Advertisement
ತಾ.ಪಂ.ಸಭಾಂಗಣ ಮಂಥನದಲ್ಲಿ ಗ್ರಾಪಂ. ಪಿಡಿಒಗಳ ಸಭೆಯಲ್ಲಿ ಮಾತನಾಡಿ, ”ಪ್ರಮುಖವಾಗಿ ಹುಳ್ಕಿಹಾಳ, ಚಳ್ಳೂರು, ಯರಡೋಣಾ, ಗುಂಡೂರು, ಬೆನ್ನೂರು, ಕಲ್ಡುಡಿ,ಹೊಸಕೇರಿ, ಚಿಕ್ಕಮಾದಿನಾಳ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ, ಪ್ರಮುಖವಾಗಿ ಕುಡಿಯುವ ನೀರು, ರಸ್ತೆ. ಚರಂಡಿಗಳು, ಹಕ್ಕು ಪತ್ರಗಳ ವಿತರಣೆ, 9/1 ಪ್ರಮಾಣ ಪತ್ರಗಳನ್ನು ನೀಡುವಲ್ಲಿ ಗ್ರಾಮದ ಜನರಿಗೆ ಸತಾಯಿಸುತ್ತಿರುವದರ ಬಗ್ಗೆ ವರದಿ ಬಂದಿದೆ. ಕೂಡಲೆ ಅಧಿಕಾರಿಗಳು ಗ್ರಾಮದ ಜನರ ಬಗ್ಗೆ ಸ್ಪಂದನೆ ನೀಡದಿದ್ದರೆ ನಿರ್ಧಾಕ್ಷಿಣ್ಯವಾಗಿ ಅಮಾನತು ಗೊಳಿಸಲು ಶಿಫಾರಸ್ಸು ಮಾಡುತ್ತದೆ ಎಂದು ಮಾಹಿತಿ ನೀಡಿದರು.
ಕ್ಷೇತ್ರದಲ್ಲಿರುವ ಪಿಡಿಓಗಳು ಕೇಂದ್ರಸ್ಥಾನದಲ್ಲಿ ವಾಸವಿರುವದಿಲ್ಲ. ಇದರಿಂದ ಗ್ರಾಮಸ್ಥರಿಗೆ ಸಂಪರ್ಕಕ್ಕೆ ಬಾರದಂತಾಗಿದೆ. ಕೂಡಲೆ ಸಿಇಒ ಅವರು ಕೇಂದ್ರಸ್ಥಾನದಲ್ಲಿ ವಾಸವಾಗಿರುವಂತೆ ಆದೇಶ ನೀಡಬೇಕೆಂದರು.
Related Articles
ಕಿತ್ತೂರು ತಾಲೂಕಿನ ಬೈಂದೂರು ಗ್ರಾಮ ರಾಜ್ಯಕ್ಕೆ ಮಾದರಿಯಾಗಿದೆ. ಈ ಗ್ರಾಮವನ್ನು ಎಲ್ಲಾ ಪಿಡಿಒ ಗಳು ವೀಕ್ಷಣೆ ಮಾಡಿದರೆ ನಿಮಗೆ ಅಭಿವೃದ್ದಿಯ ಅರಿವು ಆಗುತ್ತದೆ. ಬೈಂದೂರು ಗ್ರಾಮದಲ್ಲಿ ಮಳೆಯಾದರೆ ನೀರು ನಿಲ್ಲುವದಿಲ್ಲ ಉತ್ತಮ ಚರಂಡಿಗಳು, ಶೌಚಾಲಯ, ಸಿಸಿ ರಸ್ತೆ ಸೇರಿದಂತೆ ಎಲ್ಲಾ ಸೌಲಭ್ಯಗಳು ಹೊಂದಿವೆ ಕಾರಣ ಸಿಇಒ ಅವರು ಈ ಭಾಗದ ಪಿಡಿಓಗಳನ್ನು ಪ್ರವಾಸಕ್ಕೆ ಕಳಿಸುವಂತೆ ಸೂಚಿಸಿದರು.
Advertisement
ಪಿಡಿಒ ಅಮಾನತುಕ್ಷೇತ್ರದ ಶಾಸಕರ ಗಮನಕ್ಕೆ ತರದೆ ಚಿಕ್ಕಮಾದಿನಾಳ ಗ್ರಾಮ ಪಂಚಾಯಿತಿ ಕಟ್ಟಡವನ್ನು ಉದ್ಘಾಟಿಸಿದ ಪಿಡಿಒ ಸೂರ್ಯಕುಮಾರಿ ಅವರನ್ನು ಕೂಡಲೆ ಅಮಾನತು ಗೊಳಿಸ ಬೇಕೆಂದು ಸಭೆಯಲ್ಲಿದ್ದ ಸಿಇಒ ಅವರಿಗೆ ಸೂಚನೆ ನೀಡಿದರು. ಕ್ಷೇತ್ರದಲ್ಲಿ ನಡೆಯುವ ಕಾಮಗಾರಿ ಮತ್ತು ಕಾರ್ಯಕ್ರಮಗಳ ಬಗ್ಗೆ ಸ್ಥಳೀಯ ಶಾಸಕರನ್ನು ಅಹ್ವಾನಿಸುವ ಶಿಷ್ಠಾಚಾರ ಇದೆ. ಆದರೆ ಪಿಡಿಒ ಯಾರ ಮಾತು ಕೇಳಿ ಪಂಚಾಯಿತಿ ಕಟ್ಟಡವನ್ನು ಉದ್ಘಾಟಿಸಿ ಶಿಷ್ಚಾಚಾರ ಉಲ್ಲಂಘಿಸಿದ್ದಾರೆ ಕೂಡಲೆ ಅನಮಾತು ಗೊಳಿಸ ಬೇಕೆಂದು ಸೂಚನೆ ನೀಡಿದರು. ಸಭೆಯಲ್ಲಿ ಸಿಇಒ ರಾಹೂಲ್ ರತ್ನಂ ಪಾಂಡೆ, ಯೋಜನಾಧಿಕಾರಿ ಕೃಷ್ಣಮೂರ್ತಿ, ಇಒ ಲಕ್ಷ್ಮೀದೇವಿ, ಕನಕಗಿರಿ ಇಒ ಚಂದ್ರಶೇಖರ ಕನಕಗಿರಿ, ಕಾರಟಗಿ ಇಒ ನರಸಪ್ಪ, ಜಿಲ್ಲಾ ಪಂಚಾಯಿತ್ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ ಇದ್ದರು.