Advertisement

ಸಮುದಾಯ ಮಟ್ಟದ ಪರೀಕ್ಷೆಗೆ ವೈದ್ಯರ ಕೊರತೆ?

04:55 AM May 16, 2020 | Lakshmi GovindaRaj |

ಬೆಂಗಳೂರು: ಪಾದರಾಯನಪುರದಲ್ಲಿ ಸಮುದಾಯ ಮಟ್ಟದಲ್ಲಿ ಕೊರೊನಾ ಸೋಂಕು ಪರೀಕ್ಷೆಗೆ ಕೆಲವು ವೈದ್ಯಕೀಯ ಸಿಬ್ಬಂದಿ ಹಿಂದೇಟು ಹಾಕುತ್ತಿರುವುದರಿಂದ ಹಾಗೂ ವೈದ್ಯಕೀಯ ಸಿಬ್ಬಂದಿಯ ಕೊರತೆಯಿಂದಾಗಿ ಪರೀಕ್ಷೆ  ಪ್ರಕ್ರಿಯೆ ಆಮೆ ವೇಗ ಪಡೆದುಕೊಂಡಿದೆ. ಈ ಭಾಗದಲ್ಲಿ ರ್‍ಯಾಂಡಮ್‌ ಪರೀಕ್ಷೆಯಲ್ಲೂ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗುರುವಾರದಿಂದ ಇಲ್ಲಿನ ಏಳು ಸಾವಿರ ಕುಟುಂಬದ ಸುಮಾರು 40 ಸಾವಿರ ಮಂದಿಯನ್ನು ಆರೋಗ್ಯತಪಾಸಣೆಗೆ ಒಳಪಡಿಸಿ  ಮನೆಗೆ ಒಬ್ಬರಂತೆ ಗಂಟಲು ದ್ರವ ಸಂಗ್ರಹಿಸುವ ಮೂಲಕ ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಲಾಗು ತ್ತಿದೆ.

Advertisement

ಆದರೆ, ಸೋಂಕು ಪರೀಕ್ಷೆಗೆ ಪ್ರಾರಂಭದಿಂದಲೂ ವಿಘ್ನಗಳು ಸೃಷ್ಟಿಯಾಗುತ್ತಿದ್ದು, ಈಗ  ವೈದ್ಯಕೀಯ ಸಿಬ್ಬಂದಿಯ ಕೊರತೆ ಉಂಟಾಗಿದೆ. ಸಮುದಾಯ ಮಟ್ಟದಲ್ಲಿ ಕೊರೊನಾ ಸೋಂಕು ಪರೀಕ್ಷೆ ಮಾಡುವುದಕ್ಕೆ ಸರ್ಕಾರ ಪಿಪಿಇ ಕಿಟ್‌ಗಳನ್ನು ನೀಡಿದೆ. ಆದರೆ, ಇದಕ್ಕೆ ಪೂರಕವಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವ  ಹಾಗೂ ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡುವುದು ಸವಾಲಾಗಿ ಪರಿಣಮಿಸಿದೆ. ಗುರುವಾರದಿಂದ ಸೋಂಕು ಪರೀಕ್ಷೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಗುರುವಾರ 11 ಜನರಿಗೆ ಶುಕ್ರವಾರ 16 ಜನರಿಗೆ ಕೊರೊನಾ ಸೋಂಕು ಪರೀಕ್ಷೆ  ಮಾಡಲಾಗಿದೆ. ಈ ರೀತಿ ತಪಾಸಣೆ ಮಾಡುವುದಾದರೆ, ಸಾವಿರ ಮಂದಿಯನ್ನು ತಪಾಸಣೆ ಮಾಡಲಿಕ್ಕೂ ತಿಂಗಳುಗಳೇ ಹಿಡಿಯಲಿದೆ.

ಬಿಬಿಎಂಪಿ ಏನು ವ್ಯವಸ್ಥೆ ಮಾಡಿಕೊಂಡಿದೆ: ಇಲ್ಲಿನ ಜಗಜೀವನ್‌ ರಾವ್‌ ಪೊಲೀಸ್‌ ಠಾಣೆಯ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ನ ಮೊಬೈಲ್‌ ಕ್ಲಿನಿಕ್‌ನಲ್ಲಿ ಪಾದರಾಯನಪುರದ ಹರಫತ್‌ ನಗರದ ಜನರನ್ನು ತಂದು ತಪಾಸಣೆ  ಮಾಡಲಾಗುತ್ತಿದೆ. ಅಲ್ಲದೆ, ಗೌರಿಪಾಳ್ಯದ ರೆಫರಲ್‌ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ಪರೀಕ್ಷೆಗೆ ಕಿಯೋಸ್ಕ್ ತೆರೆಯಲಾಗಿದೆ. ಬಿಬಿಎಂಪಿಯ ವೈದ್ಯಕೀಯ ಸಿಬ್ಬಂದಿ ಹೇಳುವಂತೆ ಒಂದು ಕಿಯೋಸ್‌ಕ್‌ ನಿರ್ವಹಣೆಗೆ ಕನಿಷ್ಠ ಏಳು ಜನ  ಬೇಕು. ಈ ಮಧ್ಯೆ ಮತ್ತೂಂದು ಕಿಯೋಸ್ಕ್ ತೆರೆಯುವುದಾಗಿ ಹೇಳಲಾಗಿತ್ತಾ  ದರೂ, ಇನ್ನು ಕಾರ್ಯರೂಪಕ್ಕೆ ಬಂದಿಲ್ಲ.

ಪಾದರಾಯನಪುರಕ್ಕೆ ಬಂದು ಗಂಟಲು ದ್ರವ ಸಂಗ್ರಹಿಸುವು ದಕ್ಕೆ ವೈದ್ಯಕೀಯ ಸಿಬ್ಬಂದಿ ಹಿಂದೇಟು  ಹಾಕುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಪಾದರಾಯನಪುರದಲ್ಲಿ ಗಂಟಲು ದ್ರವದ ಮಾದರಿ ಸಂಗ್ರಹ ಮಾಡುವುದಕ್ಕೆ ಸಂಬಂಧಿಸಿದಂತೆ ಏಳು ಮಂದಿಯ ವೈದ್ಯಕೀಯ ತಂಡಕ್ಕೆ ಪಾದರಾಯನಪುರದಲ್ಲಿಯೇ ತರಬೇತಿ ನೀಡಲಾಗಿದೆ. ಸದ್ಯಕ್ಕೆ 16  ಸಿಬ್ಬಂದಿ ಗಂಟಲ ದ್ರವದ ಮಾದರಿ ಸಂಗ್ರಹಿಸುತ್ತಿದ್ದಾರೆ. ಇದರಲ್ಲೂ ಕೆಲವರು ಗೈರುಹಾಜರಾಗುತ್ತಿರುವುದರಿಂದ ಪರೀಕ್ಷೆ ಪ್ರಕ್ರಿಯೆ ಸವಾಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ವೈದ್ಯಕೀಯ ಸಿಬ್ಬಂದಿ ‘ಉದಯವಾಣಿ’ ಗೆ ಮಾಹಿತಿ ನೀಡಿದ್ದಾರೆ.

ಸಿಂಪಡಣೆ ವಾಹನಕ್ಕೆ ಚಾಲನೆ: ವಾರ್ಡ್‌ ಮಟ್ಟದಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ಖಾಸಗಿ ಕಂಪನಿಯು ಕೊರೊನಾ ಔಷಧ ಸಿಂಪಡಿ ಸುವ ವಾಹನಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ವ್ಯವಹಾರಗಳ ಸಚಿವ  ಗೋಪಾಲಯ್ಯ  ಶುಕ್ರವಾರ ಚಾಲನೆ ನೀಡಿ ದರು. ಮಹಾಲಕ್ಷಿ$¾ ಲೇಔಟ್‌ ನಲ್ಲಿ ಆಯೋ ಜಿಸಿದ್ದ ಕಾರ್ಯಕ್ರಮ ದಲ್ಲಿ ವಾಹನ ಯಂತ್ರ ಉದ್ಘಾಟಿಸಿ ಬೆಂಗಳೂರಿನ ಎಲ್ಲ ವಾರ್ಡ್‌ ಹಾಗೂ ರಾಜ್ಯದ ನಗರ ಸ್ಥಳೀಯ ಸಂಸ್ಥೆ ಗಳಲ್ಲೂ ಇದರ ಬಳಕೆ ಮಾಡಲಾಗು ವುದು ಎಂದರು. ಬಿಬಿಎಂಪಿ ಮಾಜಿ ಉಪ ಮಹಾ ಪೌರ ಎಸ್‌ ಹರೀಶ್‌, ಬಿಬಿಎಂಪಿ ಸದಸ್ಯ ರಾಜೇಂದ್ರ ಕುಮಾರ್‌ ಉಪಸ್ಥಿತರಿದ್ದರು.

Advertisement

ಸಿಬ್ಬಂದಿ ಕೊರತೆ ಉಂಟಾಗಿಲ್ಲ: ಕೊರೊನಾ ಸೋಂಕು ಪರೀಕ್ಷೆ ಮಾಡುವುದರಲ್ಲಿ ಯಾವುದೇ ಹಿನ್ನಡೆ ಉಂಟಾಗಿಲ್ಲ. ಇಲ್ಲಿ ಎಲ್ಲವೂ ಹೊಸದಾಗಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಆದ್ಯತೆಯ ಮೇಲೆ ಎಲ್ಲರನ್ನು ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಎಲ್ಲವನ್ನೂ ಎಚ್ಚರಿಕೆಯಿಂದ ಮಾಡಬೇಕಿದೆ. ಗಂಟಲು ದ್ರವ ಸಂಗ್ರಹದ ಹಂತದಿಂದ ವರದಿ ನೀಡುವವರೆಗೆ ಎಲ್ಲಿಯೂ ಲೋಪವಾಗದಂತೆ ನೋಡಿಕೊಳ್ಳಬೇಕಾಗಿದೆ. ಸದ್ಯ ಎರಡು ದಿನಗಳಾಗಿದ್ದು,  ದಿನ  ದಿನಗಳಲ್ಲಿ ಪರೀಕ್ಷೆ ಮಾಡುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next