Advertisement

ಬಡವರ ಏಳಿಗೆಗಾಗಿ 3.79 ಕೋಟಿ ರೂ. ನೀಡಿದ ಎಂಬಪೆ

06:00 AM Jul 18, 2018 | |

ಪ್ಯಾರಿಸ್‌: ವಿಶ್ವ ಚಾಂಪಿಯನ್‌ ಕಿಲಿಯನ್‌ ಎಂಬಪೆ ಫ‌ುಟ್‌ಬಾಲ್‌ ವಿಶ್ವಕಪ್‌ನ ಪ್ರತಿ ಪಂದ್ಯದ ಸಂಭಾವನೆಯನ್ನು ಬಡವರ, ಮಕ್ಕಳ ಏಳಿಗೆಗಾಗಿ ನೀಡಲಿದ್ದಾರೆ ಎನ್ನುವುದು ವರದಿಯಾಗಿತ್ತು. ಇದೀಗ ಎಂಬಪೆ ಒಟ್ಟಾರೆ 3.79 ಕೋಟಿ ರೂ. ಪ್ರತಿ ಪಂದ್ಯದ ಸಂಭಾವನೆ ಮೊತ್ತವನ್ನು ಸಮಾಜದಲ್ಲಿನ ಬಡವರಿಗಾಗಿ, ಮಕ್ಕಳ ಶಿಕ್ಷಣ, ಆರೋಗ್ಯ, ವಸತಿ ಸೇರಿದಂತೆ ಸಹಾಯಕ್ಕಾಗಿ ದಾನವಾಗಿ ನೀಡಿದ್ದಾರೆ. 

Advertisement

19  ವರ್ಷದ ಎಂಬಪೆಯ ಸಮಾಜ ಕಳಕಳಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next