ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ(ಕೆ.ಎಸ್.ಎಂ.ಎಸ್.ಸಿ.ಎಲ್) ನಿರ್ಲಕ್ಷ್ಯದಿಂದ 2020-21ನೇ ಸಾಲಿನ ಟೆಂಡರ್‌ಗಳ ಅಂತಿಮ ಪ್ರಕ್ರಿಯೆ ಮುಗಿಯದ ಹಿನ್ನೆಲೆಯಲ್ಲಿ ಈ ಸಮಸ್ಯೆ ಉದ್ಭವಿಸಿದೆ.
Advertisement
ರಾಜ್ಯದಲ್ಲಿರುವ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಗಂಭೀರ ಕಾಯಿಲೆ ನಿವಾರಣೆಗಿರುವ ಜೀವ ರಕ್ಷಕ ಔಷಧಗಳ ಕೊರತೆ ಪ್ರತಿ ವರ್ಷವೂ ಮರುಕಳಿಸುತ್ತಲೇ ಇದೆ. ಇದೀಗ 44 ಜೀವ ರಕ್ಷಕ ಔಷಧಿಗಳ ಅಭಾವದಿಂದ ರೋಗಿಗಳು ಪರದಾಡುವಂತಾಗಿದೆ.
Related Articles
Advertisement
ಯಾವೆಲ್ಲ ಔಷಧ ಕೊರತೆ?ಪ್ಯಾರಸಿಟಮೊಲ್ , ಪುಯನ್‌ಜೋಲ್ ಕ್ಯಾಪೊಲ್ಸ್, ಡಿಸೈಕ್ಲೋಮೈನ್ ಹೈಡ್ರೋಕ್ಲೋರೈಡ್ ಇಂಜೆಕ್ಷನ್, ಫ್ಯೂರೋಸೆಮೈಡ್ ಇಂಜೆಕ್ಷನ್, ಹಾವು ಕಡಿತ ಚುಚ್ಚುಮದ್ದು, ಮೆಟಿರ್ಮಿನ್, ಬ್ಲಿಡ್ ಗ್ರೂಪಿಂಗ್ ಕಿಟ್, ಡಿಕ್ಲೋಫೆನಾಕ್ ಸೋಡಿಯಂ ಇಂಜೆಕ್ಷನ್, ವಿಟಮಿನ್ ಡಿ ಕ್ಯಾಲ್ಸಿಯಂ, ಟ್ಯಾಬ್ಲೆಟ್ ರಾನಿಟಿಡಿನ್, ಇಮ್ಯೂನೊಗ್ಲೋಬ್ಯೂಲಿನ್, ಎಚ್‌ಬಿಎಸ್‌ಎಜಿ ಕಿಟ್, ಬಿಎಸ್‌ಎಜಿ ಕಿಟ್, ವಿಡಿಆರ್‌ಎಲ್ ಕಿಟ್, ಡಬ್ಲ್ಯುಐಡಿಎಲ್ ಕಿಟ್, ಮೂತ್ರ ಸಂಗ್ರಹ ಚೀಲ, ಕೈಗವಸು ಸೇರಿದಂತೆ 44ಕ್ಕೂ ಹೆಚ್ಚಿನ ಔಷಧಿಗಳ ಅಭಾವ ಉಂಟಾಗಿದೆ. ಶ್ವಾಸಕೋಶ ಹಾಗೂ ಕರಳು ಸಮಸ್ಯೆ, ಅಸ್ತಮಾ, ರಕ್ತಹೀನತೆ, ನ್ಯುಮೋನಿಯಾ, ಕ್ಯಾನ್ಸರ್, ಸಕ್ಕರೆಕಾಯಿಲೆ, ಹೃದಯ ಶಸ್ತ್ರಚಿಕಿತ್ಸೆ, ರಕ್ತ ಹೆಪ್ಪುಗಟ್ಟುವಿಕೆ, ಮೈಗ್ರೇನ್, ಶೀತ, ನಿದ್ರಾಹೀನತೆ, ರಕ್ತದೊತ್ತಡ, ಗರ್ಭಾಶಯ ರಕ್ತಸ್ರಾವ, ಹೃದಯಾಘಾತ, ಹುಣ್ಣು, ನೋವು, ವಾಂತಿ, ಮೂಳೆ, ತುರಿಕೆ, ಫಂಗಸ್, ಮಿದುಳು, ಕಣ್ಣಿನ ನೋವು ಸೊಂಕು ನಿವಾರಕ ಔಷಧಗಳ ಕೊರತೆ ಎದುರಾಗಿದೆ. 2021-22ನೇ ಸಾಲಿನಲ್ಲಿ ಔಷಧಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಔಷಧಿಗಳ ಅಭಾವ ಉಂಟಾಗಿದೆ. ಜೀವ ರಕ್ಷಕ ಔಷಧಿ ಗಳ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು. ಕೊರತೆ ಇರುವ ಔಷಧಿಗಳನ್ನು ಸ್ಥಳೀಯವಾಗಿ ಖರೀದಿಸಿ ಪೂರೈಸಲು ಸೂಚಿಸಲಾಗಿದೆ.
– ಡಿ. ರಂದೀಪ್,
ಆಯುಕ್ತರು, ಆರೋಗ್ಯ ಇಲಾಖೆ
– ಅವಿನಾಶ್ ಮೂಡಂಬಿಕಾನ