Advertisement
ರಾಜ್ಯದ ಮೂಲೆ ಮೂಲೆಗಳಿಂದ ರೈತರು ಜಾನುವಾರಗಳನ್ನು ಮಾರಲು, ಖರೀದಿಸಲು ಈ ಜಾತ್ರೆಗೆ ಆಗಮಿಸುತ್ತಾರೆ. ಆದರೆ, ಜಾನುವಾರಗಳಿಗೆ ಕುಡಿಯುವ ನೀರಿನ ಸೌಲಭ್ಯ ನೀಡಿದರೂ, ರೈತರಿಗೆ ಶೌಚಾಲಯ ಸೌಲಭ್ಯ ನೀಡದ ಕಾರಣ ಸಾವಿರಾರು ರೈತರು ಬಯಲು ಶೌಚಾಲಯದ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
Related Articles
Advertisement
ರೈತರು ಜಾತ್ರೆ ಯಲ್ಲಿ ಐದಾರು ದಿನ ಇರುವುದರಿಂದ ಅವ ರಿಗೆ ಶೌಚಾಲಯ ಬೇಕು ಎನ್ನುವ ಕನಿಷ್ಠ ಪ್ರಜ್ಞೆಯೂ ಅಧಿಕಾರಿಗಳಿಗೆ ಇಲ್ಲದಾಗಿದೆ. ಶಾಶ್ವತ ಶೌಚಾಲಯದ ಕಟ್ಟಡ ನಿರ್ಮಾಣ ಮಾಡಲು ತಡವಾದರೂ ಜಾತ್ರೆಗೆ ಅನಿವಾ ರ್ಯವಾಗಿ ಶೌಚಾಲಯ ಬೇಕಾಗಿರುವು ದರಿಂದ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಬೇಕೆಂಬುದು ರೈತರ ಆಗ್ರಹವಾಗಿದೆ. ಆದರೆ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ದಿಂದಾಗಿ ರೈತರು ಶೌಚಕ್ಕಾಗಿ ಬಯಲನ್ನೇ ಆಶ್ರಯಿಸಬೇಕಾಗಿದೆ.
ಅನೇಕ ವರ್ಷಗಳ ಕಾಲ ಜಾನುವಾರಗಳಿಗೆ ನೀರಿಲ್ಲದೇ ಪರದಾಡುವ ಪರಿಸ್ಥಿತಿಯಿತ್ತು. ಅನಂತರ ರೈತರ ಅಕ್ರೋಶದ ಫಲವಾಗಿ ಈ ಬಾರಿ ಜಾನುವಾರುಗಳಿಗೆ ಸಾಕಷ್ಟು ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಸುಂದರ ಪರಿಸರ ಕಾಪಾಡಬೇಕು ಎನ್ನುವ ಅಧಿಕಾರಿಗಳು, ಶೌಚಾಲಯ ನಿರ್ಮಾಣ ಮಾಡದ ಪರಿ ಣಾಮ ಈ ಬಾರಿ ರೈತರು ಅನಿವಾರ್ಯ ವಾಗಿ ಸುಂದರ ಪ್ರಕೃತಿಯನ್ನು ಬಯಲು ಶೌಚಾಲಯ ಮಾಡಿಕೊಂಡಿದ್ದಾರೆ.
ಜಾನುವಾರುಗಳ ಸಂಖ್ಯೆ ಹೆಚ್ಚಳ: ಈ ಬಾರಿ (ಮಹಿಮರಂಗ)ಗುಟ್ಟೆ ಜಾತ್ರೆಗೆ ಜಾನು ವಾರುಗಳ ಸಂಖ್ಯೆ ಹೆಚ್ಚಾಗಿದ್ದು, ಜಾನುವಾರ ಮಾರಾಟವೂ ದ್ವಿಗುಣವಾಗಿದೆ. ಕಳೆದ ಎರ ಡು ವರ್ಷದಿಂದ ನೋಟು ಅಮಾನ್ಯೀಕರಣಮತ್ತು ಮಳೆ ಪ್ರಮಾಣದಲ್ಲಿ ಭಾರೀ ಇಳಿಕೆ ಯಾಗಿ ದನಕರುಗಳಿಗೆ ಮೇವಿನ ಅಭಾವ ಉಂಟಾಗಿತ್ತು. ಹಾಗಾಗಿ, ರಾಸುಗಳ ಜಾತ್ರೆ ಯಲ್ಲಿ ವ್ಯಾಪಾರ ಇಳಿಕೆಯಾಗಿತ್ತು. ಆದರೆ, ಈ ಬಾರಿ ಮುಂಗಾರು ಮಳೆ ಉತ್ತಮವಾದ ಕಾರಣ ಮೇವಿಗೆ ಯಾವುದೇ ಸಮಸ್ಯೆಯಿಲ್ಲ ಹಾಗೂ ರಾಸುಗಳು ಸಹ ಉತ್ತಮವಾಗಿವೆ. ಹಾಗಾಗಿ, ರಾಸುಗಳ ಬೆಲೆದು ಬಾರಿಯಾಗಿದೆ.
ಮಂಡ್ಯ, ಚಾಮರಾಜನಗರ, ರಾಮನಗರ, ಮಾಗಡಿ, ದೊಡ್ಡಬಳ್ಳಾಪುರ, ತುಮಕೂರು, ಗುಬ್ಬಿ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಮುಂತಾದ ಭಾಗಗಳಿಂದ ಮಾರಾಟ ಮಾಡಲು ರೈತರು ಬಂದಿದ್ದು, ಖರೀದಿ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಆದರೆ, ಐದಾರು ದಿನಗಳ ಕಾಲ ಅದ್ದೂರಿಯಾಗಿ ನಡೆಯಬೇಕಾದ ಜಾತ್ರೆ ರೈತರಿಗೆ ಅಗತ್ಯ ಸೌಲಭ್ಯವಿಲ್ಲದ ಕಾರಣ ಒಂದೆರೆಡು ದಿನದಲ್ಲಿ ಜಾತ್ರೆಯ ಭರಾಟೆ ಕ್ಷೀಣಿಸಬಹುದು ಎನ್ನುತ್ತಾರೆ ರೈತರು.
ವೈದ್ಯಕೀಯ ಅವ್ಯವಸ್ಥೆ: ರಾಜ್ಯದ ನಾನಾ ಭಾಗಗಳಿಂದ ಬರುವ ರಾಸುಗಳಿಗೆ ಸ್ಥಳೀ ಯವಾಗಿ ಯಾವುದೇ ಸಾಂಕ್ರಾಮಿಕ ರೋಗ ಮತ್ತು ಮುಖ್ಯವಾಗಿ ಕಾಲುಬಾಯಿ ರೋಗ ಬಾರದಂತೆ ತಡೆಯಲು ಪಶು ಇಲಾಖೆ ಅಧಿ ಕಾರಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ, ತಾಲೂಕು ಅಧಿಕಾರಿಗಳು ಪಶು ವೈದ್ಯರನ್ನು ನೇಮಕ ಮಾಡಬಹುದಾಗಿತ್ತು. ಆಸ್ಪತ್ರೆಯ ಸಹಾಯಕರನ್ನು ನೇಮಕ ಮಾಡಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಲಕ್ಷ ರೂ.ವರೆಗೂ ವ್ಯಾಪಾರ: ಗುಟ್ಟೆ ರಾಸುಗಳ ಜಾತ್ರೆಯಲ್ಲಿ ಕನಿಷ್ಠ 15 ಸಾವಿರ ರೂ.ನಿಂದ 3.5ಲಕ್ಷ ರೂ. ವರೆಗೂ ರಾಸು ಗಳು ಮಾರಾಟವಾದವು. ಉತ್ತಮ ದೇಸಿ ತಳಿಗಳು ಒಂದು ಲಕ್ಷ ರೂ.ವರೆಗೂ ಜಾತ್ರೆ ಯಲ್ಲಿ ಮಾರಾಟವಾಗುತ್ತವೆ. ರೈತರಲ್ಲಿ ಕೆಲ ವರು ರಾಸುಗಳನ್ನು ಜಾತ್ರೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಜಾಗರೂಕತೆಯಿಂದ ಮಕ್ಕಳಂತೆ ಸಾಕಿ, ಉತ್ತಮ ಆಹಾರವನ್ನು ನೀಡುತ್ತಾರೆ. ಜಾತ್ರೆ ಗಳಲ್ಲಿ ರಾಸುಗಳನ್ನು ಹೂವಿನಿಂದ ವಿಶೇಷ ವಾಗಿ ಅಲಂಕರಿಸಿ ವಾದ್ಯಗಳೊಂದಿಗೆ ಬೀದಿ ಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.
ಸಮಸ್ಯೆ ಬಗ್ಗೆ ನಿರ್ಲಕ್ಷ್ಯ: ರೈತ ರಾಮಯ್ಯ ಪ್ರತಿಕ್ರಿಯಿಸಿ, ಪ್ರತಿ ವರ್ಷ ಜಾತ್ರೆಗೆ ಜಾನು ವಾರುಗಳ ಮಾರಾಟಕ್ಕೆ ಬರುತ್ತೇವೆ. ಆದರೆ, ಇಲ್ಲಿ ರೈತರಿಗೆ ಶೌಚಾಲಯ ವ್ಯವಸ್ಥೆಯಿಲ್ಲ. ಅಧಿಕಾರಿಗಳಿಗೆ ತಿಳಿದಿದ್ದರೂ ಸಮಸ್ಯೆ ಬಗೆ ಹರಿಸಲು ಮುಂದಾಗದಿರುವುದು ಬೇಸರ ತಂದಿದೆ ಎಂದು ತಿಳಿಸಿದರು.
ಎರಡು ದಿನದಲ್ಲಿ ತಾತ್ಕಾಲಿಕ ಶೌಚಾಲಯ: ಕುಲುವನಹಳ್ಳಿ ಗ್ರಾಮ ಪಂಚಾಯಿತಿ ಅಭಿ ವೃದ್ಧಿ ಅಧಿಕಾರಿ ಪಿ.ಮಂಜುನಾಥ್ ಪ್ರತಿಕ್ರಿ ಯಿಸಿ, ಬೆಟ್ಟದ ತಪ್ಪಲಲ್ಲಿ ಶೌಚಾಲಯದ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಇನ್ನೆ ರೆಡು ದಿನಗಳಲ್ಲಿ ತಾತ್ಕಾಲಿಕ ಶೌಚಾ ಲಯ ವ್ಯವಸ್ಥೆ ಮಾಡಲಾಗುವುದು ಎಂದರು.
* ಆರ್.ಕೊಟ್ರೇಶ್