Advertisement

ವಿಜಯಪುರ, ಗದಗ, ತುಮಕೂರಲ್ಲಿ ಲ್ಯಾಬ್‌

01:53 AM May 02, 2020 | Sriram |

ಬೆಂಗಳೂರು: ವಿಜಯಪುರ, ಗದಗ ಮತ್ತು ತುಮಕೂರಿನಲ್ಲಿ ಕೋವಿಡ್-19 ವೈರಸ್‌ ಸೋಂಕು ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಗೆ ಕೇಂದ್ರ ಸರಕಾರವು ಅನುಮತಿ ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್‌ ತಿಳಿಸಿದ್ದಾರೆ.

Advertisement

ಇವು ಕಾರ್ಯಾರಂಭಿಸಿದರೆ ರಾಜ್ಯದ ಪ್ರಯೋಗಾಲಯಗಳ ಸಂಖ್ಯೆ 26ಕ್ಕೆ ಏರಿಕೆಯಾಗಲಿದೆ. ಈ ಪೈಕಿ ಸರಕಾರಿ 18 ಮತ್ತು ಖಾಸಗಿಯ 8 ಪ್ರಯೋಗಾಲಯಗಳು ಸೇರಿವೆ. ಇವುಗಳಿಂದ ನಿತ್ಯ 5,000 ಕೋವಿಡ್-19 ಶಂಕಿತರ ಮಾದರಿ ಗಳನ್ನು ಪರೀಕ್ಷೆ ಮಾಡಬಹುದು ಎಂದರು.

ಫೆಬ್ರವರಿ ಆರಂಭದಲ್ಲಿ ರಾಜ್ಯದಲ್ಲಿ 2 ಪ್ರಯೋಗಾಲಯಗಳು ಇದ್ದವು. ಸದ್ಯ 26ಕ್ಕೆ ಏರಿಕೆ ಯಾಗಿದ್ದು, ಮೇ ಅಂತ್ಯದೊಳಗೆ 60 ಕೋವಿಡ್-19 ಸೋಂಕು ಪತ್ತೆ ಪ್ರಯೋಗಾಲಯಗಳು ಕಾರ್ಯ ನಿರ್ವಹಿಸಲಿವೆ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next