Advertisement
ಬಜೆಟ್‌ನಲ್ಲಿ ಒಂದಷ್ಟು ಹೊಸ ಉದ್ಯಮ ಗಳನ್ನು ಘೋಷಿಸಲಾಗಿದೆ. ಇದು ಆರ್ಥಿಕ ಚಟುವಟಿಕೆಗಳ ಉದ್ದೀಪನ ಹಾಗೂ ಪ್ರಾದೇಶಿಕವಾಗಿ ಉದ್ಯೋಗಾವಕಾಶ ಸೃಷ್ಟಿಗೆ ಪೂರಕವಾಗಬಲ್ಲವು. ಉದ್ದಿಮೆಗಳನ್ನು ಸ್ಥಾಪಿಸಲು ಮಹಿಳೆಯರಿಗೆ ಪ್ರೋತ್ಸಾಹದಾಯಕ ಕ್ರಮಗಳನ್ನು ಘೋಷಿಸಿರುವುದು ಮಹಿಳೆಯರನ್ನು ಉದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲು ಸಹಕಾರಿ.
ಕೈಗಾರಿಕೆಗಳಿಗೆ ನಗರ ವಲಯದಲ್ಲಿ ಆಸ್ತಿ ತೆರಿಗೆಯಲ್ಲಿ ಪ್ರತ್ಯೇಕ ಸ್ಲಾ Âಬ್ ನಿಗದಿ ಘೋಷಿಸಲಾಗಿದೆ. ಇದು ಕೈಗಾರಿಕೆಗಳ ಹೊರೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ಸಹಕಾರಿಯಾದೀತು. ಕೈಗಾರಿಕೆಗಳು ಕೌಶಲಭರಿತ ಮಾನವ ಸಂಪನ್ಮೂಲ ಕೊರತೆಯನ್ನು ಎದುರಿಸುತ್ತಿರುವ ಪ್ರಸಕ್ತ ಪರಿಸ್ಥಿತಿಯಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಉನ್ನತೀಕರಣಕ್ಕೆ ಆದ್ಯತೆ ನೀಡಿರುವುದು ಉತ್ತಮ ಹೆಜ್ಜೆ.
Related Articles
Advertisement
ಎರಡನೇ ಹಂತದ ನಗರಗಳಲ್ಲಿ ಐಟಿ ಪಾರ್ಕ್‌ಗಳು ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ಪೂರಕವಾಗುತ್ತವೆ. ಮಂಗಳೂರಿನಲ್ಲಿ ಕಿಯೋನಿಕ್ಸ್ ಜಾಗದಲ್ಲಿ ಐಟಿ ಪಾರ್ಕ್‌ಗೆ ಬಜೆಟ್ ಪೂರ್ವದಲ್ಲಿ 60 ಕೋ.ರೂ.ಗೆ ಬೇಡಿಕೆ ಮಂಡಿಸಲಾಗಿತ್ತು. ಬಜೆಟ್‌ನಲ್ಲಿ ಇವುಗಳನ್ನು ಪರಿಗಣಿಸಿಲ್ಲ. ಇದಲ್ಲದೆ ಕೈಗಾರಿಕಾ ಟೌನ್‌ಶಿಪ್ ಪ್ರಾಧಿಕಾರಗಳ ಬೇಡಿಕೆಯನ್ನು ಪರಿಗಣಿಸಿಲ್ಲ. ಪೀಣ್ಯ ಕೈಗಾರಿಕಾ ಟೌನ್‌ಶಿಪ್ ಪ್ರಾಧಿಕಾರಕ್ಕೆ 100 ಕೋ.ರೂ. ಕೊಟ್ಟಿರುವುದು ಹೊರತುಪಡಿಸಿದರೆ ಉಳಿದಂತೆ ಯಾವುದೇ ಪ್ರಸ್ತಾವನೆಗಳು ಪರಿಗಣನೆಗೆ ಬಂದಿಲ್ಲ. ಹೊಸದಾಗಿ ಯಾವುದೇ ತೆರಿಗೆ ಏರಿಕೆ ಮಾಡದಿರುವುದು ಸ್ವಾಗತಾರ್ಹ. – ಗೌರವ ಹೆಗ್ಡೆ , ಉದ್ಯಮಿ, ಕೆನರಾ ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷ