Advertisement
ಹೌದು.. ಈ ಹಿಂದೆ ಸರ್ಕಾರ ಜಿಲ್ಲೆಗೊಂದು ಉದ್ಯಾನವನ ಎನ್ನುವ ಹೆಸರಿನಡಿ ಅರಣ್ಯ ಇಲಾಖೆ ವ್ಯಾಪ್ತಿಯ ಪ್ರದೇಶದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷಉದ್ಯಾನವನ ಮಾಡಿ ಅರಣ್ಯ ರಕ್ಷಿಸುವ ಉಳಿಸಲು ಮುಂದಾಗಿದೆ. ಜೊತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸಲುಉದ್ಯಾನವನವನ್ನು ಅಭಿವೃದ್ಧಿಮಾಡುತ್ತಿದೆ. ಆದರೆ ಜಿಲ್ಲಾ ಕೇಂದ್ರದಿಂದಕೇವಲ 20 ಕಿ.ಮೀ. ದೂರದಲ್ಲಿರುವರುದ್ರಾಪುರ ಬಳಿಯ ತಿಮ್ಮಕ್ಕನ ವೃಕ್ಷಉದ್ಯಾನವನದಲ್ಲಿನ ಗಿಡಗಳ ರಕ್ಷಣೆಮಾಡಿಕೊಳ್ಳುವುದೇ ಅರಣ್ಯ ಇಲಾಖೆಗೆ ಸವಾಲಾಗಿದೆ. ಇಲ್ಲಿ ಬಗೆ ಬಗೆಯಗಿಡಗಳಿವೆ. ಜೊತೆಗೆ ಪ್ರವಾಸೋದ್ಯಮಕ್ಕೆಉತ್ತೇಜನ ನೀಡಲು ಈ ಹಿಂದಿನವರ್ಷದಲ್ಲಿ ಆನೆ, ಜಿಂಕೆ, ಮೊಲ, ಕರಡಿ,ನವಿಲು, ಮೊಸುಳೆ ಸೇರಿದಂತೆ ಇತರೆಪ್ರಾಣಿಗಳ ಆಕೃತಿಗಳನ್ನು ಇರಿಸಿ ಪಾರ್ಕ್ ನ್ನು ಇನ್ನಷ್ಟು ಸುಂದರಗೊಳಿಸಲಾಗಿದೆ. ಜಿಲ್ಲೆಯ ಜನರು ಶನಿವಾರ,ರವಿವಾರ ಹಾಗೂ ರಜಾ ದಿನದಲ್ಲಿ ಈ ವೃಕ್ಷ ಉದ್ಯಾನವನ್ನಕ್ಕೆ ಭೇಟಿ ನೀಡಿ ಕುಟುಂಬದೊಂದಿಗೆ ಸಂತಸದ ಕ್ಷಣ ಕಳೆದು ಸಂಜೆ ಮನೆಗೆ ಮರಳುತ್ತಾರೆ.
Related Articles
Advertisement
ಶಾಸಕ-ಸಂಸದರೇ ಸಮಸ್ಯೆ ಪಾರ್ಕ್ ಗಮನಿಸಿ :
ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ಸಂಗಣ್ಣ ಕರಡಿ ಅವರು ಜಿಲ್ಲೆಯ ಸಾಲು ಮರದ ತಿಮ್ಮಕ್ಕ ಪಾರ್ಕ್ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಇಲ್ಲಿ ಜನರಿಗಿಂತ ಗಿಡಮರಗಳಿಗೆ ನೀರಿನ ಸಮಸ್ಯೆ ಹೆಚ್ಚಿದ್ದು, ಇದರ ನಿವಾರಣೆಗೆ ತುಂಗಭದ್ರಾ ಡ್ಯಾಂನಿಂದ ಇಲ್ಲವೇ, ಇತರೆ ಜಲ ಮೂಲಗಳಿಂದಲಾದ್ರೂ ಶಾಶ್ವತ ನೀರಿನ ವ್ಯವಸ್ಥೆ ಮಾಡಬೇಕಿದೆ. ಇಲ್ಲದಿದ್ದರೆಮುಂದಿನ ದಿನಗಳಲ್ಲಿ ಹೆಸರಿಗಷ್ಟೇ ತಿಮ್ಮಕ್ಕ ಪಾರ್ಕ್, ಅಲ್ಲಿ ಏನೂ ಇಲ್ಲ ಎನ್ನುವಅಪಕೀರ್ತಿ ಎದುರಾಗುವ ಸಾಧ್ಯತೆ ಹೆಚ್ಚಿದೆ. ಜನಪ್ರತಿನಿ ಧಿಗಳು ವಿಶೇಷ ಯೋಜನೆರೂಪಿಸಿ, ನೀರಿನ ವ್ಯವಸ್ಥೆ ಮಾಡಿದರೆ ಜಿಲ್ಲೆಗೊಂದು ಮಾದರಿ ಉದ್ಯಾನವನವಾಗಿ ಮಾರ್ಪಡುವಲ್ಲಿ ಎರಡು ಮಾತಿಲ್ಲ.
ತಿಮ್ಮಕ್ಕನ ಪಾರ್ಕ್‌ನಲ್ಲಿ ಎರಡು ಬೋರ್‌ವೆಲ್ ಕೊರೆಯಿಸಿದ್ದೇವೆ. ಆದರೆನೀರು ಬಂದಿಲ್ಲ. ನಮಗೆ ಅಲ್ಲಿ ಜಲ ಮೂಲದ್ದೇ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆಗೆ ಸಭೆಯನ್ನೂ ನಡೆಸಿ ಚರ್ಚಿಸಿದ್ದೇವೆ. ಜೊತೆಗೆ ಡಿಸಿ ಅವರೊಂದಿಗೂ ಸಮಾಲೋಚಿಸಿದ್ದೇವೆ. ಕಲ್ಯಾಣ ಕರ್ನಾಟಕ ಮಂಡಳಿಅನುದಾನದಲ್ಲಿ ಪಾರ್ಕ್ ಅಭಿವೃದ್ಧಿಗೆ ವಿಶೇಷ ಯೋಜನೆಯನ್ನೂ ರೂಪಿಸಿ ಪ್ರಸ್ತಾವನೆ ಸಲ್ಲಿಸಿದ್ದೇವೆ. -ಹರ್ಷಬಾನು, ಡಿಎಫ್‌ಒ, ಕೊಪ್ಪಳ
ದತ್ತು ಕಮ್ಮಾರ