Advertisement
ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆದ ಭವ್ಯ ಶೋಭಾಯಾತ್ರೆಯನ್ನು ಊರು-ಪರವೂರ ಲಕ್ಷಾಂತರ ಜನರು ಕಣ್ತುಂಬಿಕೊಂಡರು. ಹುಲಿವೇಷ, ಸಂಸ್ಕೃತಿ ಸಂಸ್ಕಾರದ ಸಂದೇಶ ಸಾರುವ ಒಟ್ಟು 72 ಟ್ಯಾಬ್ಲೋಗಳು, ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿತ್ತು.
Related Articles
Advertisement
ಭಕ್ತರ ಸಹಕಾರದಿಂದ ಯಶಸ್ವಿಈ ಬಾರಿಯ ಮಂಗಳೂರು ದಸರಾ ಶೋಭಾಯಾತ್ರೆಗೆ ಊರ-ಪರವೂರಿನ ಲಕ್ಷಾಂತರ ಮಂದಿ ಭಾಗಿಯಾಗಿದ್ದಾರೆ. ಶೋಭಾಯಾತ್ರೆ ನಿಗದಿತ ಸಮಯದಂತೆ, ವಿಳಂಬವಾಗದೆ ವ್ಯವಸ್ಥಿತವಾಗಿ ನಡೆದಿದೆ. ಸಾರ್ವಜನಿಕರ, ಭಕ್ತರ ಸಹಕಾರದಿಂದ ಸಂಪೂರ್ಣ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.
-ಎಚ್.ಎಸ್. ಸಾಯಿರಾಂ, ಅಧ್ಯಕ್ಷರು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ
ಶೋಭಾಯಾತ್ರೆಯಲ್ಲಿ ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಕಾರ್ಯ ಕ್ರಮ ಸಾಂಗವಾಗಿ ನಡೆದಿದೆ. ಸ್ವಯಂಸೇವಕರು, ಪೊಲೀಸ್ ಇಲಾಖೆ ಸಹಿತ ವಿವಿಧ ನೆಲೆಯಲ್ಲಿ ಜನರು ಅಭೂತಪೂರ್ವ ವಾಗಿ ಸ್ಪಂದಿಸಿದ ಕಾರಣದಿಂದ ಯಶಸ್ಸಾಗಿದೆ.
-ಪದ್ಮರಾಜ್ ಆರ್. ಪೂಜಾರಿ, ಕೋಶಾಧಿಕಾರಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಹಲವೆಡೆ ಟ್ರಾಫಿಕ್ ಜಾಮ್
ದಸರಾ ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಂತೂರು, ಎಂ.ಜಿ. ರಸ್ತೆ, ಕುಂಟಿಕಾನ, ಕುದ್ರೋಳಿ, ಬಿಜೈ, ಮಣ್ಣಗುಡ್ಡೆ, ಲಾಲ್‌ಬಾಗ್, ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಸಹಿತ ನಗರದ ಹಲವು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ದಸರಾ ಶೋಭಾಯಾತ್ರೆ ತೆರಳಿದ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ವಸ್ತುಗಳ, ಐಸ್‌ಕ್ರೀಂ ಕಪ್, ನೀರಿನ ಬಾಟಲಿ ಸಹಿತ ತ್ಯಾಜ್ಯಗಳು ರಾಶಿ ಬಿದ್ದಿದ್ದವು. ಮಂಗಳೂರು ಪಾಲಿಕೆ ಸ್ವತ್ಛತ ಕಾರ್ಮಿಕರು ಸೋಮವಾರ ಬೆಳಗ್ಗೆಯಿಂದಲೇ ನಗರದ ಸ್ವತ್ಛತೆ ಮಾಡುವ ಮೂಲಕ ಗಮನಸೆಳೆದರು. ಸಂಜೆ 4.15ರಿಂದ ಮುಂಜಾನೆ 3.20ರವರೆಗೆ!
ಶೋಭಾಯಾತ್ರೆಯು ರವಿವಾರ ಸಂಜೆ 4.15ಕ್ಕೆ ಕುದ್ರೋಳಿಯಿಂದ ಪ್ರಾರಂಭವಾಯಿತು. ಸಂಜೆ 6.31ರ ಸುಮಾರಿಗೆ ಶಾರದೆಯನ್ನು ಮಂಟಪದಿಂದ ಹೊರಗೆ ತರಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಮನೆ-ಅಂಗಡಿಯ ವಿಶೇಷ ಪೂಜೆ ಸ್ವೀಕರಿಸುತ್ತ ಶಾರದೆ ಇದ್ದ ವಾಹನ ರಾತ್ರಿ 9.55ರ ಸುಮಾರಿಗೆ ಲೇಡಿಹಿಲ್ ನಾರಾಯಣ ಗುರು ಸರ್ಕಲ್‌ಗೆ ತಲುಪಿದೆ. ಎಂ.ಜಿ.ರಸ್ತೆ ಮೂಲಕ ಸಾಗಿ ರಾತ್ರಿ 12.10ರ ಸುಮಾರಿಗೆ ಪಿವಿಎಸ್ ತಲುಪಿತು. ಮುಂಜಾನೆ 3.20ಕ್ಕೆ ಶಾರದಾ ಮಾತೆಯ ಶೋಭಾಯಾತ್ರೆ ಶ್ರೀ ಕ್ಷೇತ್ರ ಕುದ್ರೋಳಿಗೆ ವಾಪಾ ಸಾಗಿದೆ. ಕಲಾತಂಡಗಳಿಗೆ ಗೌರವ ಸಲ್ಲಿಸಿ ಶಾರದೆಯ ಜಲಸ್ತಂಭನ ವಾಗುವಾಗ ಸೋಮವಾರ ಬೆಳಗ್ಗೆ 7.15 ಆಗಿತ್ತು.