Advertisement

ಗ್ರಾಮೀಣ ಜನರಿಗೆ ನೀರಿನ ಅಭಾವ

03:21 PM Apr 06, 2021 | Team Udayavani |

ಕುಣಿಗಲ್‌: ತಾಲೂಕಿನಲ್ಲಿ ದಿನೇ ದಿನೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಈಗಾಗಲೇ370 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಇದರಿಂದ ತಾಲೂಕಿನ 36ಗ್ರಾಪಂಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ ನಾಗರಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ತಾಲೂಕಿನಲ್ಲಿ ಬಿಸಿಲಿನ ಬೇಗೆ ಏರಿಕೆಯಾದಂತೆ ಅಂತರ್ಜಲದ ಮಟ್ಟ ಇಳಿಮುಖವಾಗುತ್ತಿದೆ. ಇದರಿಂದ ಬಹುತೇಕ ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗಿದ್ದು,ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.ಮಾರ್ಕೋನಳ್ಳಿ ಜಲಾಶಯದ ಅಕ್ಕಪಕ್ಕದಗ್ರಾಮಗಳಲ್ಲಿನ ಬೋರ್‌ವೆಲ್‌ಗ‌ಳಲ್ಲಿ ಮಾತ್ರ ನೀರುಲಭ್ಯವಿದ್ದು, ಈ ಭಾಗಗಳಲ್ಲಿ ಸಧ್ಯಕ್ಕೆ ನೀರಿನ ಅಭಾವಉಂಟಾಗಿಲ್ಲ. ಇನ್ನೂ ಪಟ್ಟಣದ ದೊಡ್ಡಕೆರೆಯಲ್ಲಿ ಅರ್ಧ ಕೆರೆ ನೀರು ಇದ್ದು, ಪಟ್ಟಣದ ಜನತೆಗೆ ನೀರಿನ ಸಮಸ್ಯೆ ಇಲ್ಲ, ದೊಡ್ಡಕೆರೆಯಲ್ಲಿಅಲ್ಪ ಪ್ರಮಾಣದ ನೀರು ಇರುವ ಕಾರಣ ಪಟ್ಟಣದ ಪುರಸಭೆ ಬೋರ್‌ ವೆಲ್‌ಗ‌ಳಲ್ಲಿ ನೀರು ಸಾಕಷ್ಟು ಲಭ್ಯವಿದೆ.

ಗ್ರಾಮೀಣ ಪ್ರದೇಶದಲ್ಲೇ ಸಮಸ್ಯೆ: ಗ್ರಾಮೀಣ ಪ್ರದೇಶದಲ್ಲೇ ಕುಡಿಯುವ ನೀರಿನ ಸಮಸ್ಯೆಉಲ್ಬಣವಾಗಿದ್ದು, ನೀರಿನ ಅಭಾವ ಇರುವಗಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ತಾಲೂಕಿನ 36 ಗ್ರಾಪಂ ಪೈಕಿ ಬಾಗೇನಹಳ್ಳಿ, ಟಿ.ಹೊಸಹಳ್ಳಿ, ಜಿನ್ನಾಗರ, ಕೊಪ್ಪ,ತೆರೆದಕುಪ್ಪೆ, ಎಡೆಯೂರು, ಹಳೇವೂರು, ಹುಲಿ  ಯೂರು ದುರ್ಗ, ಜೋಡಿಹೊಸಹಳ್ಳಿ, ಕೆಂಪನಹಳ್ಳಿ, ಕಿತ್ನಾಮಂಗಲ, ಅಮೃತೂರು, ಭಕ್ತರಹಳ್ಳಿ, ಹುತ್ರಿ  ದುರ್ಗ, ಕಗ್ಗೆರೆ, ಮಡಿಕೆಹಳ್ಳಿ, ಡಿ.ಹೊಸಹಳ್ಳಿ ಹಾಗೂ ನಿಡಸಾಲೆ ಗ್ರಾಪಂಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಇಲ್ಲಿ ಖಾಸಗಿ ಕೊಳವೆಬಾವಿಗಳನ್ನು ಗುತ್ತಿಗೆಅಧಾರದ ಮೇಲೆ ಪಡೆದುಕೊಂಡು ಗ್ರಾಮಗಳಿಗೆನೀರು ಸರಬರಾಜು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.ಟ್ಯಾಂಕರ್‌ ಮೂಲಕ ನೀರು

ಸರಬರಾಜು: ಸಿಂಗೋನಹಳ್ಳಿ, ಹುಲಿವಾಹನ ಹಾಗೂ ಮನವನಹಳ್ಳಿ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ತಾಲೂಕಿನ 305 ಹಳ್ಳಿಗಳ ಪೈಕಿ ಈಗಾಗಲೇ 100 ಹಳ್ಳಿಗಳಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಪ್ರಭಾರ ತಹಶೀಲ್ದಾರ್‌ ಹಾಗೂ ತಾಪಂ ಇಒ ಜೋಸೆಫ್‌ ಟಾಸ್ಕ್ ಪೋರ್ಸ್‌ ಸಮಿತಿ ಸಭೆ ನಡೆಸಿ ಬೇಸಿಗೆಯಲ್ಲಿ ಉಂಟಾಗುವ ನೀರಿನ ಸಮಸ್ಯೆ ನಿಭಾಯಿಸುವ ಮತ್ತು ಅಗತ್ಯವಾಗಿ ಕೈಗೊಳ್ಳಬೇಕಾದ ಚರ್ಚೆ ನಡೆಸಿದ್ದಾರೆ. ಈ ಸಂಬಂಧ ಗ್ರಾಪಂ ವರ್ಗ 1ರ ಅನುದಾನದಲ್ಲೇ ನೀರು ಸರಬರಾಜಿಗೆ ಖರ್ಚು ಮಾಡಲಾಗುತ್ತಿದೆ. ಕುಡಿಯುವ ನೀರಿನ ಕಾಮಗಾರಿಗಾಗಿ 15ನೇ ಹಣಕಾಸು ಯೋಜನೆ ಅನುದಾನದಲ್ಲಿ ಪ್ರತಿ ಗ್ರಾಪಂನಲ್ಲಿ ಮೀಸಲಿರಿಸಲು ಎಲ್ಲ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

30 ಕೊಳವೆಬಾವಿ ಕೊರೆಸಲು ಕ್ರಮ :

Advertisement

ತಾಲೂಕಿನಲ್ಲಿ ನೀರಿನ ಮೂಲ ಯಾವುದು ಇಲ್ಲ. ತಾಲೂಕು ಬರಪೀಡಿತ ತಾಲೂಕಾಗಿದೆ. ಕೆರೆ-ಕಟ್ಟೆ ಜಲಾಶಯಗಳಲ್ಲಿನೀರಿನ ಪ್ರಮಾಣ ಕಡಿಮೆಯಾಗಿ ಅಂತರ್ಜಲ ಮಟ್ಟ ಕುಸಿದಿದೆ. ತಾಲೂಕಿನ 60 ಗ್ರಾಮದಲ್ಲಿ ನೀರಿನಸಮಸ್ಯೆ ಉಲ್ಬಣವಾಗಿದೆ. ಈಸಂಬಂಧ ವಿಡಿಯೊ ಕಾನ್ಫರೆನ್ಸ್‌ಮೂಲಕ ಜಿಲ್ಲಾಧಿಕಾರಿ ಹಾಗೂಜಿಪಂ ಸಿಇಒ ಅವರೊಂದಿಗೆ ಮಾತನಾಡಿ ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆ. ಇದಕ್ಕೆ ಅವರುಸಕಾರಾತ್ಮಕವಾಗಿ ಸ್ಪಂದಿಸಿ 50 ಲಕ್ಷ ರೂ.ಹಣ ಬಿಡುಗಡೆಮಾಡುವುದಾಗಿ ಭರವಸೆ ನೀಡಿದ್ದಾರೆ. ಶಾಸಕರಅನುದಾನದಲ್ಲಿ 30 ಕೊಳವೆಬಾವಿ ಕೊರೆಸಲು ಕ್ರಮಕೈಗೊಳ್ಳಲಾಗಿದೆ. ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಶಾಸಕ ಡಾ.ಎಚ್‌.ಡಿ.ರಂಗನಾಥ್‌ ಪತ್ರಿಕೆಗೆ ತಿಳಿಸಿದ್ದಾರೆ.

ತಾಲೂಕಿನ 8 ಗ್ರಾಮಗಳಿಗೆಟ್ಯಾಂಕರ್‌ ಮೂಲಕ ನೀರುಸರಬರಾಜು ಮಾಡಲಾಗುತ್ತಿದ್ದು,ಪಂಚಾಯಿತಿ 15ನೇ ಹಣಕಾಸು ಯೋಜನೆಅಡಿಯಲ್ಲಿ ಆರು ಪಂಚಾಯ್ತಿಯಲ್ಲಿಬೋರ್‌ವೆಲ್‌ ಕೊರೆಸಲಾಗಿದೆ. ಈ ಬೋರ್‌ವೆಲ್‌ಗಳಲ್ಲಿ ನೀರು ಸಿಕ್ಕಿದೆ. ಮುಂದಿನದಿನಗಳಲ್ಲಿ ಎದುರಾಗುವ ನೀರಿನಸಮಸ್ಯೆಯನ್ನು ಸಮರ್ಥವಾಗಿನಿಭಾಯಿಸಲು ಕ್ರಮ ಕೈಗೊಳ್ಳುವಂತೆ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ● ಜೋಸೆಫ್, ತಾಪಂ ಇಒ, ಕುಣಿಗಲ್‌

 

-ಕೆ.ಎನ್‌.ಲೋಕೇಶ್‌

Advertisement

Udayavani is now on Telegram. Click here to join our channel and stay updated with the latest news.

Next