Advertisement
ತಾಂಡಾದಿಂದ 20ರಿಂದ 30ವಿದ್ಯಾರ್ಥಿಗಳಿಗೆ ಶಾಲೆ ತಲುಪಲುನಿತ್ಯ ಪಾದಯಾತ್ರೆ ಅನಿವಾರ್ಯವಾಗಿದೆ. 6ರಿಂದ 10ನೇ ತರಗತಿಯಲ್ಲಿಓದುವ ಚಿಕ್ಕಮಕ್ಕಳು ಬಿಸಿಲು, ಮಳೆ, ಚಳಿಗಾಳಿಯೆನ್ನದೆ ಅಕ್ಷರ ಕಲಿಕೆಗೆ ಹರಸಾಹಸ ಪಡುವಂತಾಗಿದೆ.
Related Articles
Advertisement
20ರಿಂದ 30 ವಿದ್ಯಾರ್ಥಿಗಳು:
ತಾಂಡಾದಿಂದ ನಿತ್ಯ 20ರಿಂದ 30 ವಿದ್ಯಾರ್ಥಿಗಳು ಅರಕೇರಿ ತಾಂಡಾದಿಂದಹಲಗಲಿ ಗ್ರಾಮಕ್ಕೆ ಶಿಕ್ಷಣಕ್ಕಾಗಿ ಆಗಮಿಸುತ್ತಾರೆ. 6ರಿಂದ 10 ನೇತರಗತಿವರೆಗಿನ ಚಿಕ್ಕ ಮಕ್ಕಳು ಶಾಲೆಗೆ ಪ್ರತಿನಿತ್ಯ 3 ಕಿಮೀ ನಡೆದುಕೊಂಡು ಬರಬೇಕು. ತಾಂಡಾ ಹಾಗೂಹಲಗಲಿ ಗ್ರಾಮದ ನಡುವಿನ ರಸ್ತೆಯಡಹಳ್ಳಿ ಚೀಂಕಾರ ಅಭಯಾರಣ್ಯಕ್ಕೆ ಹೊಂದಿಕೊಂಡಿರುವುದರಿಂದ ನಿತ್ಯಮಕ್ಕಳಲ್ಲಿ ಕಾಡು ಪ್ರಾಣಿಗಳ ಭಯವೂ ಕಾಡುತ್ತದೆ. ಹಲವಾರು ಜನರುತಮ್ಮ ಮಕ್ಕಳು ನಿತ್ಯ ನಡೆದುಕೊಂಡುಹೋಗಬೇಕು ಎಂಬ ಚಿಂತೆಯಿಂದಮಕ್ಕಳ ಶಿಕ್ಷಣವನ್ನು ಅರ್ಧಕ್ಕೆ ಮೊಟಕು ಗೊಳಿಸಿದ್ದಾರೆ. ಮತ್ತುಅನೇಕರು ಬೇರೆ ಬೇರೆ ಊರುಗಳಲ್ಲಿಹಾಸ್ಟೆಲ್‌ಗಳಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿದ್ದಾರೆ.
ನಾವು ನಿತ್ಯ ತಾಂಡಾದಿಂದ 3 ಕೀಮೀ ದೂರವಿರುವ ಹಲಗಲಿ ಗ್ರಾಮಕ್ಕೆ ನಡೆದುಕೊಂಡು ಶಾಲೆಗೆ ಹೋಗಬೇಕು. ನಡೆದುಕೊಂಡು ಹೋಗಲು ಕಷ್ಟವಾಗುತ್ತದೆ. ನಮಗೆ ಶಾಲೆ ಅವಧಿಯಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿದರೆ ಹೆಚ್ಚು ಅನುಕೂಲವಾಗುತ್ತದೆ. –ಹೆಸರು ಹೇಳಲಿಚ್ಚಿಸದ ವಿದ್ಯಾರ್ಥಿ
ಹಲಗಲಿ ಗ್ರಾಮವು ಮುಧೋಳ ತಾಲೂಕು ವ್ಯಾಪ್ತಿಯಲ್ಲಿ ಬರುವುದರಿಂದ ಬಸ್ ಸೌಲಭ್ಯ ಕಲ್ಪಿಸುವ ಕುರಿತು ಮೇಲಧಿಕಾರಿಗಳ ಗಮನ ಸೆಳೆಯುತ್ತೇವೆ. ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಶೀಘ್ರ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುತ್ತೇನೆ. – ಅಶೋಕ ಕೋರಿ, ಬೀಳಗಿ ಘಟಕ ವ್ಯವಸ್ಥಾಪಕ
ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವುದು ನನ್ನ ಗಮನದಲ್ಲಿ ಇಲ್ಲ. ಹೊಸ ಮಾರ್ಗಕ್ಕೆ ಬಸ್ ಓಡಿಸುವುದು ಮೇಲಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು,ಸ್ಥಳೀಯ ಗ್ರಾಮಸ್ಥರು ಬಸ್ ಓಡಿಸುವಂತೆ ನಮಗೆ ಒಂದು ಮನವಿ ನೀಡಿದರೆ ನಾವು ಈ ಬಗ್ಗೆ ಮೇಲಧಿ ಕಾರಿಗಳ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳುತ್ತೇವೆ. – ಜಿ.ಎಸ್. ಬಿರಾದಾರ, ಮುಧೋಳ ಘಟಕ ವ್ಯವಸ್ಥಾಪಕ
-ಗೋವಿಂದಪ್ಪ ತಳವಾರ