Advertisement

ಫೈನಲ್ ಟೆಸ್ಟ್: ವಿರಾಟ್ ವಿಕೆಟ್ ನಮಗೆ ದೊಡ್ಡ ತಿರುವು ನೀಡಿತು ಎಂದ ಜ್ಯಾಮಿಸನ್

12:54 PM Jun 21, 2021 | Team Udayavani |

ಸೌಥಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಸರದಿಯ ಮೇಲೆ ವೇಗಿ ಜ್ಯಾಮಿಸನ್ ಸವಾರಿ ಮಾಡಿದರು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಐದು ವಿಕೆಟ್ ಕಿತ್ತ ಕೈಲ್ ಜ್ಯಾಮಿಸನ್ ಕಿವೀಸ್ ಗೆ ಪ್ರಮುಖ ಅಸ್ತ್ರವಾದರು.

Advertisement

ಎರಡನೇ ದಿನದಾಟದ ಆರಂಭದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ಜ್ಯಾಮಿಸನ್ ಎಲ್ ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಈ ಎಸೆತದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜ್ಯಾಮಿಸನ್, ಆ ಎಸೆತದಲ್ಲಿ ಯಾವುದೇ ಬ್ಯಾಟ್ಸಮನ್ ಆದರೂ ಔಟ್ ಆಗುತ್ತಿದ್ದರು ಎಂದಿದ್ದಾರೆ.

ಇದನ್ನೂ ಓದಿ:ಟೀಂ ಇಂಡಿಯಾ ಜೈವಿಕ ಸುರಕ್ಷಾ ವಲಯದಿಂದ ಹೊರಬಂದ ಐವರು ಆಟಗಾರರು

ಸತತ ಔಟ್ ಸ್ವಿಂಗರ್ ಗಳನ್ನು ಎಸೆದು ನಂತರ ಒಂದು ಇನ್ ಸ್ವಿಂಗ್ ಬಾಲ್ ಹಾಕುವ ಬಗ್ಗೆ ಮಾತನಾಡಿದ ಜ್ಯಾಮಿಸನ್, ದೊಡ್ಡ ವಿಕೆಟ್ ಪಡೆಯಲು ಇದೊಂದು ಮಾದರಿಯಾಗಿತ್ತು. ಈ ಪಿಚ್ ನಲ್ಲಿ ಬೌಲರ್ ಗಳಿಗೆ ನಿಯಂತ್ರಣ ಸಾಧಿಸುವುದು ಕಷ್ಟ. ಅಂತೆಯೇ ಬ್ಯಾಟ್ಸಮನ್ ಗಳಿಗೂ ಮ್ಯಾನೇಜ್ ಮಾಡುವುದು ಕೂಡಾ ಕಠಿಣವಾಗಿತ್ತು, ಅದು ವಿರಾಟ್ ಆಗಲೇ ಯಾರೇ ಆಗಲಿ ಎಂದು ಜ್ಯಾಮಿಸನ್ ಹೇಳಿದ್ದಾರೆ.

ಪಂದ್ಯಕ್ಕೆ ವಿರಾಟ್ ಕೊಹ್ಲಿಯ ವಿಕೆಟ್ ದೊಡ್ಡ ತಿರುವು ನೀಡಿದೆ ಎಂದು ಆರ್ ಸಿಬಿಯಲ್ಲಿ ಕೊಹ್ಲಿ ನಾಯಕತ್ವದಡಿಯಲ್ಲಿ ಆಡುವ ಜ್ಯಾಮಿಸನ್ ಅಭಿಪ್ರಾಯ ಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next