Advertisement

ಕೂಲಿ ಕಾರ್ಮಿಕರಿಂದ ಮೆರವಣಿಗೆ

01:25 PM Feb 28, 2017 | |

ದಾವಣಗೆರೆ: ಉದ್ಯೋಗ ಖಾತ್ರಿ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತಾಯಿಸಿ ಜಿಲ್ಲಾ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಸೋಮವಾರ ಮೆರವಣಿಗೆ, ಧರಣಿ ನಡೆಯಿತು. ಹೈಸ್ಕೂಲ್‌ ಮೈದಾನದಿಂದ ಮೆರವಣಿಗೆ ಆರಂಭಿಸಿದ ಕೂಲಿ ಕಾರ್ಮಿಕರು, ಅಂಬೇಡ್ಕರ್‌ ವೃತ್ತ, ಹದಡಿ ರಸ್ತೆ ಮೂಲಕ ಜಿಲ್ಲಾ ಪಂಚಾಯತ್‌ ಕಚೇರಿ ಆವರಣ ತಲುಪಿ, ಅಲ್ಲಿ ಕೆಲ ಹೊತ್ತು ಸಾಂಕೇತಿಕ ಧರಣಿ ನಡೆಸಿದರು. 

Advertisement

ರ್ಯಾಲಿಗೆ ಚಾಲನೆ ನೀಡಿ, ಮಾತನಾಡಿದ ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ, ಕೂಲಿ ಕಾರ್ಮಿಕರ ಇಂದಿನ ಸ್ಥಿತಿ ತೀರ ಶೋಚನೀಯವಾಗಿದೆ. ರಾಜ್ಯ, ಕೇಂದ್ರ ಸರ್ಕಾರಗಳು ದೊಡ್ಡವರ ಪರ ನಿಲ್ಲುತ್ತಿವೆ. ಸಣ್ಣವರ ಕೂಗು ಕೇಳುತ್ತಿಲ್ಲ. ಬರದ ಈ ದಿನಗಳಲ್ಲಿ ಕೂಲಿ ಕಾರ್ಮಿಕರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದರು. 

ಕೇಂದ್ರ ಸರ್ಕಾರ ಕಾರ್ಪೋರೇಟ್‌ ವಲಯಕ್ಕೆ ಕೋಟ್ಯಂತರ ರೂಪಾಯಿ ಸಹಾಯ ಮಾಡುತ್ತದೆ. ಈ ವರ್ಷ 5 ಲಕ್ಷ ಕೋಟಿ ರೂ.ನಷ್ಟು ರಿಯಾಯಿತಿ ನೀಡಿದೆ. ಆದರೆ, ಕೂಲಿ ಕಾರ್ಮಿಕರ, ರೈತರ ಸಮಸ್ಯೆ ಆಲಿಸಲು ಸಮಯವಿಲ್ಲ. ಲಕ್ಷ ಕೋಟಿ ರೂ.ಗಿಂತ ಕಡಮೆ ಇರುವ ರೈತರ ಸಾಲ ಮನ್ನಾ ಮಾಡಲು ಮುಂದಾಗುತ್ತಿಲ್ಲ ಎಂದು ದೂರಿದರು. 

ಕೂಡಲೇ ಕೇಂದ್ರ-ರಾಜ್ಯ ಸರ್ಕಾರಗಳು ಕೂಲಿ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಕ್ರಮ ವಹಿಸಬೇಕು. ದಿನಕ್ಕೆ 300 ರೂ.ನಂತೆ ಕನಿಷ್ಠ ವೇತನ ನೀಡಲು ಕ್ರಮ ವಹಿಸಬೇಕು. ಸದ್ಯಉದ್ಯೋಗ ಖಾತರಿ ಯೋಜನೆಅಡಿ ಕೊಡಲಾಗುವ ಕೆಲಸವನ್ನು ವರ್ಷದಲ್ಲಿ 200ರಿಂದ 250 ದಿನ ಕೊಡಬೇಕು. ಬೋಗಸ್‌ ಜಾಬ್‌ ಕಾರ್ಡ್‌ ಹೊಂದಿರುವವರನ್ನು ಪತ್ತೆ ಮಾಡಿ, ರದ್ದುಮಾಡಬೇಕು.

ನಿಜವಾಗಿಯೂ ಕೆಲಸದ ಅಗತ್ಯ ಇರುವ ಕಾರ್ಮಿಕರಿಗೆ ಜಾಬ್‌ ಕಾರ್ಡ್‌ ನೀಡಬೇಕು ಎಂದು ಅವರು ಆಗ್ರಹಿಸಿದರು.  ಹಾಲಿ ಎನ್‌ಆರ್‌ಇಜಿ ಅಡಿ ನೀಡಲಾಗುವ ಕೂಲಿ ಹಣವನ್ನು ಮನಸ್ಸಿಗೆ ಬಂದಾಗ ನೀಡಲಾಗುತ್ತಿದೆ. ಇದು ಬದಲಾಗಬೇಕು. ಇತರೆಯವರಿಗೆ ಕೊಡುವ ಮಾದರಿಯಲ್ಲಿಯೇ ವಾರಕ್ಕೆ ನೀಡಲು ಕ್ರಮ ಕೈಗೊಳ್ಳಬೇಕು.

Advertisement

ಮಧ್ಯವರ್ತಿಗಳ ಹಾವಳಿಯಿಂದ ಕೂಲಿ ಕಾರ್ಮಿಕರನ್ನು ಮುಕ್ತಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಸಂಘಟನೆ ಉಪಾಧ್ಯಕ್ಷೆ ನೇತ್ರಾವತಿ, ವೀರಮ್ಮ, ತಿಪ್ಪೇಸ್ವಾಮಿ, ಶ್ರೀಮತಿ ಹುಚ್ಚೆಂಗಮ್ಮ, ಶ್ರೀಮತಿ ಶಶಿಕಲಾ, ಕೆಂಚಪ್ಪ, ಕೆ. ಗುಡದಯ್ಯ, ತಿಪ್ಪೇಸ್ವಾಮಿ, ಶಶಿಕಲಾ, ಜಗದೀಶ್‌ ರ್ಯಾಲಿ ನೇತೃತ್ವ ವಹಿಸಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next