Advertisement

ಬಿಸಿಯೂಟಕ್ಕೂ ಇಲ್ಲ ಶುದ್ಧ ನೀರು!

05:48 PM Feb 01, 2020 | Suhan S |

ಕೊರಟಗೆರೆ: ಸರ್ಕಾರ ಈಗಾಗಲೇ ಶುದ್ಧ ಕುಡಿಯುವ ನೀರಿಗೆ ಕೋಟ್ಯಂತರ ರೂ. ಖರ್ಚು ಮಾಡಿ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದರೂ ಶುದ್ಧ ನೀರು ಸಿಗುತ್ತಿಲ್ಲ.

Advertisement

ಘಟಕ ರಿಪೇರಿ ಮಾಡಿಸಿ: ಸ್ಥಳೀಯ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಕುಡಿಯುವ ಹಾಗೂ ಬಿಸಿಯೂಟ ತಯಾರಿಸಲೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮತ್ತು ಸದಸ್ಯರ ನಿರ್ಲಕ್ಷ್ಯದಿಂದ ಶುದ್ಧ ನೀರಿನ ಸಮಸ್ಯೆ ಉಂಟಾಗಿದೆ. ಖಾಸಗಿ ಗುತ್ತಿಗೆದಾರರ ನಿರ್ಲಕ್ಷ್ಯದಿಂದ 2 ರೂ.ಗೆ ಸಿಗಬೇಕಾದ 20 ಲೀಟರ್‌ ನೀರಿಗೆ 5 ರೂ.ಗಿಂತ ಅಧಿಕ ಹಣ ಪಡೆಯುತ್ತಿದ್ದಾರೆ. ಶುದ್ಧ ನೀರಿನ ಟ್ಯಾಂಕ್‌ ಹಾಗೂ ತೊಟ್ಟಿ ಸರಿಯಾದ ಸಮಯಕ್ಕೆ ಸ್ವತ್ಛಗೊಳಿಸದೆ ಅದೇ ನೀರು ನೀಡಲಾಗುತ್ತದೆ. ಆರ್‌ಒ ಇಂಜಿನಿಯರ್‌ ಕೂಡಲೇ ಗಮನಹರಿಸಿ ಗ್ರಾಮಗಳಿಗೆ ಶುದ್ಧ ನೀರಿನ ಘಟಕ ನಿರ್ಮಿಸಲು ಅನುವು ಮಾಡಿಕೊಡಬೇಕು. ಕೆಟ್ಟಿರುವ ಘಟಕ ರಿಪೇರಿ ಮಾಡಿಸಿ ಶುದ್ಧ ನೀರು ಒದಗಿಸಬೇಕಾಗಿದೆ.

ಫ್ಲೋರೈಡ್‌ ನೀರೇ ಗತಿ: ಕೊರಟಗೆರೆ ತಾಲೂಕು ಈಗಾಗಲೇ ಬರಗಾಲ ಪ್ರದೇಶವಾಗಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಭಾಗದಲ್ಲಿ 2.4 ಮತ್ತು 2.8 ಎಂ.ಎಂ.ಪಿನಷ್ಟು ಫ್ಲೋರೈಡ್‌ ನೀರು ಕುಡಿಯುತ್ತಿದ್ದಾರೆ. ತಾಲೂಕಿನ ವಿವಿಧ ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲೂ ಇದೇ ನೀರು ಬಳಸುವಂತಾಗಿದೆ. ಇದರಿಂದ ಕೆಲವು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದು, ಶಾಲಾ ಹಾಗೂ ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ಘಟಕದಿಂದ ಮಕ್ಕಳಿಗೆ ಪ್ರತಿನಿತ್ಯವೂ ಕುಡಿಯಲು ನೀರು ಒದಗಿಸಬೇಕು ಎಂದು ಘಟಕದ ಗುತಿಗೆದಾರರಿಗೂ ತಿಳಿಸಿದ್ದರೂ, ಹಣ ವಸೂಲಿ ಮಾಡಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.

ಘಟಕದ ಗುತ್ತಿಗೆದಾರರು ಅವಧಿ ಮುಗಿದರೂ ಗ್ರಾಪಂ ವ್ಯಾಪ್ತಿಗೆ ಬರುವ ನೀರು ವಿತರಕರಿಗೆ ಘಟಕದ ಜವಾಬ್ದಾರಿ ಆಯಾ ಗ್ರಾಪಂಗೆ ನೀಡದೆ ಹಣದ ಆಸೆಗೆ ಅವರೇ ಮುಂದುವರಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕೂಡಲೇ ತಾಲೂಕಿನ ಎಲ್ಲಾ ಗ್ರಾಪಂ ಅಧಿಕಾರಿಗಳು ಹಾಗೂ ಘಟಕದ ಗುತ್ತಿಗೆದಾರರಿಗೆ ನೋಟಿಸ್‌ ನೀಡುತ್ತೇನೆ. ರಂಗಪ್ಪ, ಎಇಇ, ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next