ಕಾಪು: ಇತ್ತೀಚಿನ ದಿನಗಳಲ್ಲಿ ಪರಸ್ಪರ ತಪ್ಪು ಅಭಿಪ್ರಾಯದಿಂದ ಕ್ಷುಲಕ ಕಾರಣಗಳಿಗಾಗಿ ಸಮಾಜದಲ್ಲಿ ಸೌಹಾರ್ದತೆಗೆ ಭಂಗ ಉಂಟಾಗುತ್ತಿದೆ. ಇದನ್ನು ಎಸಗುವವರು ಸಮಾಜ ಘಾತುಕರಾಗಿದ್ದು, ಅವರ ಬಗ್ಗೆ ನಾಗರಿಕರು ಎಚcರದಿಂದ ಇರಬೇಕು ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ವತಿಯಿಂದ ಕಾಪು ಪುರಸಭೆಯಲ್ಲಿ ಹಮ್ಮಿಕೊಂಡಿದ್ದ ಈದ್ ಸಮ್ಮಿಲನ – ಸೌಹಾರ್ದ ಕೂಟ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸದ್ಭಾವನಾ ವೇದಿಕೆಯ ರಾಜ್ಯ ಕಾರ್ಯದರ್ಶಿ ಜನಾಬ್ ಅಕºರ್ ಅಲಿ ಮಾತನಾಡಿ, ಬಾಲ್ಯದಲ್ಲಿ ಯಾವುದೇ ಹಬ್ಬಗಳು ಬಂದರೂ ಎಲ್ಲ ಧರ್ಮ ದವರು ಸಂಭ್ರಮ ಪಡುತ್ತಿದ್ದರು. ಎಲ್ಲ ಧರ್ಮಗಳು ಮನುಷ್ಯನಿಗೆ ಗೌರವ ನೀಡುತ್ತಾ ಪರಸ್ಪರ ಅನ್ಯಾಯವೆಸಗಬಾರದು, ಮನುಷ್ಯ ರೆಲ್ಲರೂ ಏಕ ದೇವನ ಸೃಷ್ಟಿಗಳು, ಎಲ್ಲರೂ ಓರ್ವ ತಂದೆ-ತಾಯಿಯ ಮಕ್ಕಳು ಎನ್ನುವುದನ್ನು ಬೋಧಿಸುತ್ತವೆ. ಅದರಂತೆ ಜೀವನ ನಡೆಸಬೇಕು ಎನ್ನುವ ಆದೇಶದಂತೆ ನಾವು ಬಾಳಿದರೆ, ಸಮಾಜದ ಜನರಲ್ಲಿ ಸೌಹಾರ್ದ ಮತ್ತು ಸಾಮರಸ್ಯ ಮೂಡಿಬರಲು ಸಾಧ್ಯ ಎಂದರು.
ಮೌಲಾನಾ ದಾನಿಶ್ ರಝಾ ಅವರ ಕುರ್‌ಆನ್ ಪಠನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕಾಪು ಪುರಸಭೆಯ ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್, ಮುಖ್ಯಾಧಿಕಾರಿ ರಾಯಪ್ಪ, ವಿಪಕ್ಷ ನಾಯಕ ಅರುಣ್ ಶೆಟ್ಟಿ ಪಾದೂರು ಸೌಹಾರ್ದತಾ ಸಂದೇಶ ನೀಡಿದರು.
ಸ್ಥಾಯೀ ಸಮಿತಿಯ ಅಧ್ಯಕ್ಷೆ ಶಾಂತಲಾ ಶೆಟ್ಟಿ, ಜಮಿಯ್ಯತುಲ್ ಫಲಾಹ್ ಅಧ್ಯಕ್ಷ ಶಭೀ ಕಾಝಿ, ಉದ್ಯಮಿ ಮುಸ್ತಾಕ್ ಇಬ್ರಾಹಿಮ್ ಉಪಸ್ಥಿತರಿದ್ದರು.
ಜಮಾಅತ್‌ನ ಕಾಪು ವರ್ತುಲದ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕಾಪು ಸ್ವಾಗತಿಸಿ, ಪ್ರಸ್ತಾವನೆಗೆ„ದರು. ಅಬ್ದುಲ್ ಅಝೀಝ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಇಕ್ಬಾಲ್ ವಂದಿಸಿದರು.