Advertisement
ಮೂಲಕಾರಣವೇನು? ಕೋವಿಡ್ ಕಾರಣದಿಂದಾಗಿ, ಕಚ್ಚಾ ತೈಲ ಹಾಗೂ ಇತರ ಇಂಧನ ಮೂಲಗಳಿಗೆ ಇದ್ದ ಬೇಡಿಕೆ ಜಾಗತಿಕ ಮಟ್ಟದಲ್ಲಿ ಅಗಾಧವಾಗಿ ಕುಸಿಯಿತು. ಈಗ ಜಾಗತಿಕ ಉತ್ಪಾದನಾ ಕ್ಷೇತ್ರ ಪುಟಿದೆದ್ದಿರುವ ಹಿನ್ನೆಲೆಯಲ್ಲಿ, ಈ ಬೇಡಿಕೆ ಹಿಂದೆ ಇದ್ದ ಬೇಡಿಕೆಗಿಂತ ಹತ್ತಾರು ಪಟ್ಟು ಹೆಚ್ಚಾಗಿದೆ. ಹೀಗೆ, ಹಠಾತ್ ಆಗಿ ಏರಿದ ಬೇಡಿಕೆ ಹಾಗೂ ಅದಕ್ಕೆ ಸರಿಸಮನಾಗಿ ಉತ್ಪಾದನೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ದೊಡ್ಡಮಟ್ಟದ ಕೊರತೆ ಏರ್ಪಟ್ಟಿದೆ.
ಮರು ನವೀಕರಿಸಬಹುದಾದ ಇಂಧನಗಳಿಗೆ ಹೋಲಿಸಿದರೆ, ನೈಸರ್ಗಿಕ ಅನಿಲಗಳು ಉತ್ತರವಾಗಬಹುದು. ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಗೆ ಹೋಲಿಸಿದರೆ ನೈಸರ್ಗಿಕ ಅನಿಲವು ಇಂಗಾಲ ಹೊರದೂಡುವಿಕೆಯ ಪ್ರಮಾಣವನ್ನು ಶೇ. 46ರಷ್ಟು ಕಡಿಮೆ ಇಂಗಾಲ ಹೊರದೂಡುತ್ತದೆ. ಹಾಗಾಗಿ, ಹಸಿರು ಇಂಧನವೇ ಉತ್ತರವಾಗಬಹುದು. ಆದರೆ, ಇದನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಬೇಕು.
Related Articles
Advertisement
ಸೋಲಾರ್, ಪವನಶಕ್ತಿ ಲೆಕ್ಕಾಚಾರ ಹೇಗೆ?ಇದು ಸುಲಭಸಾಧ್ಯವಲ್ಲ. ತಮಗೆ ಅಗತ್ಯವಿರುವಷ್ಟು ಸೌರಶಕ್ತಿ ಹಾಗೂ ಪವನ ಶಕ್ತಿ ಆಧಾರಿತ ವಿದ್ಯುತ್ತನ್ನು ಉತ್ಪಾದಿಸಲು ನಾನಾ ದೇಶಗಳು ಅತಿ ದೊಡ್ಡ ದಾದ ಮೂಲ ಸೌಕರ್ಯಗಳನ್ನು ಕಲ್ಪಿಸ ಬೇಕಿದೆ. ಹಾಗಾಗಿ, ಇದಕ್ಕೆ ಹೆಚ್ಚು ಜಾಗಬೇಕು, ಹೆಚ್ಚು ಸಮ ಯವೂ ವ್ಯಯವಾಗುತ್ತದೆ. ಹಲವಾರು ದೇಶಗಳಲ್ಲಿ ಸೌರಶಕ್ತಿ ಹಾಗೂ ಪವನಶಕ್ತಿ ಯಿಂದ ಬಂದಿರುವ ವಿದ್ಯುತ್ತನ್ನು ಸಂಗ್ರಹಿ ಸುವ ಸ್ಟೋರೇಜ್ ವ್ಯವಸ್ಥೆ ಇಲ್ಲ. ಹಾಗಾಗಿ, ಸದ್ಯದ ಮಟ್ಟಿಗೆ ಇವುಗಳನ್ನು ಅವಲಂಬಿಸುವಂತಿಲ್ಲ. ಅವಶ್ಯಕತೆಯೇ ಆವಿಷ್ಕಾರಗಳ ತಾಯಿ ಈಗ ಭುಗಿಲೆದ್ದಿರುವ ಕಲ್ಲಿದ್ದಲು ಕೊರತೆ, ಜಾಗತಿಕ ಇಂಧನ ಕೊರತೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಹಲವಾರು ದೇಶಗಳು ಹೊಸ ಇಂಧನ ಮೂಲಗಳ ಆವಿಷ್ಕಾರಕ್ಕೆ ಮುಂದಾಗಿವೆ. ಈ ಕುರಿತಂತೆ ಹಲವಾರು ದೇಶಗಳಲ್ಲಿ ಸರ್ಕಾರ ಮತ್ತು ತಜ್ಞರ ನಡುವೆ ಚರ್ಚೆಗಳಾಗುತ್ತಿವೆ. ಉದಾಹರಣೆಗೆ ಕ್ಯಾಲಿಫೋರ್ನಿಯಾದಲ್ಲಿ ಉಷ್ಣಹವೆಯಿಂದ ವಿದ್ಯುತ್ ಉತ್ಪಾದಿಸಿ ಅದನ್ನು ಸಂಗ್ರಹಿಸಿಡುವ ತಂತ್ರಜ್ಞಾನದ ಆವಿಷ್ಕಾರಕ್ಕೆ ಚಾಲನೆ ನೀಡಲಾಗಿದೆ. ಇಂಥ ಪ್ರಯತ್ನಗಳು ಮುಂದೆ ಜಗತ್ತಿಗೆ ಆಸರೆಯಾಗಬಹುದು.