ಯಡಿಯೂರಪ್ಪನವರ ಮಹತ್ವಾಕಾಂಕ್ಷಿ ಯೋಜನೆ
2019-20ರಲ್ಲಿ 5.04 ಲಕ್ಷ ಸೈಕಲ್ ವಿತರಣೆ
Advertisement
ಬೆಂಗಳೂರು: ರಾಜ್ಯದ ಸರಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸಲು ಮತ್ತು ಶೈಕ್ಷಣಿಕ ಉತ್ತೇಜನಕ್ಕಾಗಿ ದಶಕದ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಆರಂಭಿಸಿದ್ದ “ಉಚಿತ ಸೈಕಲ್ ಭಾಗ್ಯ’ ಯೋಜನೆ ದುರ್ಬಲವಾಗುತ್ತಿದೆ.
Related Articles
ಪ್ರತಿ ವರ್ಷ ಸರಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳ ಮಾಹಿತಿಯನ್ನು ಶಾಲಾ ಮುಖ್ಯಶಿಕ್ಷಕರ ಮೂಲಕ ಸಂಗ್ರಹಿಸಿ, ಅವರ ಬೇಡಿಕೆಗೆ ಅನುಸಾರವಾಗಿ ಸೈಕಲ್ ಪೂರೈಸಲಾಗುತ್ತದೆ. 2020-21ನೇ ಸಾಲಿನಲ್ಲಿ ಸೈಕಲ್ ವಿತರಣೆ ಬಗ್ಗೆ ಇಲಾಖೆಯಿಂದ ಯಾವುದೇ ಮಾಹಿತಿ ಕೇಳಿಲ್ಲ ಮತ್ತು ಈ ಸಂಬಂಧ ಯಾವುದೇ ಸೂಚನೆಯೂ ಬಂದಿಲ್ಲ ಎಂದು ಉಪನಿರ್ದೇಶಕರೊಬ್ಬರು ವಿವರ ನೀಡಿದರು.
Advertisement
ಶಾಲಾ ಮಕ್ಕಳಿಗೆ 2020-21ನೇ ಸಾಲಿನಲ್ಲಿ ಉಚಿತ ಸೈಕಲ್ ಯೋಜನೆ ಇರುವುದಿಲ್ಲ. ಅನುದಾನದ ಹಂಚಿಕೆ ಆಗದಿರುವುದರಿಂದ ಯೋಜನೆ ಈ ವರ್ಷ ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಮುಂದಿನ ವರ್ಷದ ಪರಿಸ್ಥಿತಿಯು ಸರಕಾರದ ಅನುದಾನ ಹಂಚಿಕೆ ಆಧಾರದಲ್ಲಿ ನಿರ್ಧಾರವಾಗಲಿದೆ.-ಉಮಾಶಂಕರ್, ಪ್ರಧಾನ ಕಾರ್ಯದರ್ಶಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ