Advertisement

Turning point; ಸಾಲ ಮಾಡಿ ಖರೀದಿಸಿದ್ದ ಲಾಟರಿ ಟಿಕೆಟ್ ಗೆ ಜಾಕ್ ಪಾಟ್

11:53 AM Sep 13, 2018 | Team Udayavani |

ಮಾಂಡ್ವಿಗ್ರಾಮ(ಪಂಜಾಬ್): ಕೆಲವು ದಿನಗಳ ಹಿಂದಷ್ಟೇ ಮನೋಜ್ ಕುಮಾರ್(40ವರ್ಷ) ಹಾಗೂ ಪತ್ನಿ ರಾಜ್ ಕೌರ್ ಪ್ರತಿದಿನ ಕೂಲಿ ಕೆಲಸ ಮಾಡಿ 500 ರೂಪಾಯಿ ಸಂಪಾದಿಸುತ್ತಿದ್ದರು.

Advertisement

ಪಂಜಾಬ್ ನ ಸಂಗ್ ರೂರ್ ಗ್ರಾಮದ ಸ್ಥಳೀಯ ಇಟ್ಟಿಗೆ ಗೂಡಿನಲ್ಲಿ ದಂಪತಿ ಕೂಲಿ ಕೆಲಸ ಮಾಡುತ್ತಿದ್ದರು. ಇವರಿಗೆ ನಾಲ್ವರು ಮಕ್ಕಳು. ಆದರೆ ವಿಧಿ ನಿಯಮ ಎಂಬಂತೆ ಆಗಸ್ಟ್ 30ರಂದು ಮನೋಜ್ ಜೀವನದ ದಿಕ್ಕೇ ಬದಲಾಗಿ ಹೋಗಿತ್ತು. ಬೆಳ್ಳಂಬೆಳಗ್ಗೆ ಬ್ಯಾಂಕ್ ಅಧಿಕಾರಿಗಳು, ಪ್ರಾಪರ್ಟಿ ಏಜೆಂಟರುಗಳು ಮನೋಜ್ ಅವರ ಮುರುಕು ಮನೆಯ ಬಾಗಿಲು ಬಡಿಯತೊಡಗಿದ್ದರು.

ಅಚ್ಚರಿ..ಕಾದಿತ್ತು ಮನೋಜ್ ಗೆ!

ನಿಮಗೆ ಧನ್ಯವಾದಗಳು ರಾಜ್ಯ ಸರ್ಕಾರಿ ಲಾಟರಿಯಲ್ಲಿ ಬಂಪರ್ ಬಹುಮಾನ 1.5 ಕೋಟಿ ರೂಪಾಯಿ ನಿಮಗೆ ಬಂದಿದೆ ಎಂದು ಹೇಳಿದಾಗ ಮನೋಜ್ ಗೆ ಮಾತೇ ಹೊರಡಲಿಲ್ಲವಂತೆ. ಅವೆಲ್ಲಕ್ಕಿಂತ ಕುತೂಹಲಕಾರಿ ವಿಷಯ ಏನೆಂದರೆ ಮನೋಜ್ ಈ ಲಾಟರಿಯನ್ನು ನೆರೆಮನೆಯವರ ಬಳಿ 200 ರೂ. ಸಾಲ ಮಾಡಿ ಪಡೆದಿದ್ದ, ಅದೂ ಆತ ಜೀವನದಲ್ಲಿ ಖರೀದಿಸಿದ ಮೊತ್ತ ಮೊದಲ ಲಾಟರಿ ಅದಾಗಿತ್ತು!

ಕೂಲಿ ಕಾರ್ಮಿಕನಾಗಿದ್ದ ಮನೋಜ್ ಈಗ ಕೋಟ್ಯಧಿಪತಿಯಾಗಿದ್ದಾನೆ. ಇದೀಗ ತನ್ನ ಹಾಗೂ ಹೆಂಡತಿ ಮಕ್ಕಳ ಭವಿಷ್ಯದ ಬಗ್ಗೆ ಹಾದಿ ಮಾಡಿಕೊಡಲು ನಿರ್ಧರಿಸಿದ್ದಾನೆ ಎಂದು ವರದಿ ತಿಳಿಸಿದೆ.

Advertisement

ಮನೋಜ್ ಗೆ ಮೂವರು ಹೆಣ್ಣುಮಕ್ಕಳು, ಒಬ್ಬ ಮಗ. ಮೂರು ಹೆಣ್ಣು ಮಕ್ಕಳಲ್ಲಿ ಹಿರಿಯ ಮಗಳು ಪಿಯುಸಿ ಪಾಸ್ ಆದ ಮೇಲೆ ಸಂಗ್ ರೂರ್ ನಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಇದೀಗ ಲಾಟರಿಯಲ್ಲಿ ಬಂಪರ್ ಬಹುಮಾನ ಬಂದ ಮೇಲೆ ಕೆಲಸ ಬಿಟ್ಟು, ವಿದ್ಯಾಭ್ಯಾಸ ಮುಂದುವರಿಸಲು ಮಗಳಿಗೆ ಹೇಳಿದ್ದಾನೆ.

ತಂದೆ ಇತ್ತೀಚೆಗಷ್ಟೇ ಅಸ್ತಮಾ ಸಮಸ್ಯೆಯಿಂದ ತೀರಿಹೋಗಿದ್ದರು. ತನ್ನ ಸಣ್ಣ ಉಳಿತಾಯದಲ್ಲಿಯೇ ತಂದೆಗೆ ಚಿಕಿತ್ಸೆ ಕೊಡಿಸಿದ್ದೆ, ಆದರೆ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಈ ಲಾಟರಿ ಬಹುಮಾನ ಮೊದಲೇ ಬಂದಿದ್ದರೆ ತನ್ನ ತಂದೆಯನ್ನು ಉಳಿಸಿಕೊಳ್ಳಬಹುದಿತ್ತು ಎಂದು ಮನೋಜ್ ತಮ್ಮ ಮನದಾಳವನ್ನು ಹೊರಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next