ್ಷಣ ಇರುತ್ತದೆ. ವೈದ್ಯಕೀಯ ತಪಾಸಣೆ, ಸಾಧನ ಸಲಕರಣೆಗಳ ವಿತರಣೆ, ಸಾರಿಗೆ ಹಾಗೂ ಎಸ್ಕಾರ್ಟ್ ಭತ್ತೆ, ಪುಸ್ತಕ ಹಾಗೂ ಇತರ ಲೇಖನ ಸಾಮಗ್ರಿಗಳು, ಹೆಣ್ಣು ಮಕ್ಕಳಿಗೆ ವಿಶೇಷ ಭತ್ತೆ, ರೀಡರ್ ಭತ್ತೆ ನೀಡಲು ಅವಕಾಶ ಇದೆ.
ಕೊರತೆ
ಗೃಹಾಧಾರಿತ ಶಿಕ್ಷಣಕ್ಕೆ ಮೊದಲು ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತಿತ್ತು. ಆದರೆ ಈಗ ಆ ಸೌಲಭ್ಯವೂ ಇಲ್ಲ. ಶಿಕ್ಷಕರೇ ಶಾಲಾ ಕೆಲಸದ ನಡುವೆ ಇದಕ್ಕಾಗಿ ಬಿಡುವು ಮಾಡಬೇಕು. ಫಿಸಿಯೋಥೆರಪಿಗೆ ಶಿಕ್ಷಣ ಇಲಾಖೆಯಿಂದಲೇ ವೇತನ ನೀಡಿ ಪ್ರತ್ಯೇಕ ಸಿಬಂದಿಯನ್ನು ನೇಮಿಸಲಾಗುತ್ತಿತ್ತು. 10 ಸಾವಿರ ರೂ. ಗೌರವಧನ ನಿಗದಿಯಾಗಿತ್ತು. 16 ದಿನಗಳ ಕೆಲಸಕ್ಕಾಗಿ 625 ರೂ. ಗಳಂತೆ ಎಂದು ನಿಗದಿಯಾಗಿದ್ದರೂ ನಿರ್ದಿಷ್ಟ ಉದ್ದೇಶಕ್ಕಾಗಿ ಮೊತ್ತ ಕಳೆದು 7,500 ರೂ. ನೀಡಲಾಗುತ್ತಿತ್ತು. ಲಕ್ಷಾಂತರ ರೂ. ಖರ್ಚು ಮಾಡಿ ಫಿಸಿಯೋಥೆರಪಿ ಕಲಿತು 7,500 ರೂ.ಗೆ ದುಡಿಯಲು ಯಾರೂ ಮುಂದೆ ಬರದ ಕಾರಣ ಈಗ ಫಿಸಿಯೊಥೆರಪಿ ಸಿಬಂದಿಯೇ ಇಲ್ಲದಂತಾಗಿದೆ. ಅನುದಾನ ಮರಳಿ ಹೋಗುತ್ತಿದೆ.
ಎರಡು ವರ್ಷದಿಂದ ಹಣವೂ ಇಲ್ಲ
ಚಿಕಿತ್ಸಾ ಶಿಬಿರಕ್ಕೆ ಬರುವ ಮಕ್ಕಳಿಗೆ ಮನೆಯಿಂದ ಶಿಬಿರಕ್ಕೆ ಹೋಗಿ ಬರುವ ವೆಚ್ಚ ಎಂದು 300 ರೂ.ಗಳಂತೆ ನೀಡಲಾಗುತ್ತದೆ. ವರ್ಷದ 10 ತಿಂಗಳಿಗೆ ಒಟ್ಟು 3 ಸಾವಿರ ರೂ.ಗಳನ್ನು ಪ್ರತೀ ವಾರ ಬಂದು ಹೋದ ಬಾಬ್ತು ನೀಡಲಾಗುತ್ತದೆ. ಆದರೆ ಎರಡು ವರ್ಷಗಳಿಂದ ಈ ಹಣ ಮಕ್ಕಳಿಗೆ ನೀಡಲು ತಾಂತ್ರಿಕ ಕಾರಣದಿಂದ ಸಾಧ್ಯವಾಗಿಲ್ಲ. ಅನುದಾನ ಬಂದಿದ್ದರೂ ಮಕ್ಕಳ ಖಾತೆಗೆ ಹಣ ಜಮೆಯಾಗಿಲ್ಲ.
3 ವರ್ಷದಿಂದ ಶಿಬಿರ ಇಲ್ಲ
ವಿಶೇಷ ಮಕ್ಕಳ ಸಾಮೂಹಿಕ ವೈದ್ಯಕೀಯ ತಪಾಸಣ ಶಿಬಿರ ನಡೆಯದೇ ಮೂರು ವರ್ಷಗಳಾದವು. ಈ ಕುರಿತು ಶಿಕ್ಷಣ ಇಲಾಖೆ ಯಾವುದೇ ಅನುದಾನವನ್ನೂ ಬಿಡುಗಡೆ ಮಾಡಿಲ್ಲ, ಶಿಬಿರ ನಡೆಸಲು ಸುತ್ತೋಲೆಯನ್ನೂ ಹೊರಡಿಸಿಲ್ಲ. ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರ ಸಿಬಂದಿಯಿಂದ ತಿಂಗಳಿಗೆ 3 ಬಾರಿ ಚಿಕಿತ್ಸಾ ಶಿಬಿರ ಜಿಲ್ಲೆಯ ಎಲ್ಲ ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿದೆ.
ಚಿಕಿತ್ಸಾ ಘಟಕವೇ ಇಲ್ಲ
ಉಡುಪಿಯಲ್ಲಿ ಸುಸಜ್ಜಿತವಾಗಿ 65 ಲಕ್ಷ ರೂ. ವೆಚ್ಚದಲ್ಲಿ ಚಿಕಿತ್ಸಾ ಘಟಕ ಇತ್ತೀಚೆಗೆ ನಿರ್ಮಿಸಲಾಗಿದೆ. ಆದರೆ ಕುಂದಾಪುರದಲ್ಲಿ ಇಂತಹ ಘಟಕ ಇಲ್ಲ. ಹೊಸಬಸ್‌ನಿಲ್ದಾಣ ಬಳಿಯ ಮಾದರಿ ಶಾಲೆಯ ಕೊಠಡಿಯೊಂದರಲ್ಲಿ ಆಗಮಿಸಿದ ಹತ್ತಾರು ಜನರ ಮಧ್ಯೆಯೇ ಚಿಕಿತ್ಸೆ, ಕೌನ್ಸೆಲಿಂಗ್ ನಡೆಯುತ್ತದೆ. ಪ್ರತ್ಯೇಕ ಘಟಕ ಇದ್ದರೆ ಚಿಕಿತ್ಸೆಗೆ ಅನುಕೂಲ. ಈ ಹಿಂದೆ 7.5 ಲಕ್ಷ ರೂ. ಅನುದಾನ ಬಂದಿದ್ದರೂ ಸ್ಥಳಾವಕಾಶ ಇಲ್ಲದ ಕಾರಣ ಅನುದಾನ ವಿನಿಯೋಗ ಆಗಿಲ್ಲ. ಈಗ ತಾ.ಪಂ. ಬಳಿ ಕಟ್ಟಡವೊಂದನ್ನು ಕೇಳಲಾಗಿದ್ದು ತಾ.ಪಂ. ಇನ್ನೂ ನೀಡಿಲ್ಲ. ಕಳೆದ ವರ್ಷವೇ ನಿರ್ಣಯ ಆಗಿದ್ದರೂ ಕಟ್ಟಡ ನೀಡಲು ತಾ.ಪಂ. ಮೀನಮೇಷ ಎಣಿಸುತ್ತಿದೆ.
ಮೀಟಿಂಗ್‌ನಲ್ಲಿ ನಿರ್ಧಾರ
ಶಿಕ್ಷಣ ಇಲಾಖೆಯಿಂದ ಸಮನ್ವಯ ಶಿಕ್ಷಣದ ಮಕ್ಕಳ ಚಿಕಿತ್ಸೆ ಘಟಕಕ್ಕೆ ಕಟ್ಟಡವೊಂದನ್ನು ಕೇಳಿದ್ದು ತಾಂತ್ರಿಕ ಕಾರಣಗಳಿಂದ ಇನ್ನೂ ನೀಡಿಲ್ಲ. ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ತಾ.ಪಂ. ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. –ಶ್ವೇತಾ ಎನ್., ತಾ.ಪಂ. ಕಾರ್ಯನಿರ್ವಹಣಾಧಿಕಾರಿ
ಲಕ್ಷ್ಮೀ ಮಚ್ಚಿನ