Advertisement

KYC ವಂಚನೆಯ ಬಗ್ಗೆ ಜಾಗೃತರಾಗಿ :ನಿವೃತ್ತ ಆರ್‌ಬಿಐ ಉದ್ಯೋಗಿಯೇ ವಂಚನೆಗೆ ಬಲಿ..!

06:21 PM Nov 13, 2021 | Team Udayavani |

ನವದೆಹಲಿ: 70 ವರ್ಷ ವಯಸ್ಸಿನ ಆರ್ ಬಿ ಐನ ನಿವೃತ್ತ ಮಹಿಳಾ ಉದ್ಯೋಗಿಯೊಬ್ಬರು ಆನ್‌ಲೈನ್‌ ವಂಚನೆಗೆ ಒಳಗಾಗಿದ್ದು, ಬರೋಬ್ಬರಿ 3.38ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ನಿವೃತ್ತಿ ವೇತನವೊಂದೇ ಇವರ ಆದಾಯದ ಮೂಲವಾಗಿತ್ತು. ವಂಚಕರು ತಾವು ಎಸ್‌ಬಿಐ ಬ್ಯಾಂಕ್‌ನ ಉದ್ಯೋಗಿಗಳು, ನಮಗೆ ನಿಮ್ಮ ಪ್ರಾಥಮಿಕ ಗ್ರಾಹಕ ಮಾಹಿತಿ(KYC) ಬೇಕು ಎಂಬುದಾಗಿ ಮಹಿಳೆಯನ್ನು ನಂಬಿಸಿ ವಂಚಿಸಿದ್ದಾರೆ.

Advertisement

ವರದಿಗಳ ಪ್ರಕಾರ, ನವೆಂಬರ್ 8 ರಂದು ಮಹಿಳೆ ತನ್ನ ಫೋನ್‌ಗೆ ಸಂದೇಶವೊಂದನ್ನು ಸ್ವೀಕರಿಸಿದ್ದು, ತಾನು ಇನ್ನೂ ತನ್ನ KYC ಮಾಹಿತಿಯನ್ನು ನವೀಕರಿಸಿಲ್ಲ ಎಂದು ಆ ಸಂದೇಶದಲ್ಲಿ ತಿಳಿಸಲಾಗಿತ್ತು. ಈ ಸಂದೇಶವು ಎಸ್‌ಬಿಐ ಅಧಿಕಾರಿಯ ಫೋನ್ ಸಂಖ್ಯೆಯನ್ನು ಒಳಗೊಂಡಿತ್ತು.

ಇದನ್ನೂ ಓದಿ:- ಕಾಫಿ ಬೆಳೆಗಾರರಿಗೆ ಸಂತಸದ ಸುದ್ದಿ; ಕಾಫಿ ಎಲೆಯಿಂದಲೂ ಪಾನೀಯ

ಮಹಿಳೆ ಅಂತಿಮವಾಗಿ ಫೋನ್‌ ಸಂಖ್ಯೆ ಪತ್ತೆಮಾಡಿ  ಆ ಸಂಖ್ಯೆಗೆ ಡಯಲ್ ಮಾಡಿದರು. ಕಾಲ್‌ನ  ಇನ್ನೊಂದು ತುದಿಯಲ್ಲಿ ವಂಚಕನು ರಾಹುಲ್‌ ಎಂಬ ಹೆಸರಿನಲ್ಲಿ ನಟಿಸಿದನು ಮತ್ತು ಸಂಪೂರ್ಣವಾಗಿ‌ ಆಕೆಯ ಆನ್ ಲೈನ್ ಮಾಹಿತಿಯನ್ನು ತಾನು ಎಸ್‌ಬಿಐ ನೌಕರನೆಂದು ನಂಬಿಸಿ  ಪಡೆದುಕೊಳ್ಳುತ್ತಾನೆ. ನಂತರ ಅಕೆ ವಂಚಕನಿಂದ ಲಿಂಕ್ ವೊಂದನ್ನು ಸ್ವೀಕರಿಸಿದರು.

ಮಹಿಳೆ ಲಿಂಕ್ ಕ್ಲಿಕ್ ಮಾಡಿದಾಗ, ಮೇಲ್ಭಾಗದಲ್ಲಿ ಎಸ್‌ಬಿಐ ಲೋಗೋ ಇರುವ ಪುಟಕ್ಕೆ ಕರೆದೊಯ್ಯಲಾಯಿತು. ಆಕೆಯ ಎಲ್ಲಾ ಬ್ಯಾಂಕ್ ಮತ್ತು ವಹಿವಾಟಿನ ಮಾಹಿತಿಯನ್ನು ಆನ್‌ಲೈನ್ ಫಾರ್ಮ್‌ನಲ್ಲಿ‌ ಕೇಳಲಾಗಿತ್ತು. ಮಹಿಳೆ ತನ್ನ ಮಾಹಿತಿಯನ್ನು ನೀಡಿದ ತಕ್ಷಣ ವಂಚಕನು ಆರು ರೀತಿಯ ವಹಿವಾಟುಗಳನ್ನು ಬ್ಯಾಕ್-ಟು-ಬ್ಯಾಕ್ ಮಾಡಿದ್ದಾನೆ. ಆಕೆಯ ಖಾತೆಯಿಂದ ಒಟ್ಟು 3.38 ಲಕ್ಷ ರೂ. ಕ್ಷಣಾರ್ಧದಲ್ಲಿ ಡೆಬಿಟ್‌ ಆಗಿತ್ತು.

Advertisement

ನಂತರ, ಮಹಿಳೆ ನೆರೆಹೊರೆಯವರ ಸಹಾಯವನ್ನು ಕೋರಿದರು, ಅವರು ಬ್ಯಾಂಕ್‌ನ ಸಹಾಯವಾಣಿ ಸಂಖ್ಯೆಗೆ ಫೋನ್ ಮಾಡಿ ತಕ್ಷಣ ಕಾರ್ಡ್ ಅನ್ನು ಬ್ಲಾಕ್ ಮಾಡಲು ಸಲಹೆ ನೀಡಿದರು. ಮಹಿಳೆ ತನ್ನ ಶಾಖೆಗೆ ಹೋಗಿ ವಿವಾದದ ಅರ್ಜಿಯನ್ನು ಭರ್ತಿ ಮಾಡಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಸಲಹೆಗಳು:-

– ಆನ್‌ಲೈನ್ KYC ಮಾಡಲು SMS ಮೂಲಕ ಯಾವುದೇ ಬ್ಯಾಂಕ್ ಗ್ರಾಹಕರನ್ನು ಸಂಪರ್ಕಿಸುವುದಿಲ್ಲ ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ನಿಮ್ಮ ಇನ್‌ಬಾಕ್ಸ್‌ನಲ್ಲಿ ನೀವು ಇದೇ ರೀತಿಯ SMS ಸಂದೇಶಗಳು ಅಥವಾ ಇಮೇಲ್‌ಗಳನ್ನು ಸ್ವೀಕರಿಸಿದರೆ, ಅವುಗಳನ್ನು ತಕ್ಷಣವೇ ಅಳಿಸಿ.

– ಫೋನ್ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಅವರಿಗೆ ಎಂದಿಗೂ ನೀಡಬೇಡಿ. ನಿಮ್ಮ ಖಾತೆ ಸಂಖ್ಯೆ, IFSC ಕೋಡ್ ಮತ್ತು ಪಾಸ್‌ವರ್ಡ್ ಅನ್ನು ಒಳಗೊಂಡಿರುವ ನಿಮ್ಮ ಬ್ಯಾಂಕ್ ರುಜುವಾತುಗಳನ್ನು ನೀವು ಮಾತ್ರ ತಿಳಿದಿರಬೇಕು.

– ಯಾವುದೇ ಖಾತೆಯ ವಹಿವಾಟಿಗಾಗಿ ನೀವು ಸ್ವೀಕರಿಸುವ ಯಾವುದೇ OTP ಕೋಡ್‌ಗಳನ್ನು ಬೇರೆಯವರಿಗೆ ನೀಡಬೇಡಿ.

Advertisement

Udayavani is now on Telegram. Click here to join our channel and stay updated with the latest news.

Next