Advertisement

“ಮಾರ್ಗದರ್ಶನದ ಕೊರತೆ ನಿರುದ್ಯೋಗಕ್ಕೆ ಕಾರಣ’

11:56 PM Mar 05, 2021 | Team Udayavani |

ಮಂಗಳಗಂಗೋತ್ರಿ: ನಿರುದ್ಯೋಗ ಸಮಸ್ಯೆಗೆ ಉದ್ಯೋಗ ಮಾರ್ಗದರ್ಶನದ ಕೊರತೆ ಮತ್ತು ಗೊತ್ತುಗುರಿ ಇಲ್ಲದ ಶಿಕ್ಷಣವೇ ಪ್ರಮುಖ ಕಾರಣ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ| ರೊನಾಲ್ಡ್‌ ಅನಿಲ್‌ ಫೆರ್ನಾಂಡಿಸ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಶುಕ್ರವಾರ ವಿವಿ ಉದ್ಯೋಗ ಮಾಹಿತಿ ಮತ್ತು ಮಾರ್ಗ ದರ್ಶನ ಕೇಂದ್ರ (ಯುಇಐಜಿಬಿ) ಆಯೋ ಜಿಸಿದ್ದ “ಮೆರಕಿ’ ಅಥವಾ ಕೆರಿಯರ್‌ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ನಿರುದ್ಯೋಗ ಸಮಸ್ಯೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ದೇಶದ 136 ಕೋಟಿ ಜನರಲ್ಲಿ 15 ಮತ್ತು 29ರ ನಡುವಿನ ವಯಸ್ಸಿನವರು. ರಾಜ್ಯದಲ್ಲಿ ಈ ಪ್ರಮಾಣ 1.7 ಕೋಟಿ ಯಷ್ಟಿದೆ. ಸಾಂಕ್ರಾಮಿಕದ ಬಳಿಕ ಉದ್ಯೋಗಪಡೆದುಕೊಳ್ಳುವುದು ದೊಡ್ಡ ಸವಾಲಾಗಿದೆ. ಇದರ ಪರಿಣಾಮವಾಗಿ ಅನೇಕರು ಅರೆಕಾಲಿಕ ಉದ್ಯೋಗ ಅಥವಾ ತಮ್ಮ ಕಲಿಕೆಗೆ ಸಂಬಂಧವೇ ಇಲ್ಲದ ಉದ್ಯೋಗಗಳ ಮೊರೆ ಹೋಗುತ್ತಿದ್ದಾರೆ. ಉದ್ಯಮಿಗಳಾಗಲು ಪದವಿಯ ಅಗತ್ಯವಿಲ್ಲ ಎಂದು ಅನೇಕರು ಸಾಧಿಸಿತೋರಿಸಿದ್ದಾರೆ. ಆದರೂ ಶಾಲಾ- ಕಾಲೇಜುಗಳಲ್ಲಿ ವೃತ್ತಿಪರ ಶಿಕ್ಷಣ ಒದಗಿಸುವುದು ನಮ್ಮ ಮುಂದಿನ ಸವಾಲಿಗೆ ಒಂದು ಪರಿಹಾರ ಆಗಬಹುದು ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾತ ನಾಡಿದ ಅವರು, 2020ರಲ್ಲಿ ಸಂದರ್ಶನ ಹಂತಕ್ಕೆ ಬಂದ 2,123 ಅಭ್ಯರ್ಥಿಗಳಲ್ಲಿ ಕರಾವಳಿ ಜಿಲ್ಲೆಯವರು ಕೇವಲ 7 ಮಂದಿ. ಮರು ಪ್ರಯತ್ನದ ಗುಣ, ಒಳ್ಳೆಯ ಕೋಚಿಂಗ್‌ ಮತ್ತು ರಾಜ್ಯದ- ದೇಶದ ಎಲ್ಲಾದರೂ ಕೆಲಸ ಮಾಡಲು ಸಿದ್ಧವಾಗಿರುವ ಗುಣ ನಮ್ಮ ಸಾಧನೆಯನ್ನು ಉತ್ತಮ ಪಡಿಸಬಹುದು ಎಂದರು.

ಮಂಗಳೂರು ವಿ.ವಿ. ಕುಲಸಚಿವ ಕೆ. ರಾಜು ಮೊಗವೀರ ಮಾತನಾಡಿ, ಭವಿಷ್ಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲ ಯವನ್ನು ಒಂದು ಉತ್ತಮ ವೃತ್ತಿಪರ ಶಿಕ್ಷಣ ತರಬೇತಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಆಶಯ ವ್ಯಕ್ತಪಡಿಸಿದರು.

Advertisement

ಯುಇಐಜಿಬಿ ಮುಖ್ಯಸ್ಥೆ ಡಾ| ಪ್ರೀತಿ ಕೀರ್ತಿ ಡಿ’ಸೋಜಾ ಅವರು ಕೇಂದ್ರದ ಚಟುವಟಿಕೆಗಳನ್ನು ವಿವರಿಸಿ, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಬಂಟ್ವಾಳ ತಹಶೀಲ್ದಾರ್‌, ತಾಲೂಕು ಮ್ಯಾಜಿಸ್ಟ್ರೇಟ್‌ ಎಸ್‌.ಆರ್‌. ರಶ್ಮಿ ಮತ್ತು ಐಡಿಪಿ ಎಜುಕೇಶನ್‌ ಇಂಡಿಯಾ ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕ ಶಿಜೋ ಮೊನ್‌ ಯೇಸುದಾಸ್‌ ಉಪಸ್ಥಿತರಿದ್ದರು. ಯುಇಐಜಿಬಿ ಉಪ ಮುಖ್ಯಸ್ಥ ಹೇಮಚಂದ್ರ ಎಸ್‌. ಜೆ. ವಂದಿಸಿದರು.

ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ| ಪಿ. ಸುಬ್ರಹ್ಮಣ್ಯ ಯಡ ಪಡಿತ್ತಾಯ ಮಾತನಾಡಿ, ಯಾವುದೇ ಹುದ್ದೆಗೂ ಅರ್ಹತೆ ಗಳಿಸುವಂತಾಗಬೇಕು, ಅನಂತರ ಆಕಾಂಕ್ಷೆ ಇರಬೇಕು. ಸೋಲೇ ಕೊನೆಯಲ್ಲ, ಅದು ನಮ್ಮ ಸಾಮರ್ಥ್ಯ ಹೆಚ್ಚಿಸುತ್ತದೆ. ಕೆಲಸ ಮಾಡುವ ಮನಸ್ಸು, ಅವಕಾಶ ಬಳಸಿಕೊಳ್ಳುವಿಕೆ ಮತ್ತು ಸ್ಪರ್ಧಾ ತ್ಮಕತೆಯನ್ನು ಬೆಳೆಸಿಕೊಳ್ಳುವುದು ಮುಖ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next