Advertisement
ರಥಸಪ್ತಮಿ ಮುಗಿಯುತ್ತಿದ್ದಂತೆ ಬೇಸಿಗೆ ಸುಡುಬಿಸಿಲು ಪ್ರಾರಂಭವಾಗುತ್ತದೆ. ಪುರಜನತೆ ಮತ್ತುಗ್ರಾಮೀಣ ಜನರಿಗೆ ನೀರಿನ ಸಮಸ್ಯೆ ತಲೆದೋರುತ್ತದೆ.ಬಿಸಿಲಿನ ತಪಾಮಾನಕ್ಕೆ ಕೆರೆ ಕಟ್ಟೆ ಭತ್ತಿ ಹೋಗುತ್ತಿವೆ.ಪುರಜನರು ಮತ್ತು ನೂರಾರು ಗ್ರಾಮಗಳಲ್ಲಿಕುಡಿಯುವ ನೀರಿನ ಅಭಾವ ಹೆಚ್ಚುವ ಲಕ್ಷಣಗಳು ಗೋಚರಿಸುತ್ತಿದೆ.
Related Articles
Advertisement
ಪಟ್ಟಣಕ್ಕೆ ಮಂಚನಬೆಲೆ ಡ್ಯಾಂ ನೀರು: ಅಂದಾಜು 30 ಸಾವಿರ ಜನಸಂಖ್ಯೆ ಇರುವ ಮಾಗಡಿ ಪಟ್ಟಣಕ್ಕೆಮಂಚನಬೆಲೆ ಜಲಾಶಯದಿಂದ ಕುಡಿಯುವ ನೀರು ಪೂರೈಸಲಾಗುತ್ತಿದ್ದು, 24/7 ಕೆಎಂಆರ್‌ಪಿ ಯೋಜನೆಯ ಕಾಮಗಾರಿ ಪೂರ್ಣಗೊಂಡಿದೆ. ಬಹುತೇಕ ವಾರ್ಡ್‌ಗಳಲ್ಲಿ 24/7 ಕುಡಿಯುವ ನೀರಿನ ಪೈಪ್‌ಲೈನ್ ಸಮರ್ಪ ಕವಾಗಿ ಆಳವಡಿಸದ ಕಾರಣ ನೀರು ಪೂರೈಕೆಯಾಗುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ.
ನೀರು ಪೂರೈಕೆಯಾಗುತ್ತಿರುವ ವಾರ್ಡ್‌ಗಳ ಕೊಳಾಯಿಗಳಲ್ಲಿ ಕಲುಷಿತ ನೀರು ಪೂರೈಕೆಯಾಗು ತ್ತಿದ್ದು, ಇದರಿಂದ ಸಾಂಕ್ರಾಮಿಕ ಕಾಯಿಲೆ ಉಲ್ಬಣವಾಗಲಿದೆ.ಶುದ್ಧೀಕರಣವಿಲ್ಲದೇ ವಿಷ ಜಲವನ್ನು ಪುರಸಭೆಪೂರೈಸಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬುದು ಪುರನಾಗರಿಕರ ಆತಂಕವಾಗಿದೆ.
ಜೀವ ಸಂಕುಲಕ್ಕೆ ಜೀವಜಲ ಒದಗಿಸಿ :
ಬೇಸಿಗೆ ಝಳಕದಿಂದ ಪಾರಾಗಲು ಯಾರಿಗೂ ಸಾಧ್ಯವಿಲ್ಲ. ಮನುಷ್ಯನಿಗೆ ಇನ್ನಿಲ್ಲದಂತೆಕಾಡುವ ರಣಬಿಸಿಲು ದೇಹಕ್ಕೆ ಸುಸು, ಆಯಾಸ, ಬಳಲಿಕೆ ಉಂಟುಮಾಡಿ ಬದುಕನ್ನುಜರ್ಜರಿತವಾಗಿಸಿಬಿಡುತ್ತದೆ. ಬಿಸಿಲ ತಾಪಮಾನದಿಂದ ತಲೆನೋವು, ಜ್ವರ, ಇನ್ನಿತರೆಕಾಯಿಲೆಗಳು ಬಿಟ್ಟುಬಿಡದ ಹಾಗೆ ಕಾಡುವುದು ಸಾಮಾನ್ಯ. ಎಲ್ಲವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮೂಗಿನ ನೇರಕ್ಕೆ ಮಾಡಿಕೊಂಡಿರುವ ಮನುಕುಲಕ್ಕೆ ಇಷ್ಟೊಂದು ಸಂಕಷ್ಟ ತಂದೊಡ್ಡುವ ಬೇಸಿಗೆ ಇನ್ನೂ ಪ್ರಾಣಿ-ಪಕ್ಷ, ಇತರೆ ಜೀವ ಸಂಕುಲಗಳಿಗೆ ಇನ್ನೆಷ್ಟು ಸಂಕಷ್ಟ ನೀಡಬಲ್ಲದು. ಹಾಗಾಗಿ ಸಾಧ್ಯವಾದಷ್ಟು ಮಟ್ಟಿಗೆ ಯುವ ಸಮೂಹ ಪ್ರಾಣಿ-ಪಕ್ಷಿ ಇತರೆ ಜೀವ ಸಂಕಲಗಳಿಗೆ ಜೀವ ಜಲ ಒದಗಿಸಲು ಮುಂದಾಗಬೇಕು. ತೆಂಗಿನ ಕಾಯಿ ಕಂಟ, ಪಾಟ್‌ಗಳಲ್ಲಿ ಶುದ್ಧ ನೀರು ಇಟ್ಟು, ಸಾಧ್ಯವಾದರೆ ದವಸ-ಧಾನ್ಯವಿಟ್ಟು ಜೀವಸಂಕುಲಕ್ಕೆ ನೆರವಾಗಿ ಅಂತಾರೆ ಪರಿಸರ ಪ್ರೇಮಿ ಕಲ್ಪನಾ ಶಿವಣ್ಣ.
ಮುಂದಿನ ಪೀಳಿಗೆಗೆ ನೀರನ್ನು ಸಂರಕ್ಷಿಸಿ :ಇತ್ತೀಚಿನ ದಿನಗಳಲ್ಲಿ ದಿನ ನಿತ್ಯದ ಚಟುವಟಿಕೆಗಳಿಗೆ ಪ್ಯಾಕೆಟ್‌ಹಾಗೂ ಬಾಟೆಲ್ ರೂಪದಲ್ಲಿ ಹಣ ಕೊಟ್ಟು ನೀರನ್ನು ಖರೀದಿಸುವಕಾಲವನ್ನು ಎದುರಿಸಬೇಕಾಗಿದೆ. ಆದ್ದರಿಂದ ನಾವೆಲ್ಲರೂ ನೀರನ್ನುಹೆಚ್ಚು ಪೋಲು ಮಾಡದೆ, ನೀರಿನ ಸದ್ಬಳಕೆ ಮಾಡಬೇಕು. ಮುಂದಿನಪೀಳಿಗೆಗೆ ನೀರನ್ನು ಸಂರಕ್ಷಿಸೋಣ ಎಂಬ ಧ್ಯೇಯ ವಾಕ್ಯ ಮನಸ್ಸಿನಲ್ಲಿಜಾಗೃತವಾಗಿರಲಿ. ಕಲುಷಿತ ನೀರಿನ ಮರು ಬಳಕೆ, ಮಳೆ ನೀರುಕೋಯ್ಲು ಮತ್ತು ನೀರಿನ ಸಂರಕ್ಷಣೆ ಕುರಿತು ಗ್ರಾಪಂ ಅಧಿಕಾರಿಗಳುಜನರಲ್ಲಿ ಜಾಗೃತಿ ಮೂಡಿಸಬೇಕು. ಸಮಸ್ಯೆ ಮುನ್ನಾ ಗ್ರಾಪಂಪಿಡಿಒಗಳು ತುರ್ತುಕ್ರಮ ವಹಿಸಿದರೆ ನೀರಿನ ಸಮಸ್ಯೆ ಉಂಟಾಗದು ಎಂದು ರೈತ ಮುಖಂಡ ರಾಜಣ್ಣ ತಿಳಿಸಿದರು.
ಕೆಎಂಆರ್‌ಪಿ ಯೋಜನೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮಿಷನ್ ಸಹ ಕಳೆದು ಹೋಗಿದ್ದವು. ಹೊಸ ಮಿಷನ್ ಅಳವಡಿಸಲು ಕ್ರಮ ಕೈಗೊಂಡಿದ್ದೇನೆ. ಪಂಪ್‌ಹೌಸ್‌ನಲ್ಲಿ ನೀರು ಶುದ್ಧೀಕರಣವಾಗುತ್ತಿಲ್ಲ. ಈಕುರಿತು ತನಿಖೆಗೆ ಪತ್ರ ಬರೆದಿದ್ದೇನೆ. ಸರಿಪಡಿಸುವ ಕೆಲಸಕ್ಕೆ ಎಂಜಿನಿಯರ್ 3 ವರದಿತಯಾರಿಸಿದ್ದಾರೆ. ಶುದ್ಧೀಕರಣ ಕೆಲಸಕ್ಕೆ ಕ್ರಮ ವಹಿಸಿದ್ದೇವೆ.– ಎ.ಮಂಜುನಾಥ್, ಮಾಗಡಿ ಶಾಸಕ
ಮಂಚನಬೆಲೆ ಜಲಾಶಯದ ನೀರನ್ನುಶುದ್ಧೀಕರಿಸಿ ಪಟ್ಟಣಕ್ಕೆ ಪೂರೈಸಲುಕೆಎಂಆರ್‌ಪಿ ಎಂಜಿನಿಯರ್‌ಗೆ ಸೂಚಿಸುತ್ತೇನೆ. – ವಿಜಯಾ ರೂಪೇಶ್, ಪುರಸಭೆ ಅಧ್ಯಕ್ಷೆ, ಮಾಗಡಿ
ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಹಾಲಿ ಇರುವಕೊಳವೆ ಬಾವಿಗಳಿಗೆ ಪೈಪ್ ಅಳವಡಿಸಲುಗ್ರಾಪಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. – ಟಿ.ಪ್ರದೀಪ್, ಮಾಗಡಿ ತಾಪಂ ಇಒ
ಮಂಚನಬೆಲೆ ಡ್ಯಾಂನಿಂದ ಪಟ್ಟಣಕ್ಕೆ ಶುದ್ಧೀಕರಿಸದ ನೀರು ಪೂರೈಕೆಯಾಗುತ್ತಿದೆ.ಡ್ಯಾಂ ಬಳಿ ಮತ್ತು ವೀರೇಗೌಡನ ದೊಡ್ಡಿ, ಹೊಸಪೇಟೆ ಬಳಿ ನೀರು ಸಂಗ್ರಹಗಾರವಿದೆ. ಇಲ್ಲಿಂದಪಟ್ಟಣಕ್ಕೆ ನೀರು ಪೂರೈಸಲಾಗುತ್ತಿದೆ. ಮುಂಜಾಗ್ರತಾ ಕ್ರಮದಿಂದ ನೀರಿನ ಶುದ್ಧೀಕರಣಗೊಳಿಸಲು ಕ್ರಮ ವಹಿಸಲಾಗುತ್ತಿದೆ.–ಹೆಸರೇಳದ ಅಧಿಕಾರಿಗಳು, ಪುರಸಭೆ ಮಾಗಡಿ
–ತಿರುಮಲೆ ಶ್ರೀನಿವಾಸ್